ICC Cricket World Cup 2023: ಶ್ರೀಲಂಕಾ ವಿರುದ್ಧ ನ್ಯೂಜಿಲೆಂಡ್ ಗೆಲುವು, ಪಾಕ್ ಸೆಮೀಸ್ ಕನಸಿಗೆ ಪವಾಡವೇ ನಡೆಯಬೇಕು!

ಐಸಿಸಿ ಕ್ರಿಕೆಟ್ ವಿಶ್ವಕರ್ ಟೂರ್ನಿ ನಿರ್ಣಾಯಕ ಹಂತ ತಲುಪಿದ್ದು, ನಿನ್ನೆ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಭರ್ಜರಿ ಜಯ ದಾಖಲಿಸುವುದರೊಂದಿಗೆ ಪಾಕಿಸ್ತಾನದ ಸೆಮಿ ಫೈನಲ್ ಕನಸು ಬಹುತೇಕ ಕಮರಿ ಹೋಗಿದ್ದು, ಆ ತಂಡ ಸೆಮೀಸ್ ಗೆ ಅರ್ಹತೆ ಪಡೆಯಲು ಪವಾಡವೇ ನಡೆಯಬೇಕಿದೆ.
ಪಾಕಿಸ್ತಾನದ ಸೆಮೀಸ್ ರೇಸ್
ಪಾಕಿಸ್ತಾನದ ಸೆಮೀಸ್ ರೇಸ್

ಬೆಂಗಳೂರು: ಐಸಿಸಿ ಕ್ರಿಕೆಟ್ ವಿಶ್ವಕರ್ ಟೂರ್ನಿ ನಿರ್ಣಾಯಕ ಹಂತ ತಲುಪಿದ್ದು, ನಿನ್ನೆ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಭರ್ಜರಿ ಜಯ ದಾಖಲಿಸುವುದರೊಂದಿಗೆ ಪಾಕಿಸ್ತಾನದ ಸೆಮಿ ಫೈನಲ್ ಕನಸು ಬಹುತೇಕ ಕಮರಿ ಹೋಗಿದ್ದು, ಆ ತಂಡ ಸೆಮೀಸ್ ಗೆ ಅರ್ಹತೆ ಪಡೆಯಲು ಪವಾಡವೇ ನಡೆಯಬೇಕಿದೆ.

ಹೌದು.. ನಿನ್ನೆ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಶ್ರೀಲಂಕಾ ನೀಡಿದ 172 ರನ್ ಗಳ ಸಾಧಾರಣ ಗುರಿಯನ್ನು ಕೇವಲ 23.2ಓವರ್ ನಲ್ಲಿಯೇ ಪೂರ್ಣಗೊಳಿಸಿದ್ದು, ಆ ಮೂಲಕ ಗೆಲುವು ಸಾಧಿಸಿದ್ದು ಮಾತ್ರವಲ್ಲದೇ ತನ್ನ ನೆಟ್ ರನ್ ರೇಟ್ ಅನ್ನೂ ಕೂಡ ಉತ್ತಮಗೊಳಿಸಿಕೊಂಡಿದೆ. ಇದು ಪಾಕಿಸ್ತಾನ ಸೆಮೀಸ್ ಹಾದಿಯನ್ನು ದುರ್ಗಮಗೊಳಿಸಿದೆ.

ಹಾಗಾದರೆ ಪಾಕಿಸ್ತಾನ ಸೆಮೀಸ್‌ ಭವಿಷ್ಯವೇನು?
ಕಿವೀಸ್‌ ಗೆಲುವಿನ ಬಳಿಕ, ಪಾಕ್‌ ಸೆಮೀಸ್‌ ಹಾದಿ ದುರ್ಗಮವಾಗಿರುವುದು ಸತ್ಯ. ಆದರೆ ಅಸಾಧ್ಯವಂತೂ ಅಲ್ಲ. ಹೀಗಾಗಿ ಇಂಡೋ-ಪಾಕ್‌ ಸೆಮಿಫೈನಲ್‌ ನಡೆಯಲು ಬಹುತೇಕ ಪವಾಡವೇ ನಡೆಯಬೇಕಾಗಿದೆ. ಬಾಬರ್ ಬಳಗವು ಇದೇ ಶನಿವಾರದಂದು ವಿಶ್ವಕಪ್‌ನ ತಮ್ಮ ಅಂತಿಮ ಲೀಗ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಒಂದು ವೇಳೆ ಕೊನೆಯ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಶ್ರೀಲಂಕಾ ಗೆದ್ದಿದ್ದರೆ, ಪಾಕಿಸ್ತಾನದ ಅರ್ಹತೆಗೆ ಸಾಧಾರಣ ಗೆಲುವು ಸಾಕಾಗುತ್ತಿತ್ತು. ಅಲ್ಲದೆ ನ್ಯೂಜಿಲ್ಯಾಂಡ್ ತಂಡವು ತನ್ನ ಗೆಲುವಿಗೆ 40 ಓವರ್‌ಗಳನ್ನು ತೆಗೆದುಕೊಂಡಿದ್ದರೂ ಆಗ ಪಾಕಿಸ್ತಾನವು ಇಂಗ್ಲೆಂಡ್ ವಿರುದ್ಧ ಸುಮಾರು 183 ರನ್‌ಗಳ ಅಂತರದ ಜಯ ಗಳಿಸಿದರೆ ಆಗ ಪಾಕಿಸ್ತಾನದ ನೆಟ್ ರನ್ ರೇಟ್ ನ್ಯೂಜಿಲೆಂಡ್ ಗಿಂತ ಉತ್ತಮವಾಗಿರುತ್ತಿತ್ತು. ಆಗ ನೆಟ್ ರನ್ ರೇಟ್ ಆಧಾರ ಮೇಲೆ ಪಾಕಿಸ್ತಾನ ಸೆಮೀಸ್ ಗೆ ಪ್ರವೇಶ ಪಡೆಯುತ್ತಿತ್ತು. ಆದರೆ, ಅದು ಸಾಧ್ಯವಾಗಿಲ್ಲ.

