ಸತತ 2 ಸೋಲು: ಸರಣಿಯ ನಡುವೆಯೇ ಆಸ್ಟ್ರೇಲಿಯಾ ತಂಡದಿಂದ 6 ಆಟಗಾರರಿಗೆ ಖೋಕ್!
ನವದೆಹಲಿ: ಭಾರತದ ವಿರುದ್ಧದ ಟಿ20 ಸರಣಿಯ 2 ಪಂದ್ಯಗಳಲ್ಲಿ ಸೋಲು ಕಂಡಿರುವ ಆಸ್ಟ್ರೇಲಿಯಾ 3 ನೇ ಪಂದ್ಯಕ್ಕೆ ತಂಡದಲ್ಲಿ ಮಹತ್ವದ ಬದಲಾವಣೆ ಮಾಡಿದೆ.
ನ.28 ರಂದು ಗುವಾಹಟಿಯಲ್ಲಿ ಭಾರತ- ಆಸ್ಟ್ರೇಲಿಯಾ ವಿರುದ್ಧ 3 ನೇ ಟಿ20 ಪಂದ್ಯ ನಡೆಯುತ್ತಿದ್ದು, ಆಸ್ಟ್ರೇಲಿಯಾ ಬರೊಬ್ಬರಿ 6 ಆಟಗಾರರಿಗೆ ಖೋಕ್ ನೀಡಿ, ಬೇರೆ ಆಟಗಾರರನ್ನು ತಂಡಕ್ಕೆ ತೆಗೆದುಕೊಂಡಿದೆ.
ಸರಣಿ ಪೂರ್ಣಗೊಳ್ಳಲು ಇನ್ನೂ 3 ಪಂದ್ಯಗಳಿದ್ದು, ಇಬ್ಬರು ಸ್ಟಾರ್ ಆಗಗಾರರನ್ನು ಈ ಪಂದ್ಯದಿಂದ ಹಿಂಪಡೆಯಲು ನಿರ್ಧರಿಸಿದ್ದು, ಬುಧವಾರದಂಉ ಉಳಿದ ನಾಲ್ವರು ಆಟಗಾರರು ವಾಪಸ್ ಆಸ್ಟ್ರೇಲಿಯಾಗೆ ತೆರಳಲಿದ್ದಾರೆ. ಗ್ಲೆನ್ ಮ್ಯಾಕ್ಸ್ ವೆಲ್, ಮಾರ್ಕಸ್ ಸ್ಟೊಯಿನಿಸ್, ಜೋಶ್ ಇಂಗ್ಲಿಸ್, ಸೀನ್ ಅಬಾಟ್ ಮೂರನೇ ಪಂದ್ಯದ ಬಳಿಕ ಆಸ್ಟ್ರೇಲಿಯಾಗೆ ತೆರಳಲಿದ್ದಾರೆ.
ಆಸ್ಟ್ರೇಲಿಯವು ಸರಣಿಗೆ ಇಬ್ಬರು ಬದಲಿ ಆಟಗಾರರನ್ನು ಘೋಷಿಸಿದೆ, 'ವಿಕೆಟ್ ಕೀಪರ್-ಬ್ಯಾಟರ್ ಜೋಶ್ ಫಿಲಿಪ್ ಮತ್ತು ಬಿಗ್-ಹಿಟ್ಟರ್ ಬೆನ್ ಮೆಕ್ಡರ್ಮಾಟ್ ಗುವಾಹಟಿಯಲ್ಲಿ 3 ನೇ T20I ಗೆ ತಂಡಕ್ಕೆ ಸೇರಿಕೊಳ್ಳುತ್ತಾರೆ. ನಾಲ್ಕನೇ ಪಂದ್ಯಕ್ಕೂ ಮುನ್ನ ನ್ಯೂ ಸೌತ್ ವೇಲ್ಸ್‌ನ ಬೆನ್ ದ್ವಾರ್ಶುಯಿಸ್ ಮತ್ತು ಸ್ಪಿನ್ನರ್ ಕ್ರಿಸ್ ಗ್ರೀನ್ ರಾಯ್‌ಪುರದಲ್ಲಿ ತಂಡಕ್ಕೆ ಸೇರ್ಪಡೆಯಾಗಲಿದ್ದಾರೆ.

