ಫಾಫ್ ಡುಪ್ಲೆಸಿಸ್
ಫಾಫ್ ಡುಪ್ಲೆಸಿಸ್

ಐಪಿಎಲ್ ನಲ್ಲಿ 4 ಸಾವಿರ ರನ್ ಗಳಿಸಿದ 4ನೇ ವಿದೇಶಿ ಆಟಗಾರ ಡುಪ್ಲೆಸಿಸ್

ಐಪಿಎಲ್ ನಲ್ಲಿ ಆರ್ ಸಿಬಿ ಆಟಗಾರ ಫಾಫ್ ಡುಪ್ಲೆಸಿಸ್ ಮಹತ್ವದ ಸಾಧನೆ ಮಾಡಿದ್ದು, ಮಿಲಿಯನ್ ಡಾಲರ್ ಟೂರ್ನಿಯಲ್ಲಿ 4 ಸಾವಿರ ರನ್ ಗಳಿಸಿದ ಸಾಧನೆ ಮಾಡಿದ್ದಾರೆ.

ಜೈಪುರ: ಐಪಿಎಲ್ ನಲ್ಲಿ ಆರ್ ಸಿಬಿ ಆಟಗಾರ ಫಾಫ್ ಡುಪ್ಲೆಸಿಸ್ ಮಹತ್ವದ ಸಾಧನೆ ಮಾಡಿದ್ದು, ಮಿಲಿಯನ್ ಡಾಲರ್ ಟೂರ್ನಿಯಲ್ಲಿ 4 ಸಾವಿರ ರನ್ ಗಳಿಸಿದ ಸಾಧನೆ ಮಾಡಿದ್ದಾರೆ.

ಇಂದು ಜೈಪುರದಲ್ಲಿ ನಡೆಯುತ್ತಿರುವ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್ ವೇಳೆ 44 ಎಸೆತಗಳಲ್ಲಿ 55 ರನ್ ಗಳಿಸಿದ್ದು ಆ ಮೂಲಕ ಐಪಿಎಲ್ ಟೂರ್ನಿಯಲ್ಲಿ 4000 ರನ್ ಗಳಿಕೆ ಸಾಧನೆ ಮಾಡಿದ್ದಾರೆ. ಆ ಮೂಲಕ ಐಪಿಎಲ್ ಟೂರ್ನಿಯಲ್ಲಿ 4 ಸಾವಿರ ರನ್ ಗಳಿಸಿದ 4ನೇ ವಿದೇಶಿ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

ಇದಕ್ಕೂ ಮೊದಲು ಡೇವಿಡ್ ವಾರ್ನರ್ (6265 ರನ್), ಎಬಿಡಿವಿಲಿಯರ್ಸ್ (5162 ರನ್) ಮತ್ತು ಕ್ರಿಸ್ ಗೇಯ್ಲ್  (4965 ರನ್) ಈ ಸಾಧನೆ ಮಾಡಿದ್ದಾರೆ.

Overseas players with 4000-plus runs in the IPL
6265 - David Warner
5162 - AB de Villiers
4965 - Chris Gayle
4008* - Faf du Plessis

Related Stories

No stories found.

Advertisement

X
Kannada Prabha
www.kannadaprabha.com