IPL 2023: ರಾಜಸ್ಥಾನ ರಾಯಲ್ಸ್ ತಂಡಕ್ಕೆ 172 ರನ್ ಗುರಿ ನೀಡಿದ RCB

ಐಪಿಎಲ್ 2023ರಲ್ಲಿ ಉತ್ಸಾಹವು ಉತ್ತುಂಗಕ್ಕೇರಿದೆ. ಕೆಲವು ತಂಡಗಳು ಪ್ಲೇಆಫ್ ರೇಸ್‌ನಿಂದ ಬಹುತೇಕ ಹೊರಗುಳಿದಿದ್ದು, ಕೆಲವು ಇನ್ನೂ ಹೋರಾಟದಲ್ಲಿವೆ.
ಆರ್ ಸಿಬಿ
ಆರ್ ಸಿಬಿ

ನವದೆಹಲಿ: ಐಪಿಎಲ್ 2023ರಲ್ಲಿ ಉತ್ಸಾಹವು ಉತ್ತುಂಗಕ್ಕೇರಿದೆ. ಕೆಲವು ತಂಡಗಳು ಪ್ಲೇಆಫ್ ರೇಸ್‌ನಿಂದ ಬಹುತೇಕ ಹೊರಗುಳಿದಿದ್ದು, ಕೆಲವು ಇನ್ನೂ ಹೋರಾಟದಲ್ಲಿವೆ.

ಇಂದಿನ ಪಂದ್ಯದಲ್ಲಿ ಆರ್‌ಸಿಬಿ ಮತ್ತು ರಾಜಸ್ಥಾನ ತಂಡಗಳು ಪ್ಲೇ ಆಫ್‌ಗಾಗಿ ಸೆಣಸಾಡಲು ಮುಖಾಮುಖಿಯಾಗಿವೆ. ಎರಡೂ ತಂಡಗಳಿಗೆ ಪ್ರತಿಯೊಂದು ಪಂದ್ಯವೂ ಮಹತ್ವದ್ದಾಗಿದೆ.

ಆರ್‌ಸಿಬಿ ಇನ್ನೂ 3 ಪಂದ್ಯಗಳನ್ನು ಆಡಬೇಕಿದ್ದು, ಒಂದು ಪಂದ್ಯ ಕೂಡ ಕೈ ತಪ್ಪಿದರೆ ಪ್ಲೇಆಫ್‌ನ ಬಾಗಿಲು ಮುಚ್ಚಲಿದೆ. ಅದೇ ಸಮಯದಲ್ಲಿ, ರಾಜಸ್ಥಾನವು 2 ಪಂದ್ಯಗಳನ್ನು ಹೊಂದಿದೆ ಮತ್ತು ಪ್ಲೇ ಆಫ್‌ಗೆ ಪ್ರವೇಶಿಸಲು, ತಂಡವು ಎರಡೂ ಪಂದ್ಯಗಳ ಜೊತೆಗೆ ಇತರ ತಂಡಗಳ ಫಲಿತಾಂಶಗಳನ್ನು ಅವಲಂಬಿಸಬೇಕಾಗುತ್ತದೆ.

ರಾಜಸ್ಥಾನದ ಕೆಎಂ ಆಸಿಫ್ ವಿರಾಟ್ ಕೊಹ್ಲಿ ವಿಕೆಟ್ ಪಡೆದರು. ನಾಯಕ ಫಾಫ್ ಡು ಪ್ಲೆಸಿಸ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಅರ್ಧಶತಕ ಗಳಿಸಿದರು. ಅಂತಿಮವಾಗಿ 11 ಎಸೆತಗಳಲ್ಲಿ 29 ರನ್ ಗಳಿಸಿದ ಅನುಜ್ ರಾವತ್ ಅವರ ಇನಿಂಗ್ಸ್ ಆಧಾರದ ಮೇಲೆ ಬೆಂಗಳೂರು ತಂಡ ರಾಜಸ್ಥಾನಕ್ಕೆ 172 ರನ್ ಗಳ ಗೆಲುವಿನ ಗುರಿ ನೀಡಿದೆ. ಇದಕ್ಕೆ ಪ್ರತಿಯಾಗಿ ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್ ಖಾತೆ ತೆರೆಯಲೂ ಸಾಧ್ಯವಾಗಲಿಲ್ಲ. ಸಂಜು ಸ್ಯಾಮ್ಸನ್ ನಾಲ್ಕು ರನ್ ಗಳಿಸಿ ಔಟಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com