4ನೇ ಟೆಸ್ಟ್: ವಿರಾಟ್ ಕೊಹ್ಲಿ ಸೆಂಚುರಿ; ವೃತ್ತಿ ಜೀವನದ 75ನೇ ಶತಕ; ಸಚಿನ್, ಬ್ರಾಡ್ಮನ್ ನಂತರದ ಸ್ಥಾನ; ಹಲವು ದಾಖಲೆ ಸೃಷ್ಟಿ

ಭಾರತದ ರನ್ ಮೆಷಿನ್ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧ ಶತಕ ಸಿಡಿಸುವ ಮೂಲಕ ಕ್ರಿಕೆಟ್ ಲೋಕದ ಹಲವು ದಾಖಲೆಗಳನ್ನು ಧೂಳಿಪಟ ಮಾಡಿದ್ದಾರೆ.
ವಿರಾಟ್ ಕೊಹ್ಲಿ ಶತಕ
ವಿರಾಟ್ ಕೊಹ್ಲಿ ಶತಕ

ಅಹ್ಮದಾಬಾದ್: ಭಾರತದ ರನ್ ಮೆಷಿನ್ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧ ಶತಕ ಸಿಡಿಸುವ ಮೂಲಕ ಕ್ರಿಕೆಟ್ ಲೋಕದ ಹಲವು ದಾಖಲೆಗಳನ್ನು ಧೂಳಿಪಟ ಮಾಡಿದ್ದಾರೆ.

ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ 4ನೇ ಮತ್ತು ಅಂತಿಮ ಟೆಸ್ಟ್ ಪಂದ್ಯದ 4ನೇ ದಿನದಾಟದಲ್ಲಿ ವಿರಾಟ್ ಕೊಹ್ಲಿ 243 ಎಸೆತಗಳಲ್ಲಿ ಶತಕ ಸಿಡಿಸಿದರು. ಆವರ ಈ ಮ್ಯಾರಥಾನ್ ಇನ್ನಿಂಗ್ಸ್ ಮೂಲಕ ಕೊಹ್ಲಿ ಟೆಸ್ಟ್ ಕ್ರಿಕೆಟ್ ವೃತ್ತಿ ಜೀವನದ 28ನೇ ಶತಕ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನದ 75 ಶತಕ ಸಿಡಿಸಿದರು. ಅಂತೆಯೇ ಇದು ಆಸ್ಟ್ರೇಲಿಯಾ ವಿರುದ್ಧ ಕೊಹ್ಲಿ ಸಿಡಿಸಿದ 16ನೇ ಶತಕವಾಗಿದೆ. ಕೊಹ್ಲಿ ಈ ಶತಕದ ಮೂಲಕ ಹಲವು ದಾಖಲೆಗಳನ್ನು ನಿರ್ಮಾಣ ಮಾಡಿದ್ದು, ಎದುರಾಳಿ ತಂಡವೊಂದರ ವಿರುದ್ಧ ಅತೀ ಹಚ್ಚು ಶತಕ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಕೊಹ್ಲಿ ಇದೀಗ 3 ಮತ್ತು ನಾಲ್ಕನೇ ಸ್ಥಾನಕ್ಕೇರಿದ್ದಾರೆ.

STAT: Most international 100s vs an opponent
20 S Tendulkar vs Aus
19 D Bradman vs Eng
17 S Tendulkar vs SL
16 V Kohli vs Aus *
16 V Kohli vs SL

ಈ ಹಿಂದೆ ಭಾರತದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಇದೇ ಆಸ್ಟ್ರೇಲಿಯಾ ವಿರುದ್ಧ 20 ಶತಕಗಳನ್ನು ಸಿಡಿಸಿದ್ದರೆ, ಆಸಿಸ್ ಕ್ರಿಕೆಟ್ ದಂತಕಥೆ ಇಂಗ್ಲೆಂಡ್ ವಿರುದ್ಧ 19 ಶತಕಗಳನ್ನು ಸಿಡಿಸಿ ಪಟ್ಟಿಯ 2ನೇ ಸ್ಥಾನದಲ್ಲಿದ್ದಾರೆ. ಇನ್ನು ಸಚಿನ್ ತೆಂಡೂಲ್ಕರ್ ಅವರು ಶ್ರೀಲಂಕಾ ವಿರುದ್ಧ 17 ಶತಕ ಸಿಡಿಸಿದ್ದು ಇದು ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಅಂತೆಯೇ ಭಾರತದ ರನ್ ಮೆಷಿನ್ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧ 16 ಶತಕಗಳನ್ನು ಸಿಡಿಸಿದ್ದು, ಶ್ರೀಲಂಕಾ ವಿರುದ್ಧವೂ ಕೊಹ್ಲಿ 16 ಶತಕ ಸಿಡಿಸಿರುವ ದಾಖಲೆ ಮಾಡಿದ್ದಾರೆ.

