WPL 2023: RCB ಗೆ ಸತತ 4ನೇ ಸೋಲು; ನಾಯಕಿ ಸ್ಮೃತಿ ಮಂಧಾನಾ ಸಿಕ್ಕಾಪಟ್ಟೆ ಟ್ರೋಲ್
ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಯುಪಿ ವಾರಿಯರ್ಜ್ 10 ವಿಕೆಟ್‌ಗಳ ಜಯದೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸತತ ನಾಲ್ಕನೇ ಸೋಲನ್ನು ಅನುಭವಿಸಿತು.
ಸ್ಮೃತಿ ಮಂಧಾನಾ ನೇತೃತ್ವದ ಫ್ರಾಂಚೈಸಿ ಹರಾಜಿನಲ್ಲಿ ಆಸ್ಟ್ರೇಲಿಯಾದ ಆಲ್‌ರೌಂಡರ್ ಎಲಿಸ್ ಪೆರ್ರಿ ಅವರಂತಹ ಕೆಲವು ಸ್ಫೋಟಕ ಬ್ಯಾಟರ್ ಗಳನ್ನು ಖರೀದಿಸಿದ್ದರು. ಆದರೆ ಅವರು ಬ್ಯಾಟಿಂಗ್ ನಲ್ಲಿ ವಿಫಲರಾಗಿದ್ದಾರೆ. ಅಲ್ಲದೆ ತಂಡ ಸಹ ಟೂರ್ನಿಯಲ್ಲಿ ಸತತ ನಾಲ್ಕು ಸೋಲು ಕಂಡಿರುವುದಕ್ಕೆ ಅಭಿಮಾನಿಗಳು ನಿರಾಶೆಗೊಂಡಿದ್ದು ನಾಯಕಿಯನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ.
ವಿರಾಟ್ ಕೊಹ್ಲಿ ವಿಶ್ವ ಕ್ರಿಕೆಟ್‌ನಲ್ಲಿ ಅಪ್ರತಿಮ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಆದರೆ ಐಪಿಎಲ್‌ನಲ್ಲಿ ಅವರ ನಾಯಕತ್ವದ ಕೌಶಲ್ಯವು ನಿಜವಾಗಿಯೂ ಪಿಚ್‌ನಲ್ಲಿ ಪ್ರಯೋಜನ ನೀಡಲಿಲ್ಲ. ಶುಕ್ರವಾರ ಇಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ನಾಯಕಿ ಅಲಿಸ್ಸಾ ಹೀಲಿ 47 ಎಸೆತಗಳಲ್ಲಿ ಔಟಾಗದೆ 96 ರನ್ ಗಳಿಸುವುದರೊಂದಿಗೆ ಯುಪಿ ವಾರಿಯರ್ಜ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 10 ವಿಕೆಟ್‌ಗಳಿಂದ ಸೋಲಿಸಿದರು.
ಸೋಷಿಯಲ್ ಮೀಡಿಯಾದಲ್ಲಿ ನೆಟಿಜನ್‌ಗಳು ತಮ್ಮ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಂತೆ ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್ ವೈರಲ್ ಆಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