ಸದ್ಯ ನ್ಯೂಜಿಲ್ಯಾಂಡ್ ತಂಡವು ಲಂಕಾ ವಿರುದ್ಧ 30 ಓವರ್‌ಗಳ ಒಳಗೆ ಚೇಸಿಂಗ್ ಪೂರ್ಣಗೊಳಿಸಿರುವುದರಿಂದ, ಇದೀಗ ಪಾಕಿಸ್ತಾನವು ಇಂಗ್ಲೆಂಡ್‌ ವಿರುದ್ಧ ಬೃಹತ್ ಅಂತರದಿಂದ ಗೆಲ್ಲಲೇಬೇಕಾಗಿದೆ. ಒಂದು ವೇಳೆ ಪಾಕಿಸ್ತಾನವು ಮೊದಲು ಬ್ಯಾಟ್ ಮಾಡಿ 300 ರನ್ ಗಳಿಸಿದರೆ ಆಗ ಅದು ಇಂಗ್ಲೆಂಡ್ ತಂಡವನ್ನು ಕೇವಲ 13 ರನ್‌ಗಳಿಗೆ ನಿರ್ಬಂಧಿಸಬೇಕಾಗುತ್ತದೆ. ಅಂದರೆ ಬಾಬರ್‌ ಬಳಗಕ್ಕೆ ಕನಿಷ್ಠ 287 ರನ್‌ ಗೂ ಅಧಿಕ ಅಂತರದ ಗೆಲುವು ಬೇಕೇಬೇಕು. ಒಂದು ವೇಳೆ ಪಾಕಿಸ್ತಾನ ಮೊದಲು ಬೌಲಿಂಗ್ ಮಾಡಿ, ಇಂಗ್ಲೆಂಡ್ ತಂಡವನ್ನು 100 ರನ್‌ಗಳಿಗೆ ಕಟ್ಟಿಹಾಕಿದರೆ, ಪಾಕ್‌ ತಂಡವು ಕೇವಲ 2.5 ಓವರ್‌ ಒಳಗೆ ಈ ಮೊತ್ತವನ್ನು ಚೇಸ್ ಮಾಡಿ ಗೆಲ್ಲಬೇಕು. ಅಂದರೆ ಕೇವಲ 17 ಎಸೆತಗಳಲ್ಲಿ 100ರನ್ ಗುರಿ ತಲುಪಬೇಕು. ಅಂದರೆ ಪಾಕಿಸ್ತಾನ ತಾನು ಎದುರಿಸುವ ಪ್ರತೀಯೊಂದು ಎಸೆತವನ್ನೂ ಸಿಕ್ಸರ್ ಗೆ ಅಟ್ಟಬೇಕು. ಇದು ಸಾಧ್ಯವಾಗಬೇಕಾದರೆ ಬಹುತೇಕ ಪವಾಡವೇ ನಡೆಯಬೇಕು.

ಹಾಗಾದರೆ ಸೆಮಿಫೈನಲ್‌ನಲ್ಲಿ ಭಾರತದ ಎದುರಾಳಿ ಯಾರು?
ಸದ್ಯದ ಲೆಕ್ಕಾಚಾರದ ಪ್ರಕಾರ ನ್ಯೂಜಿಲ್ಯಾಂಡ್ ತಂಡವು ಏಕದಿನ ವಿಶ್ವಕಪ್‌ನ ಸೆಮಿಫೈನಲ್‌ಗೆ ಹೋಗುತ್ತಿದೆ. +0.743 ನೆಟ್‌ ರನ್‌ ರೇಟ್‌ ಹೊಂದಿರುವ ತಂಡವು ಪಾಕಿಸ್ತಾನಕ್ಕಿಂತ (+0.036) ಮುಂದಿದೆ. ನವೆಂಬರ್‌ 15ರ ಬುಧವಾರ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಐಸಿಸಿ ವಿಶ್ವಕಪ್‌ನ ಮೊದಲ ಸೆಮಿಫೈನಲ್‌ನಲ್ಲಿ ರೋಹಿತ್ ಶರ್ಮಾ ಬಳಗವು ಕಿವೀಸ್ ತಂಡವನ್ನು ಎದುರಿಸುವುದು ಬಹುತೇಕ ಖಚಿತವಾಗಿದೆ.‌

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com