ಮೊದಲ ಟಿ20: ರೋಚಕ ಗೆಲುವಿನ ಜೊತೆ ದಾಖಲೆ ಬರೆದ ಯಂಗ್ ಇಂಡಿಯಾ, ವಿಂಡೀಸ್​ ವಿರುದ್ಧದ ರೆಕಾರ್ಡ್ ಪತನ

ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ 2 ವಿಕೆಟ್ ರೋಚಕ ಜಯ ದಾಖಲಿಸಿದ ಭಾರತ ತಂಡ ಈ ರೋಚಕ ಜಯದಲ್ಲೂ ಹಲವು ದಾಖಲೆಗಳನ್ನು ಪತನ ಮಾಡಿದೆ.
ಭಾರತಕ್ಕೆ ಜಯ
ಭಾರತಕ್ಕೆ ಜಯ

ವಿಶಾಖಪಟ್ಟಣಂ: ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ 2 ವಿಕೆಟ್ ರೋಚಕ ಜಯ ದಾಖಲಿಸಿದ ಭಾರತ ತಂಡ ಈ ರೋಚಕ ಜಯದಲ್ಲೂ ಹಲವು ದಾಖಲೆಗಳನ್ನು ಪತನ ಮಾಡಿದೆ.

ವಿಶಾಖಪಟ್ಟಣದ ವೈ.ಎಸ್.ರಾಜಶೇಖರ ರೆಡ್ಡಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ ಆಹ್ವಾನ ಪಡೆದ ಆಸ್ಟ್ರೇಲಿಯಾ ಜೋಶ್​ ಇಂಗ್ಲಿಸ್(110)​ ಅವರ ಆಕರ್ಷಕ ಶತಕದ ನೆರವಿನಿಂದ ನಿಗದಿತ 20 ಓವರ್​ಗಳಲ್ಲಿ ​ ಮೂರು ವಿಕೆಟ್​ ಕಳೆದುಕೊಂಡು 208 ರನ್​ ಗಳಿಸಿತು. ಬೃಹತ್​ ಮೊತ್ತವನ್ನು ದಿಟ್ಟವಾಗಿ ಬೆನ್ನಟ್ಟಿಕೊಂಡು ಹೋದ ಭಾರತಕ್ಕೆ ಅಂತಿಮ ಓವರ್​ನಲ್ಲಿ ಗೆಲುವಿಗೆ 7 ರನ್​ ಬೇಕಿತ್ತು.

ಈ ವೇಳೆ ನಾಟಕೀಯ ಕುಸಿತ ಕಂಡ ಭಾರತ ಸತತವಾಗಿ ಮೂರು ವಿಕಟ್ ಕಳೆದುಕೊಂಡು ಸೋಲಿನತ್ತ ಮುಖ ಮಾಡಿತು. ಕೊನೆಯ ಎಸೆತದಲ್ಲಿ ಗೆಲುವಿಗೆ ಒಂದು ರನ್​ ಬೇಕಿದ್ದಾಗ ಆತ್ಮವಿಶ್ವಾಸ ಕಳೆದುಕೊಳ್ಳದ ರಿಂಕು ಸಿಂಗ್​ ಸಿಕ್ಸರ್​ ಬಾರಿಸಿ ವಿಜಯ ಪತಾಕೆ ಹಾರಿಸಿದರು. ಅಚ್ಚರಿ ಎಂದರೆ ಇದು ನೋಬಾಲ್​ ಕೂಡ ಆಗಿತ್ತು. ವಿಕೆಟ್​ ಪತನಗೊಂಡರೂ ಭಾರತ ಗೆಲುವು ಸಾಧಿಸುತ್ತಿತ್ತು.

ಆಸ್ಟ್ರೇಲಿಯಾ(IND vs AUS) ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ರೋಚಕ ಗೆಲುವು ಸಾಧಿಸಿದ ಯಂಗ್​ ಟೀಮ್ ಇಂಡಿಯಾ ಪಡೆ ಗೆಲುವಿನಲ್ಲಿಯೂ ದಾಖಲೆಗಳನ್ನು ಬರೆದಿದೆ. 

