ವಿಶ್ವಕಪ್: ತವರಿಗೆ ಮರಳಿದ ಶ್ರೀಲಂಕಾ ತಂಡ, ನೀರಸ ಪ್ರದರ್ಶನಕ್ಕೆ 'ಬಾಹ್ಯ ಪಿತೂರಿ' ಕಾರಣ ಎಂದ ಮುಖ್ಯ ಆಯ್ಕೆಗಾರ!

ಐಸಿಸಿ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ನೀರಸ ಪ್ರದರ್ಶನದ ಮೂಲಕ ಟೂರ್ನಿಯಿಂದಲೇ ಹೊರಬಿದ್ದಿರುವ ಶ್ರೀಲಂಕಾ ತಂಡ ತವರಿಗೆ ಮರಳಿದ್ದು, ತಂಡದ ಹೀನಾಯ ಪ್ರದರ್ಶನಕ್ಕೆ ತಂಡದ ಮುಖ್ಯ ಆಯ್ಕೆಗಾರ 'ಬಾಹ್ಯ ಪಿತೂರಿ' ಕಾರಣ ಎಂದು ದೂರಿದ್ದಾರೆ.
ತವರಿಗೆ ಮರಳಿದ ಶ್ರೀಲಂಕಾ ತಂಡ
ತವರಿಗೆ ಮರಳಿದ ಶ್ರೀಲಂಕಾ ತಂಡ

ಕೊಲಂಬೋ: ಐಸಿಸಿ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ನೀರಸ ಪ್ರದರ್ಶನದ ಮೂಲಕ ಟೂರ್ನಿಯಿಂದಲೇ ಹೊರಬಿದ್ದಿರುವ ಶ್ರೀಲಂಕಾ ತಂಡ ತವರಿಗೆ ಮರಳಿದ್ದು, ತಂಡದ ಹೀನಾಯ ಪ್ರದರ್ಶನಕ್ಕೆ ತಂಡದ ಮುಖ್ಯ ಆಯ್ಕೆಗಾರ 'ಬಾಹ್ಯ ಪಿತೂರಿ' ಕಾರಣ ಎಂದು ದೂರಿದ್ದಾರೆ.

ಭಾರತದಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್‌ನಲ್ಲಿ ಶ್ರೀಲಂಕಾದ ಹೀನಾಯ ಪ್ರದರ್ಶನವು "ಹೊರಗಿನ ಪಿತೂರಿಯ ಫಲಿತಾಂಶ" ಎಂದು ಮುಖ್ಯ ಆಯ್ಕೆಗಾರ ಪ್ರಮೋದಯ ವಿಕ್ರಮಸಿಂಘೆ ಶುಕ್ರವಾರ ಆರೋಪಿಸಿದ್ದಾರೆ. ಬೆಂಗಳೂರಿನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಕೊನೆಯ ಗುಂಪು ಹಂತದ ಪಂದ್ಯದಲ್ಲಿ ಐದು ವಿಕೆಟ್‌ಗಳ ಸೋಲಿನ ನಂತರ ಶ್ರೀಲಂಕಾ ಕ್ರಿಕೆಟ್ ತಂಡವು ಶುಕ್ರವಾರ ಬೆಳಿಗ್ಗೆ ಭಾರತದಿಂದ ತವರಿಗೆ ವಾಪಸಾಗಿದೆ.

ಈ ಬಗ್ಗೆ ಮಾತನಾಡಿರುವ ಶ್ರೀಲಂಕಾ ಕ್ರಿಕೆಟ್ ತಂಡ ಮುಖ್ಯ ಆಯ್ಗೆಗಾರ ಪ್ರಮೋದಯ ವಿಕ್ರಮಸಿಂಘೆ, "ಇದರ ಬಗ್ಗೆ ಎಲ್ಲವನ್ನೂ ಬಹಿರಂಗಪಡಿಸಲು ನನಗೆ ಎರಡು ದಿನಗಳ ಕಾಲಾವಕಾಶ ನೀಡಿ. ಇದು ಹೊರಗಿನ ಪಿತೂರಿಯ ಫಲಿತಾಂಶವಾಗಿದೆ. ಇದು ತುಂಬಾ ದುಃಖಕರವಾಗಿದೆ, ನಾನು ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಿದ್ದೇನೆ ಎಂದು ಹೇಳಿದರು.

