ಆಸ್ಟ್ರೇಲಿಯಾ ವಿರುದ್ಧದ 2ನೇ ಟಿ20 ಪಂದ್ಯ, ಭಾರತಕ್ಕೆ 44 ರನ್ ಭರ್ಜರಿ ಗೆಲುವು

 ಗ್ರೀನ್ ಫೀಲ್ಡ್ ಇಂಟರ್ ನ್ಯಾಷನಲ್ ಸ್ಟೇಡಿಯಂ ನಲ್ಲಿ ಭಾನುವಾರ ರಾತ್ರಿ ನಡೆದ ಆಸ್ಟ್ರೇಲಿಯಾ ವಿರುದ್ಧದ 2ನೇ ಟಿ-20 ಪಂದ್ಯದಲ್ಲಿ ಭಾರತ ಭರ್ಜರಿ 44 ರನ್ ಗಳಿಂದ ಗೆಲುವು ಸಾಧಿಸಿದೆ. ಈ ಮೂಲಕ ವಿಶ್ವಕಪ್ ಸೋಲಿಗೆ ತಿರುಗೇಟು ನೀಡಿದೆ.
ಭಾರತೀಯ ಆಟಗಾರರ ಸಂಭ್ರಮ
ಭಾರತೀಯ ಆಟಗಾರರ ಸಂಭ್ರಮ

ತಿರುವನಂತಪುರಂ: ಇಲ್ಲಿನ  ಗ್ರೀನ್ ಫೀಲ್ಡ್ ಇಂಟರ್ ನ್ಯಾಷನಲ್ ಸ್ಟೇಡಿಯಂ ನಲ್ಲಿ ಭಾನುವಾರ ರಾತ್ರಿ ನಡೆದ ಆಸ್ಟ್ರೇಲಿಯಾ ವಿರುದ್ಧದ 2ನೇ ಟಿ-20 ಪಂದ್ಯದಲ್ಲಿ ಭಾರತ ಭರ್ಜರಿ 44 ರನ್ ಗಳಿಂದ ಗೆಲುವು ಸಾಧಿಸಿದೆ. ಈ ಮೂಲಕ 2-0 ಅಂಕಗಳೊಂದಿಗೆ ಸರಣಿಯಲ್ಲಿ ಮುನ್ನಡೆ ಕಾಯ್ದುಕೊಂಡಿದೆ. 

ಟಾಸ್ ಗೆದ್ದು ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಮಾಡಲು ಅವಕಾಶ ನೀಡಿತು. ಇದನ್ನು ಸದ್ಬಳಕೆ ಮಾಡಿಕೊಂಡ ಭಾರತ ತಂಡ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 235  ರನ್ ಗಳ ಬೃಹತ್ ರನ್ ಪೇರಿಸಿತು. ಆರಂಭಿಕ ಆಟಗಾರರಾದ ಯಶಸ್ವಿ ಜೈಸ್ವಾಲ್, 53, ಋತುರಾಜ್ ಗಾಯಕ್ವಾಡ್ 58, ಇಶಾನ್ ಕಿಶಾನ್ 52 ರನ್ ಗಳಿಸುವ ಮೂಲಕ ಭಾರತ ಉತ್ತಮ ರನ್ ಗಳಿಸುವಲ್ಲಿ ನೆರವಾದರು. ನಂತರ ಬಂದ ನಾಯಕ ಸೂರ್ಯಕುಮಾರ್ ಯಾದವ್ 19, ರಿಂಕು ಸಿಂಗ್ ಅಜೇಯ 31 ಹಾಗೂ ತಿಲಕ್ ವರ್ಮಾ ಅಜೇಯ 7 ರನ್ ಗಳಿಸಿದರು. 

ಭಾರತ ನೀಡಿದ 236 ರನ್ ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಆಸ್ಟ್ರೇಲಿಯಾ ತಂಡಕ್ಕೆ ಭಾರತೀಯ ಬೌಲರ್ ಗಳು ಆರಂಭದಲ್ಲಿಯೇ ಮುಳುವಾದರು. ಸ್ವಿಟ್ ಸ್ಮಿತ್ ಹಾಗೂ ಮ್ಯಾಥ್ಯೂ ಸಾರ್ಟ್ ತಲಾ 19 ರನ್ ಗಳಿಸಿದಾಗ ಕ್ರಮವಾಗಿ  ಪ್ರಸಿದ್ಧ್ ಕೃಷ್ಣ ಹಾಗೂ ರವಿ ಬಿಷ್ಣೋಯಿ ಅವರ ಬೌಲಿಂಗ್ ನಲ್ಲಿ ಔಟಾದರು. ನಂತರ ಜೋಶ್ ಇಂಗ್ಲಿಷ್ ಅವರನ್ನು  ರವಿ ಬಿಷ್ಣೋಯಿ ಫೆವಿಲಿಯನ್ ಗೆ ಅಟ್ಟಿದರು.

ಗ್ಲೇನ್ ಮ್ಯಾಕ್ಸ್ ವೆಲ್ ಕೇವಲ 12 ರನ್ ಗಳಿಸಿ ಅಕ್ಸರ್ ಪಟೇಲ್ ಬೌಲಿಂಗ್ ನಲ್ಲಿ ಔಟಾದರು. ಮಾರ್ಕಸ್ ಸ್ಟೋಯಿಸ್ 45 ರನ್ ಗಳಿಸಿದಾಗ ಮುಕೇಶ್ ಕುಮಾರ್ ಬೌಲಿಂಗ್ ನಲ್ಲಿ ಅಕ್ಸರ್ ಪಟೇಲ್ ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ನಂತರ ರವಿ ಬಿಷ್ಣೋಯಿ ಟಿಮ್ ಡೇವಿಡ್ ಅವರ ವಿಕೆಟ್  ಪಡೆದರು. ಮ್ಯಾಥ್ಯೂ ವಾಡೆ ಅಜೇಯ 42 ರನ್ ಗಳಿಸಿದರು. ಹೀಗಾಗಿ ಆಸ್ಟ್ರೇಲಿಯಾ ನಿಗದಿತ 20 ಓವರ್ ಗಳಲ್ಲಿ  9 ವಿಕೆಟ್ ನಷ್ಟಕ್ಕೆ 191 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರಿಂದ 44 ರನ್ ಗಳಿಂದ ಭಾರತ ಜಯಭೇರಿ ಬಾರಿಸಿತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com