ವಿಂಡೀಸ್​ ವಿರುದ್ಧದ ದಾಖಲೆ ಪತನ
2019ರಲ್ಲಿ ಹೈದರಾಬಾದ್​ನಲ್ಲಿ ನಡೆದಿದ್ದ ವೆಸ್ಟ್​ ಇಂಡೀಸ್​ ವಿರುದ್ಧದ ಟಿ20 ಪಂದ್ಯದಲ್ಲಿ ಭಾರತ ಚೇಸಿಂಗ್​ ಮೂಲಕ 208 ರನ್ ಗಳಿಸಿ ಗೆಲುವು ದಾಖಲಿಸಿತ್ತು. ಇದು ಈವರೆಗಿನ ಭಾರತದ ಅತ್ಯಧಿಕ ರನ್​ ಚೇಸಿಂಗ್​ ದಾಖಲೆಯಾಗಿತ್ತು. ಆದರೆ ಇದೀಗ ಯಂಗ್​ ಇಂಡಿಯಾ ಪಡೆ 209 ರನ್​ ಬಾರಿಸಿ ಈ ದಾಖಲೆಯನ್ನು ಮುರಿದಿದೆ. ಅದರಲ್ಲೂ ವಿಶ್ವ ಚಾಂಪಿಯನ್​ ಆಸ್ಟ್ರೇಲಿಯಾ ವಿರುದ್ಧ ಎನ್ನುವುದು ಇಲ್ಲಿ ಮಹತ್ವದ ವಿಚಾರವಾಗಿದೆ. ಯುವ ಪಡೆಯ ಈ ಗೆಲುವು ಮುಂದಿನ ವರ್ಷ ನಡೆಯುವ ಟಿ20 ವಿಶ್ವಕಪ್​ಗೂ ಮುನ್ನ ಭರವಸೆಯೊಂದನ್ನು ಮೂಡಿಸಿದೆ. 

Highest targets successfully chased by India in T20Is
209 vs AUS, Visakhapatnam, 2023
208 vs WI, Hyderabad, 2019
207 vs SL, Mohali, 2009
204 vs NZ, Auckland, 2020
202 vs AUS, Rajkot, 2013

5ನೇ ಬಾರಿಗೆ 200+ರನ್ ಚೇಸ್ ಗೆಲುವು
ಇದು ಭಾರತ ತಂಡ ಟಿ20 ಕ್ರಿಕೆಟ್​ನಲ್ಲಿ 200 ಪ್ಲಸ್​ ಮೊತ್ತವನ್ನು ಚೇಸಿಂಗ್​ ನಡೆಸಿ ಗೆದ್ದ 5ನೇ ನಿದರ್ಶನವಾಗಿದೆ. 4 ಬಾರಿ ಗೆದ್ದಿದ್ದ ದಕ್ಷಿಣ ಆಫ್ರಿಕಾದ ದಾಖಲೆ ಪತನಗೊಂಡಿತು. ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ತಲಾ ಮೂರು ಬಾರಿ ಈ ಸಾಧನೆ ಮಾಡಿದೆ.

Most successful run-chases of 200 or more in T20Is
5 - India
4 - South Africa
3 - Pakistan
3 - Australia

ಇಶಾನ್ ಕಿಶನ್ ದಾಖಲೆ
ಇನ್ನು ಇಂದಿನ ಪಂದ್ಯದಲ್ಲಿ ಭಾರತ ತಂಡದ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ ಅರ್ಧಶತಕ ಸಿಡಿಸಿ ದಾಖಲೆ ಬರೆದರು. ಇದು ಇಶಾನ್ ಕಿಶನ್ ಗೆ ಟಿ20ಯಲ್ಲಿ 2ನೇ ಅರ್ಧಶತಕವಾಗಿದೆ. ಆ ಮೂಲಕ ಇಶಾನ್ ಕಿಶನ್ ಭಾರತದ ಪರ ಅತೀ ಹೆಚ್ಚು ಬಾರಿ ಟಿ20ಯಲ್ಲಿ ಅರ್ಧಶತಕ ಗಳಿಸಿದ ಜಂಟಿ 2ನೇ ವಿಕೆಟ್ ಕೀಪರ್ ಬ್ಯಾಟರ್ ಎನಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ 3 ಬಾರಿ ಅರ್ಧಶತಕ ಸಿಡಿಸಿರುವ ಕನ್ನಡಿಗ ಕೆಎಲ್ ರಾಹುಲ್ ಅಗ್ರಸ್ಥಾನದಲ್ಲಿದ್ದಾರೆ. ತಲಾ 2 ಬಾರಿ ಅರ್ಧಶತಕ ಸಿಡಿಸಿರುವ ಎಂಎಸ್ ಧೋನಿ, ರಿಷಬ್ ಪಂತ್ ಮತ್ತು ಇಶಾನ್ ಕಿಶನ್ ಜಂಟಿ 2ನೇ ಸ್ಥಾನದಲ್ಲಿದ್ದಾರೆ.

