ಐಸಿಸಿ ಏಕದಿನ ವಿಶ್ವಕಪ್: ಜಹೀರ್ ಖಾನ್, ಶ್ರೀನಾಥ್ ದಾಖಲೆ ಮುರಿದು, ಹೊಸ ಇತಿಹಾಸ ಬರೆದ ಮೊಹಮ್ಮದ್ ಶಮಿ!

ವಾಂಖೆಡೆ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಐಸಿಸಿ ವಿಶ್ವಕಪ್ ಕ್ರಿಕೆಟ್ ಟೂರ್ನಿಯ 33ನೇ ಪಂದ್ಯದಲ್ಲಿ ವೇಗಿಗಳಾದ ಮೊಹಮ್ಮದ್ ಶಮಿ ಹಾಗೂ ಸಿರಾಜ್ ಶ್ರೀಲಂಕಾ ತಂಡವನ್ನು ಧೂಳಿಪಟ ಮಾಡಿದ್ದು, ಭಾರತ ಸೆಮಿಫೈನಲ್ ಪ್ರವೇಶಿಸುವಲ್ಲಿ ಪ್ರಮುಖ ಕೊಡುಗೆ ನೀಡಿದ್ದಾರೆ.
ಮೊಹಮ್ಮದ್ ಶಮಿ
ಮೊಹಮ್ಮದ್ ಶಮಿ

ಮುಂಬೈ: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಐಸಿಸಿ ವಿಶ್ವಕಪ್ ಕ್ರಿಕೆಟ್ ಟೂರ್ನಿಯ 33ನೇ ಪಂದ್ಯದಲ್ಲಿ ವೇಗಿಗಳಾದ ಮೊಹಮ್ಮದ್ ಶಮಿ ಹಾಗೂ ಸಿರಾಜ್ ಶ್ರೀಲಂಕಾ ತಂಡವನ್ನು ಧೂಳಿಪಟ ಮಾಡಿದ್ದು, ಭಾರತ ಸೆಮಿಫೈನಲ್ ಪ್ರವೇಶಿಸುವಲ್ಲಿ ಪ್ರಮುಖ ಕೊಡುಗೆ ನೀಡಿದ್ದಾರೆ.

ಹೌದು, ಮೊದಲು ಬ್ಯಾಟಿಂಗ್ ಮಾಡಿದ ಭಾರತ ನೀಡಿದ 358 ರನ್ ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಲಂಕಾಪಡೆಯ ಬ್ಯಾಟರ್ ಗಳಿಗೆ ಭಾರತದ ವೇಗಿಗಳಾದ ಮೊಹಮ್ಮದ್ ಶಮಿ ಹಾಗೂ ಮೊಹಮ್ಮದ್ ಸಿರಾಜ್ ಅಕ್ಷರಶ: ಸಿಂಹಸ್ವಪ್ನರಾದರು.ಬರೊಬ್ಬರಿ 303 ರನ್ ಗಳ ಅಂತರದಿಂದ ಭಾರತ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದರು. 

ಆರಂಭದಲ್ಲಿಯೇ ಪ್ರಮುಖ ಮೂರು ವಿಕೆಟ್ ಗಳನ್ನು ಕಬಳಿಸುವ ಮೂಲಕ ಮೊಹಮ್ಮದ್ ಸಿರಾಜ್ ಲಂಕಾಪಡೆಯನ್ನು ಬೆದರಿಸಿ, ಭಾರತಕ್ಕೆ ಸುಗಮ ಗೆಲುವಿನ ಹಾದಿಯನ್ನು ನಿರ್ಮಿಸಿದರು. ಲಂಕಾದ ಆರಂಭಿಕ ಬ್ಯಾಟ್ಸ್ ಮನ್ ಗಳಾದ ಕರುಣಾರತ್ನೆ, ನಾಯಕ ಕುಶಾಲ್ ಮೆಂದಿಸ್, ಸದೀರಾ ಸಮರಾವಿಕ್ರಮ ಅವರ ವಿಕೆಟ್ ಉರುಳಿಸಿದ ಸಿರಾಜ್, ಭಾರತೀಯ ಅಭಿಮಾನಿಗಳನ್ನು ಹರ್ಷೋದ್ಘಾರದಲ್ಲಿ ಮೊಳಗಿಸಿದರು.

ನಂತರ ತನ್ನ ಅದ್ಬುತ ಬೌಲಿಂಗ್ ಪ್ರದರ್ಶಿಸಿದ ಮೊಹಮ್ಮದ್ ಸಿರಾಜ್, ಪ್ರಮುಖ ಐದು ವಿಕೆಟ್ ಗಳನ್ನು ಕಬಳಿಸುವ ಮೂಲಕ ಏಕದಿನ ವಿಶ್ವಕಪ್ ನಲ್ಲಿ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದರು. ಹೌದು. ಚರಿತ್ ಅಸಲಂಕಾ, ಏಂಜೆಲೊ ಮ್ಯಾಥ್ಯೋಸ್, ದುಶಾನ್ ಹೆಮಂತಾ, ಚಾಮೀರಾ ಮತ್ತು ಕಸುನ್ ರಜಿತಾ ಅವರ ವಿಕೆಟ್ ಕಬಳಿಸುವ ಮೂಲಕ ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಟು 45  ವಿಕೆಟ್ ಪಡೆದ ಭಾರತೀಯ ಆಟಗಾರ ಎಂಬ ಖ್ಯಾತಿಗೆ ಪಾತ್ರರಾದರು. ಈ ಮೂಲಕ  ಜಹಿರ್ ಖಾನ್ ಮತ್ತು ಜಾವಗಲ್ ಶ್ರೀನಾಥ್ ಅವರ ದಾಖಲೆಯನ್ನು ಮುರಿದರು.ಏಕದಿನ ವಿಶ್ವಕಪ್ ನಲ್ಲಿ ಜಹೀರ್ ಖಾನ್ ಮತ್ತು ಶ್ರೀನಾಥ್ 44 ವಿಕೆಟ್ ಪಡೆದಿದ್ದಾರೆ. 

ಗ್ಲೆನ್ ಮೆಕ್‌ಗ್ರಾತ್ 71 ರನ್‌ಗಳೊಂದಿಗೆ ಅಗ್ರಸ್ಥಾನದಲ್ಲಿರುವ ODI ವಿಶ್ವ ಕಪ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಪೈಕಿ ಶಮಿ ಅಗ್ರ 10 ರಲ್ಲಿ ಪ್ರವೇಶಿಸಿದರು. ಅಲ್ಲದೇ, ಏಕದಿನ ವಿಶ್ವಕಪ್ ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಟಾಪ್ 10ರಲ್ಲಿ ಸ್ಥಾನ ಪಡೆದರು. ಇದರಲ್ಲಿ ಮಿಚೆಲ್ ಸ್ಟಾರ್ಕ್ ಮತ್ತು ಟ್ರೆಂಟ್ ಬೌಲ್ಟ್ ಕ್ರಮವಾಗಿ 56 ಮತ್ತು 49 ವಿಕೆಟ್‌ಗಳೊಂದಿಗೆ ಶಮಿಗಿಂತ ಮೇಲಿನ ಸ್ಥಾನದಲ್ಲಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com