ಐಪಿಎಲ್ 2023: RCB ತಂಡದಲ್ಲಿ ಮಹತ್ತರ ಬದಲಾವಣೆ, ಗಾಯಾಳು ಡೇವಿಡ್ ವಿಲ್ಲೀ ಔಟ್, ಕೇದರ್ ಜಾದವ್ ಇನ್

ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಆಟಗಾರರ ಪಟ್ಟಿಯಲ್ಲಿ ಮಹತ್ತರ ಬದಲಾವಣೆ ಮಾಡಿದ್ದು, ಗಾಯಾಳು ಡೇವಿಡ್ ವಿಲ್ಲೀ ಅವರನ್ನು ಟೂರ್ನಿಯಿಂದಲೇ ಕೈ ಬಿಟ್ಟಿದೆ.
ಡೇವಿಡ್ ವಿಲ್ಲೀ ಔಟ್-ಕೇದರ್ ಜಾದವ್ ಇನ್
ಡೇವಿಡ್ ವಿಲ್ಲೀ ಔಟ್-ಕೇದರ್ ಜಾದವ್ ಇನ್

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಆಟಗಾರರ ಪಟ್ಟಿಯಲ್ಲಿ ಮಹತ್ತರ ಬದಲಾವಣೆ ಮಾಡಿದ್ದು, ಗಾಯಾಳು ಡೇವಿಡ್ ವಿಲ್ಲೀ ಅವರನ್ನು ಟೂರ್ನಿಯಿಂದಲೇ ಕೈ ಬಿಟ್ಟಿದೆ.

ಹೌದು..  ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಗಾಯಾಳುಗಳ ಸಮಸ್ಯೆ ಇನ್ನಿಲ್ಲದಂತೆ ಕಾಡಿದೆ. ಇದೀಗ ಟೂರ್ನಿ ಮಧ್ಯದಲ್ಲಿ ಇಂಗ್ಲೆಂಡ್‌ ಆಲ್‌ರೌಂಡರ್‌ ಡೇವಿಡ್‌ ವಿಲ್ಲೀ ಸೇವೆ ಕಳೆದುಕೊಳ್ಳುವಂತ್ತಾಗಿದ್ದು, ಅವರ ಜಾಗದಲ್ಲಿ ಆಲ್‌ರೌಂಡರ್‌ ಕೇದಾರ್‌ ಜಾಧವ್‌ ಅವರೊಟ್ಟಿಗೆ ಒಪ್ಪಂದ ಮಾಡಿಕೊಂಡಿರುವುದಾಗಿ ಫ್ರಾಂಚೈಸಿಯು ಸೋಮವಾರ (ಮೇ 1) ಅಧಿಕೃತ ಘೋಷಣೆ ಮಾಡಿದೆ.

ಐಪಿಎಲ್‌ 2023 ಟೂರ್ನಿಯಲ್ಲಿ ಒಟ್ಟಾರೆ 4 ಪಂದ್ಯಗಳನ್ನು ಆಡಿರುವ ಡೇವಿಡ್‌ ವಿಲ್ಲೀ 3 ವಿಕೆಟ್‌ಗಳನ್ನು ಮಾತ್ರ ಪಡೆದಿದ್ದಾರೆ. ಅವರ ಗಾಯದ ಸಮಸ್ಯೆ ಯಾವ ರೀತಿಯದ್ದು ಎಂಬ ಬಗ್ಗೆ ಫ್ರಾಂಚೈಸಿ ಆರಂಭದಲ್ಲಿ ಸ್ಪಷ್ಟ ಮಾಹಿತಿ ನೀಡಿಲ್ಲ. ಹೀಗಾಗಿ ಅವರನ್ನು ಟೂರ್ನಿಯ ಉಳಿದ ಪಂದ್ಯಗಳಿಂದ ಕೈಬಿಟ್ಟು ಹೊಸ ಆಟಗಾರನ ಜೊತೆಗೆ ತುರ್ತಾಗಿ ಒಪ್ಪಂದ ಮಾಡಿಕೊಂಡಿದೆ. ಡೇವಿಡ್ ವಿಲ್ಲಿ ಪಾದದ ಗಾಯದ ಸಮಸ್ಯೆ ಎದುರಿಸಿದ್ದಾರೆ ಎಂಬುದು ತಿಳಿದುಬಂದಿದೆ.

ಆರ್‌ಸಿಬಿ ತಂಡದಲ್ಲಿ ಆಡಿದ್ದ ಕೇದಾರ್ ಜಾಧವ್
ಅಂದಹಾಗೆ ಬಲಗೈ ಬ್ಯಾಟರ್‌ ಕೇದಾರ್‌ ಜಾಧವ್‌ ಆರ್‌ಸಿಬಿ ತಂಡಕ್ಕೆ ಹೊಸಬರೇನಲ್ಲ. 2010ರಲ್ಲಿ ಐಪಿಎಲ್ ಡೆಲ್ಲಿ ಡೇರ್‌ಡೆವಿಲ್ಸ್‌ನೊಂದಿಗೆ ಐಪಿಎಲ್‌ ವೃತ್ತಿಬದುಕು ಆರಂಭಿಸಿದ ಕೇದಾರ್‌ ಜಾಧವ್‌ ಮೊದಲ ಪಂದ್ಯ ಆಡಿದ್ದು ಆರ್‌ಸಿಬಿ ವಿರುದ್ಧವೇ. ಪದಾರ್ಪಣೆಯ ಪಂದ್ಯದಲ್ಲೇ ಅವರು ಫಿಫ್ಟಿ ಬಾರಿಸಿ ವಿಶೇಷ ದಾಖಲೆ ಪಟ್ಟಿ ಸೇರಿದ್ದರು. ಐಪಿಎಲ್‌ನಲ್ಲಿ ಈವರೆಗೆ ಒಟ್ಟು 93 ಪಂದ್ಯಗಳನ್ನು ಆಡಿರುವ ಮಹಾರಾಷ್ಟ್ರದ ಆಟಗಾರ ಕೇದಾರ್‌ ಜಾಧವ್‌ ಒಟ್ಟಾರೆ 1196 ರನ್‌ಗಳನ್ನು ಬಾರಿಸಿದ್ದಾರೆ. 

2016 ಮತ್ತು 17ರ ಆವೃತ್ತಿಗಳಲ್ಲಿ ಅವರು ಆರ್‌ಸಿಬಿ ಪರ ಒಟ್ಟಾರೆ 17 ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದಾರೆ. 2021ರಲ್ಲಿ ಕೊನೇ ಬಾರಿ ಐಪಿಎಲ್‌ ಅಖಾಡದಲ್ಲಿ ಕಾಣಿಸಿಕೊಂಡಿದ್ದ ಕೇದಾರ್‌ ಜಾಧವ್ ಅವರನ್ನು ಆರ್‌ಸಿಬಿ ಇದೀಗ 1 ಕೋಟಿ ರೂ. ಒಪ್ಪಂದದೊಂದಿಗೆ ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com