50-plus scores by designated wicketkeepers for India (T20Is)
3 - KL Rahul
2 - MS Dhoni
2 - Rishabh Pant
2 - Ishan Kishan

ರನೌಟ್ ನಲ್ಲೂ ದಾಖಲೆ
ಇನ್ನು ಈ ಪಂದ್ಯದಲ್ಲಿ ಒಟ್ಟು 3 ರನೌಟ್ ಗಳಾಗಿದ್ದು, ರುತುರಾಜ್ ಗಾಯಕ್ವಾಡ್, ರವಿ ಬಿಷ್ಣೋಯ್ ಮತ್ತು ಅರ್ಶ್ ದೀಪ್ ಸಿಂಗ್ ರನೌಟ್ ಆಗಿದ್ದಾರೆ. ಈ ಮೂಲಕ ಭಾರತದ ಅತೀ ಹೆಚ್ಚು ರನೌಟ್ ದಾಖಲಾದ 2ನೇ ಪಂದ್ಯ ಇದಾಗಿದೆ. ಈ ಹಿಂದೆ 2015ರಲ್ಲಿ ಜಿಂಬಾಂಬ್ವೆ ವಿರುದ್ಧದ ಪಂದ್ಯದಲ್ಲೂ ಭಾರತ ಮೂರು ರನೌಟ್ ಎದುರಿಸಿತ್ತು.

Most run-outs in a T20I innings for India
3 vs ZIM, Harare, 2015
3 vs AUS, Visakhapatnam, 2023

3ನೇ ಕ್ರಮಾಂಕದಲ್ಲಿ ಅತೀ ಹೆಚ್ಚು ಸಿಕ್ಸರ್ ಸೂರ್ಯ ಕುಮಾರ್ ಯಾದವ್ ದಾಖಲೆ
ಇನ್ನು ಈ ಪಂದ್ಯದಲ್ಲಿ ಭಾರತ ತಂಡದ ನಾಯಕ ಸೂರ್ಯ ಕುಮಾರ್ ಯಾದವ್ 4 ಸಿಕ್ಸರ್ ಗಳನ್ನು ಸಿಡಿಸಿದ್ದು, ಆ ಮೂಲಕ 3 ಅಥವಾ ಅದಕ್ಕಿಂತ ಕೆಳ ಕ್ರಮಾಂಕದಲ್ಲಿ ಆಡಿ ಅತೀ ಹೆಚ್ಚು ಸಿಕ್ಸರ್ ಸಿಡಿಸಿದ 4ನೇ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಈ ಪಟ್ಟಿಯಲ್ಲಿ ಇಂಗ್ಲೆಂಡ್ ಇಯಾನ್ ಮಾರ್ಗೆನ್ ಅಗ್ರಸ್ಥಾನದಲ್ಲಿದ್ದು ಅವರು 120 ಸಿಕ್ಸರ್ ಸಿಡಿಸಿದ್ದಾರೆ. 2ನೇ ಸ್ಥಾನದಲ್ಲಿ ವಿರಾಟ್ ಕೊಹ್ಲಿ ಇದ್ದು, ಕೊಹ್ಲಿ 106 ಸಿಕ್ಸರ್ ಗಳನ್ನು ಸಿಡಿಸಿದ್ದಾರೆ. 

Batters with most T20I sixes from No.3 or below
120 - Eoin Morgan (107 innings)
106 - Virat Kohli (98 innings)
105 - David Miller (98 innings)
100 - Suryakumar Yadav (47 innings)
99 - Kieron Pollard (83 innings)

10 ವರ್ಷಗಳ ಬಳಿಕ ಆಸ್ಟ್ರೇಲಿಯಾ ವಿರುದ್ಧ 200ಕ್ಕೂ ಅಧಿಕ ರನ್ ಚೇಸ್ ಮಾಡಿ ಗೆಲುವು
ಇನ್ನು ಪ್ರಬಲ ಆಸ್ಟ್ರೇಲಿಯಾ ತಂಡದ ವಿರುದ್ಧ ಟಿ20ಯಲ್ಲಿ ಬರೊಬ್ಬರಿ 10 ವರ್ಷಗಳ  ಬಳಿಕ ಭಾರತ ತಂಡ 200ಕ್ಕೂ ಅಧಿಕ ರನ್ ಗಳನ್ನು ಚೇಸ್ ಮಾಡಿ ಜಯಗಳಿಸಿದೆ. 2013ರಲ್ಲಿ ರಾಜ್ ಕೋಟ್ ನಲ್ಲಿ ನಡೆದ ಪಂದ್ಯದಲ್ಲಿ ಭಾರತ 200ಕ್ಕೂ ಅಧಿಕ ರನ್ ಗಳನ್ನು ಚೇಸ್ ಮಾಡಿ 6 ವಿಕೆಟ್ ಗಳ ಅಂತರದಲ್ಲಿ ಜಯಗಳಿಸಿತ್ತು. ಅಂತೆಯೇ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯಗಳಲ್ಲಿ 6 ಬಾರಿ ಭಾರತ 190ಕ್ಕಿಂತ ಹೆಚ್ಚು ರನ್ ಗಳನ್ನು ಚೇಸ್ ಮಾಡುವಾಗ ಸೋತಿದೆ.

India’s six-wicket win in Rajkot in 2013 was the only other successful 200-plus chase against Australia in T20Is before today.
There have been six instances of team batting first scoring 190 or more in T20Is between India and Australia, all ending in a losing cause.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com