ಈ ಹಿಂದೆ ಶ್ರೀಲಂಕಾ ಸರ್ಕಾರ ತಂಡದ ಕಳಪೆ ಪ್ರದರ್ಶನದಿಂದಾಗಿ ಇಡೀ ಶ್ರೀಲಂಕಾ ಕ್ರಿಕೆಟ್ ಮಂಡಳಿಯನ್ನೇ ವಜಾಗೊಳಿಸಿತ್ತು. ಆದರೆ ಬಳಿಕ ಶ್ರೀಲಂಕಾ ಕೋರ್ಟ್ ಮಂಡಳಿಯನ್ನು ಮರುಸ್ಥಾಪಿಸಿತ್ತು. ಶ್ರೀಲಂಕಾ ತಂಡ ವಿಶ್ವಕಪ್ ಟೂರ್ನಿಯಲ್ಲಿ ತನ್ನ ಒಂಬತ್ತು ಪಂದ್ಯಗಳಲ್ಲಿ ಎರಡನ್ನು ಮಾತ್ರ ಗೆದ್ದು, 7 ಪಂದ್ಯಗಳಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದಿದೆ. 1992 ರಿಂದ ಈವರೆಗೂ ಹಾಲಿ ವಿಶ್ವಕಪ್ ಟೂರ್ನಿಯಲ್ಲಿ ಶ್ರೀಲಂಕಾ ತಂಡ ಅತ್ಯಂತ ಕೆಟ್ಟ ಪ್ರದರ್ಶನ ನೀಡಿದ ಕುಖ್ಯಾತಿಗೆ ಪಾತ್ರವಾಗಿದೆ. 

ಟೂರ್ನಿ ಆರಂಭದಲ್ಲಿ ಉತ್ಸಾಹದಿಂದಲೇ ಪಾಲ್ಗೊಂಡಿದ್ದ ಶ್ರೀಲಂಕಾ ತಂಡಕ್ಕೆ ಪ್ರಮುಖ ಆಟಗಾರರ ಗಾಯದ ಸಮಸ್ಯೆ ಇನ್ನಿಲ್ಲದಂತೆ ಭಾದಿಸಿತು. ಪ್ರಮುಖ ಆಟಗಾರರು ಮೂಲ ತಂಡದಿಂದ ಹೊರಗುಳಿದ ಪರಿಣಾಮ ಬದಲಿ ಆಟಗಾರರನ್ನು ಕಣಕ್ಕಿಳಿಸಲಾಯಿತು. ತಂಡದ ಕಳಪೆ ಪ್ರದರ್ಶನ ಪಂದ್ಯಾವಳಿಯ ಮಧ್ಯಭಾಗದಲ್ಲಿ ನಾಯಕತ್ವದ ಬದಲಾವಣೆಗೆ ಕಾರಣವಾಯಿತು. ಪ್ರಮುಕವಾಗಿ ಭಾರತ ತಂಡದ ವಿರುದ್ದ ಕೇವಲ 56 ರನ್‌ಗಳಿಗೆ ಆಲೌಟ್ ಆಗಿದ್ದು ಇಡೀ ಶ್ರೀಲಂಕಾ ಕ್ರಿಕೆಟ್ ಮಂಡಳಿಯನ್ನೇ ವಜಾಗೊಳಿಸಲು ಕಾರಣವಾಯಿತು. ಶ್ರೀಲಂಕಾದ ಕ್ರೀಡಾ ಸಚಿವಾಲಯ ಶ್ರೀಲಂಕಾ ಕ್ರಿಕೆಟ್ (SLC) ಅನ್ನು ವಜಾಗೊಳಿಸಿದರು, ನಂತರ ಅದನ್ನು ಮೇಲ್ಮನವಿ ಮೂಲಕ ನ್ಯಾಯಾಲಯದಿಂದ ಮರುಸ್ಥಾಪಿಸಲಾಯಿತು.  ಹೀಗಾಗಿ ಮಂಡಳಿಯಲ್ಲಿನ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಇದು ಇನ್ನಷ್ಟು ಆಳಗೊಳಿಸಿದೆ.

ಗುರುವಾರ, ಸಂಸತ್ತಿನಲ್ಲಿ ಜಂಟಿ ಸರ್ಕಾರ ಮತ್ತು ವಿರೋಧ ಪಕ್ಷದ ನಿರ್ಣಯವು SLC ಯ ಆಡಳಿತ ಮಂಡಳಿಯ ರಾಜೀನಾಮೆಗೆ ಒತ್ತಾಯಿಸಿತು. ಎಸ್‌ಎಲ್‌ಸಿ ಆಡಳಿತ ಮಂಡಳಿಯನ್ನು ವಜಾಗೊಳಿಸುವ ಸಚಿವರ ನಿರ್ಧಾರದಿಂದ ಭಿನ್ನಾಭಿಪ್ರಾಯ ಹೊಂದಿರುವ ಸರ್ಕಾರ, ಪದಾಧಿಕಾರಿಗಳನ್ನು ನೇಮಿಸಲು ಹೊಸ ಮತದಾನ ರಚನೆಯೊಂದಿಗೆ ಆಡಳಿತ ಮಂಡಳಿಗೆ ಹೊಚ್ಚಹೊಸ ಸಂವಿಧಾನವನ್ನು ಶಿಫಾರಸು ಮಾಡಿ ವರದಿಯನ್ನು ಹೊರತಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com