
ಮುಂಬೈ: ಮುಂಬೈ ನಲ್ಲಿ ನಡೆದ ಒಡಿಐ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಎದುರಾಳಿ ತಂಡ ಶ್ರೀಲಂಕಾ ವಿರುದ್ಧ ಬರೊಬ್ಬರಿ 302 ರನ್ ಗಳ ಜಯ ಗಳಿಸಿದೆ.
ಈ ಗೆಲುವಿನ ಮೂಲಕ ಟೂರ್ನಿಯಲ್ಲಿ ಭಾರತ ತಂಡ ಸೆಮಿಫೈನಲ್ಸ್ ಪ್ರವೇಶಿಸಿದೆ. ಟಾಸ್ ನಂತರ ಶ್ರೀಲಂಕಾ, ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ನಿಗದಿತ 50 ಓವರ್ ಗಳಲ್ಲಿ ಭಾರತ ಕ್ರಿಕೆಟ್ ತಂಡ 7 ವಿಕೆಟ್ ನಷ್ಟಕ್ಕೆ 357 ರನ್ ಗಳಿಸಿತು.
ರನ್ ಚೇಸಿಂಗ್ ಗೆ ಇಳಿದ ಲಂಕಾ ತಂಡಕ್ಕೆ ಭಾರತದ ಬೌಲರ್ ಗಳಾದ ಮೊಹಮ್ಮದ್ ಸಿರಾ, ಮೊಹಮ್ಮದ್ ಶಮಿ ಮಾರಕವಾದರು.
ಶ್ರೀಲಂಕಾ ತಂಡದ ಬ್ಯಾಟ್ಸ್ಮನ್ ಗಳು ಭಾರತದ ಬೌಲರ್ ಗಳನ್ನು ಎದುರಿಸಲು ಸಾಧ್ಯವಾಗದೇ ಕೇವಲ 19.4 ಓವರ್ ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 55 ರನ್ ಗಳಿಗೆ ಸೋಲೊಪ್ಪಿಕೊಂಡಿತು.
ಮೊಹಮ್ಮದ್ ಸಿರಾಜ್ 16 ರನ್ ನೀಡಿ 3 ವಿಕೆಟ್ ಪಡೆದರೆ, ಮೊಹಮ್ಮದ್ ಶಮಿ 5 ವಿಕೆಟ್ ಪಡೆದು 18 ರನ್ ನೀಡಿ ಅತ್ಯುತ್ತಮ ಬೌಲರ್ ಗಳೆನಿಸಿದರು. ಎಲ್ಲಾ 7 ಪಂದ್ಯಗಳಲ್ಲೂ ಜಯಗಳಿಸಿರುವ ಭಾರತ 14 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾ ತಂಡ ಇದೆ.
Advertisement