ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಮತ್ತೆ ಮೆಂಟರ್ ಆಗಿ ಮರಳಿದ ಗೌತಮ್ ಗಂಭೀರ್

2012 ಮತ್ತು 2014 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಐಪಿಎಲ್ ಟೂರ್ನಿಯಲ್ಲಿ ಗೆದ್ದಾಗ ತಂಡದ ನಾಯಕರಾಗಿದ್ದ ಗೌತಮ್ ಗಂಭೀರ್, 2024ರಲ್ಲಿ ನಡೆಯಲಿರುವ ಐಪಿಎಲ್‌ ಆವೃತ್ತಿಯಲ್ಲಿ ತಂಡದ ಮಾರ್ಗದರ್ಶಕರಾಗಿ ಫ್ರಾಂಚೈಸಿಗೆ ಮತ್ತೆ ಮರಳಿದ್ದಾರೆ.
ಗೌತಮ್ ಗಂಭೀರ್
ಗೌತಮ್ ಗಂಭೀರ್
Updated on

2012 ಮತ್ತು 2014 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಐಪಿಎಲ್ ಟೂರ್ನಿಯಲ್ಲಿ ಗೆದ್ದಾಗ ತಂಡದ ನಾಯಕರಾಗಿದ್ದ ಗೌತಮ್ ಗಂಭೀರ್, 2024ರಲ್ಲಿ ನಡೆಯಲಿರುವ ಐಪಿಎಲ್‌ ಆವೃತ್ತಿಯಲ್ಲಿ ತಂಡದ ಮಾರ್ಗದರ್ಶಕರಾಗಿ ಫ್ರಾಂಚೈಸಿಗೆ ಮತ್ತೆ ಮರಳಿದ್ದಾರೆ.

'ನಾನು ಭಾವನಾತ್ಮಕ ವ್ಯಕ್ತಿಯಲ್ಲ ಮತ್ತು ಹೆಚ್ಚಿನ ವಿಷಯಗಳು ನನ್ನನ್ನು ವಿಚಲಿತವಾಗುವಂತೆ ಮಾಡುವುದಿಲ್ಲ. ಆದರೆ, ಇದು ವಿಭಿನ್ನವಾಗಿದೆ. ಎಲ್ಲಿಂದ ಆರಂಭವಾಯಿತೋ, ಅಲ್ಲಿಗೆ ಹಿಂತಿರುಗುತ್ತಿದ್ದೇನೆ. ಇಂದು, ನನ್ನ ಮಾತಿನಲ್ಲಿ ಉತ್ಸಾಹ ಮತ್ತು ನನ್ನ ಹೃದಯದಲ್ಲಿ ಬೆಂಕಿಯಿದೆ. ನಾನು ಮತ್ತೊಮ್ಮೆ ಆ ನೇರಳೆ ಮತ್ತು ಚಿನ್ನದ ಜರ್ಸಿಗೆ ಜಾರಿಕೊಳ್ಳುತ್ತಿದ್ದೇನೆ' ಎಂದು ಗಂಭೀರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. 

ಗೌತಮ್ ಗಂಭೀರ್ ಅವರು 2011ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಸೇರಿಕೊಂಡರು ಮತ್ತು 2017ರವರೆಗೆ ತಂಡದಲ್ಲಿದ್ದರು. ಈ ಅವಧಿಯಲ್ಲಿ, ನೈಟ್ ರೈಡರ್ಸ್ ಐದು ಬಾರಿ ((ಅವರು ಗೆದ್ದ ಎರಡು ಪಂದ್ಯಾವಳಿ ಸೇರಿದಂತೆ) ಐಪಿಎಲ್ ಟೂರ್ನಿಯ ಪ್ಲೇಆಫ್‌ಗೆ ಅರ್ಹತೆ ಪಡೆದಿತ್ತು. 