ನಿಧಾನಗತಿಯ ಶತಕ
ಇನ್ನು ಇಂದಿನ ಪಂದ್ಯದಲ್ಲಿ ಕೊಹ್ಲಿ ತಮ್ಮ ನಿಧಾನಗತಿಯ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದು, ಇಂದಿನ ಪಂದ್ಯದಲ್ಲಿ ಕೊಹ್ಲಿ 243 ಎಸೆತಗಳಲ್ಲಿ ಶತಕ ಸಿಡಿಸಿದರು. ಇದು ಕೊಹ್ಲಿ ವೃತ್ತಿ ಜೀವನದ 2ನೇ ನಿಧಾನಗತಿಯ ಶತಕವಾಗಿದೆ. ಇದಕ್ಕೂ ಮೊದಲು ಕೊಹ್ಲಿ 2012ರಲ್ಲಿ ಇಂಗ್ಲೆಂಡ್ ವಿರುದ್ಧ ನಾಗ್ಪುರದಲ್ಲಿ 289 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಇದು ಕೊಹ್ಲಿ ಟೆಸ್ಟ್ ಕ್ರಿಕೆಟ್ ವೃತ್ತಿ ಜೀವನದ ನಿಧಾನಗತಿಯ ಶತಕವಾಗಿದೆ. ಅಂತೆಯೇ 2018ರಲ್ಲಿ ಪರ್ತ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ 214 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಇದು ಕೊಹ್ಲಿಯ ಮೂರನೇ ನಿಧಾನಗತಿಯ ಶತಕವಾಗಿದೆ.

STAT: Slowest Test 100s for Kohli by balls faced
289 vs Eng Nagpur 2012
241 vs Aus Ahmedabad 2023 *
214 vs Aus Perth 2018
199 vs Aus Adelaide 2012
199 vs Aus Chennai 2013

ಶತಕದಿಂದ ಶತಕಕ್ಕೆ ಸುದೀರ್ಘ ಅಂತರ
ಇನ್ನು ಕೊಹ್ಲಿಯ ಇಂದಿನ ಶತಕ ಸುದೀರ್ಘ 41 ಇನ್ನಿಂಗ್ಸ್ ಗಳ ಅಂತರದಲ್ಲಿ ಬಂದಿದ್ದು, ಕೊಹ್ಲಿ ತಮ್ಮ 28ನೇ ಟೆಸ್ಟ್ ಶತಕಕ್ಕಾಗಿ ಬರೊಬ್ಬರಿ 41 ಇನ್ನಿಂಗ್ಸ್ ಗಳನ್ನು ತೆಗೆದುಕೊಂಡಿದ್ದಾರೆ. ಅಂತೆಯೇ ಕೊಹ್ಲಿ ತಮ್ಮ 12 ಶತಕಕ್ಕಾಗಿ 11 ಇನ್ನಿಂಗ್ಸ್ ಗಳನ್ನು ತೆಗೆದುಕೊಂಡಿದ್ದರು. ಇದಾದ ಬಳಿಕ ಅತ್ಯಂತ ಸುದೀರ್ಘ ಇನ್ನಿಂಗ್ಸ್ ಗಳ ಅಂತರದಲ್ಲಿ ಕೊಹ್ಲಿ ಶತಕ ಸಿಡಿಸಿದ್ದಾರೆ.

STAT: Most innings bw two Test 100s for Kohli
41 inngs bw 27th & 28th 100s *
11 inngs bw 11th & 12th 100s
10 inngs bw 6th & 7th 100s
10 inngs bw 25th & 26th 100s

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com