'ಗೌತಮ್ ಯಾವಾಗಲೂ ನಮ್ಮ ಕುಟುಂಬದ ಭಾಗವಾಗಿದ್ದಾರೆ ಮತ್ತು ಇದು ನಮ್ಮ ಕ್ಯಾಪ್ಟನ್ ಬೇರೆ ಅವತಾರದಲ್ಲಿ 'ಮೆಂಟರ್' ಆಗಿ ಮನೆಗೆ ಮರಳುತ್ತಿದ್ದಾರೆ. ಅವರನ್ನು ನಾವು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೆವು ಮತ್ತು ಈಗ ನಾವೆಲ್ಲರೂ ಚಂದು (ಚಂದ್ರಕಾಂತ್ ಪಂಡಿತ್) ಸರ್ ಮತ್ತು ಗೌತಮ್ ಅವರು ಕೆಕೆಆರ್ ತಂಡದೊಂದಿಗೆ ಮ್ಯಾಜಿಕ್ ಮಾಡುವುದನ್ನು ಎದುರು ನೋಡುತ್ತಿದ್ದೇವೆ. ಅವರಿಂದಾಗಿ ತಂಡದಲ್ಲಿ ಎಂದೂ ಬತ್ತದ ಉತ್ಸಾಹ ಮತ್ತು ಕ್ರೀಡಾ ಮನೋಭಾವ ಹುಟ್ಟುಹಾಕಲು ನಿರೀಕ್ಷಿಸುತ್ತಿದ್ದೇವೆ' ಎಂದು ತಂಡದ ಸಹ-ಮಾಲೀಕ ಶಾರುಖ್ ಖಾನ್ ತಿಳಿಸಿದ್ದಾರೆ. 

ನೈಟ್ ರೈಡರ್ಸ್ ಸಹಾಯಕ ಸಿಬ್ಬಂದಿಯನ್ನು ಮುನ್ನಡೆಸುವ ಕಾರ್ಯಕ್ಕೆ ಮುಖ್ಯ ಕೋಚ್ ಚಂದ್ರಕಾಂತ್ ಪಂಡಿತ್ ನೇತೃತ್ವ ವಹಿಸಿದ್ದಾರೆ. ಅಭಿಷೇಕ್ ನಾಯರ್ (ಸಹಾಯಕ ಕೋಚ್), ಜೇಮ್ಸ್ ಫೋಸ್ಟರ್ (ಸಹಾಯಕ ಕೋಚ್), ಭರತ್ ಅರುಣ್ (ಬೌಲಿಂಗ್ ಕೋಚ್) ಮತ್ತು ರಿಯಾನ್ ಟೆನ್ ಡೋಸ್ಚೇಟ್ (ಫೀಲ್ಡಿಂಗ್ ಕೋಚ್) ತಂಡವನ್ನು ಮುನ್ನಡೆಸಲ್ಲಿದ್ದಾರೆ.

2008ರಲ್ಲಿ ತಂಡ ರಚನೆಯಾದಾಗಿನಿಂದ ಐಪಿಎಲ್‌ನ ಪ್ರತಿ ಆವೃತ್ತಿಯ ಭಾಗವಾಗಿರುವ ಕೆಲವೇ ಕೆಲವು ತಂಡಗಳಲ್ಲಿ ಒಂದಾದ ನೈಟ್ ರೈಡರ್ಸ್, 2012 ಮತ್ತು 2014ರಲ್ಲಿ ಚಾಂಪಿಯನ್ಸ್ ಆಗಿ ಹೊರಹೊಮ್ಮಿತು. 2021ರಲ್ಲಿ ರನ್ನರ್ ಅಪ್ ಆಗಿ ಸ್ಥಾನ ಪಡೆದಿತ್ತು. 

ಸಂಸದರು ಆಗಿರುವ ಗೌತಮ್ ಗಂಭೀರ್ ಅವರು ಕಳೆದ ಎರಡು ಆವೃತ್ತಿಗಳಲ್ಲಿ ಲಕ್ನೋ ಸೂಪರ್ ಜೈಂಟ್ಸ್‌ ತಂಡದ ಮೆಂಟರ್ ಆಗಿದ್ದರು. ಅವರು 2022ರಲ್ಲಿ ಎರಡು ಹೊಸ ತಂಡಗಳಲ್ಲಿ ಒಂದಾದ ಲಕ್ನೋ ಸೂಪರ್ ಜೈಂಟ್ಸ್‌ ತಂಡಕ್ಕೆ ಸೇರಿದರು. ತರುವಾಯ 'ಗ್ಲೋಬಲ್ ಮೆಂಟರ್' ಹುದ್ದೆಗೆ ಏರಿದರು. ದಕ್ಷಿಣ ಆಫ್ರಿಕಾದಲ್ಲಿ ನಡೆದ SA20 ಲೀಗ್‌ನಲ್ಲಿ ಡರ್ಬನ್‌ನ ಸೂಪರ್ ಜೈಂಟ್ಸ್‌ನ ಭಾಗವಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com