ಐಸಿಸಿ ಏಕದಿನ ವಿಶ್ವಕಪ್ 2023: ಸಚಿನ್ ದಾಖಲೆ ಮುರಿದ ಡೇವಿಡ್ ವಾರ್ನರ್, ವಿಶ್ವಕಪ್ ನಲ್ಲಿ ವೇಗದ ಸಾವಿರ ರನ್ ಪೂರೈಕೆ

ಐಸಿಸಿ ಏಕದಿನ ವಿಶ್ವಕಪ್ 2023 ಕ್ರಿಕೆಟ್ ಟೂರ್ನಿಯ ಭಾರತ ತಂಡದ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾದ ದೈತ್ಯ ಬ್ಯಾಟರ್ ಡೇವಿಡ್ ವಾರ್ನರ್ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದಿದ್ದಾರೆ.
ಡೇವಿಡ್ ವಾರ್ನರ್
ಡೇವಿಡ್ ವಾರ್ನರ್

ಚೆನ್ನೈ: ಐಸಿಸಿ ಏಕದಿನ ವಿಶ್ವಕಪ್ 2023 ಕ್ರಿಕೆಟ್ ಟೂರ್ನಿಯ ಭಾರತ ತಂಡದ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾದ ದೈತ್ಯ ಬ್ಯಾಟರ್ ಡೇವಿಡ್ ವಾರ್ನರ್ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದಿದ್ದಾರೆ.

ಹೌದು.. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತದ ವಿರುದ್ಧದ ಪಂದ್ಯದಲ್ಲಿ 52 ಎಸೆತಗಳಲ್ಲಿ 6 ಬೌಂಡರಿ ಸಹಿತ 41 ರನ್ ಗಳಿಸಿದ ಡೇವಿಡ್ ವಾರ್ನರ್ ತಮ್ಮ ಏಕದಿನ ವಿಶ್ವಕಪ್ ವೃತ್ತಿ ಜೀವನದಲ್ಲಿ ಸಾವಿರ ರನ್ ಗಳನ್ನು ಪೂರೈಸಿದರು. ಆ ಮೂಲಕ ಈ ಸಾಧನೆ ಮಾಡಿದ 4ನೇ ಆಟಗಾರ ಎಂಬ ಕೀರ್ತಿಗೆ ಭಾಜನರಾದರು. ಅಂತೆಯೇ ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಪರ 4ನೇ ಅತೀ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಕೀರ್ತಿಗೂ ಭಾಜನರಾದರು. 

Most runs by an Australian batsman in ODI WC
1743 - Ricky Ponting
1085 - Adam Gilchrist
1004 - Mark Waugh
1001* - David Warner*
987 - Matthew Hayden

ಆಸ್ಟ್ರೇಲಿಯಾ ಪರ ವಿಶ್ವಕಪ್ ಟೂರ್ನಿಯಲ್ಲಿ ರಿಕ್ಕಿ ಪಾಂಟಿಂಗ್ 1743 ಕಲೆ ಹಾಕಿ ಅಗ್ರಸ್ಥಾನದಲ್ಲಿದ್ದು, 1085 ರನ್ ಗಳೊಂದಿಗೆ ಆ್ಯಡಂ ಗಿಲ್ ಕ್ರಿಸ್ಟ್ 2ನೇ ಸ್ಥಾನದಲ್ಲಿದ್ದಾರೆ. ಅಂತೆಯೇ 1004ರನ್ ಗಳಿಸಿರುವ ಮಾರ್ಕ್ ವಾ 3ನೇ ಸ್ಥಾನದಲ್ಲಿದ್ದಾರೆ.

ಸಚಿನ್ ದಾಖಲೆ ಮುರಿದ ಡೇವಿಡ್ ವಾರ್ನರ್
ಇನ್ನು ಈ ಪಂದ್ಯದಲ್ಲಿ ಸಾವಿರ ರನ್ ಗಳಿಸುವ ಮೂಲಕ ವಾರ್ನರ್ ಭಾರತದ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನೂ ಹಿಂದಿಕ್ಕಿದ್ದಾರೆ. ವಿಶ್ವಕಪ್ ಟೂರ್ನಿಯಲ್ಲಿ ಕಡಿಮೆ ಇನ್ನಿಂಗ್ಸ್ ನಲ್ಲಿ ಸಾವಿರ ರನ್ ಪೂರೈಸಿದ ದಾಖಲೆ ಇದೀಗ ವಾರ್ನರ್ ಪಾಲಾಗಿದೆ. ಈ ದಾಖಲೆಗಾಗಿ ವಾರ್ನರ್ ಕೇವಲ 19 ಇನ್ನಿಂಗ್ಸ್ ಗಳನ್ನು ತೆಗೆದುಕೊಂಡಿದ್ದಾರೆ.

ಭಾರತದ ಸಚಿನ್ ತೆಂಡೂಲ್ಕರ್ ಮತ್ತು ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ 20 ಇನ್ನಿಂಗ್ಸ್ ಗಳಲ್ಲಿ ಸಾವಿರ ರನ್ ಪೂರೈಸಿ ಈ ಪಟ್ಟಿಯಲ್ಲಿ ಜಂಟಿ 2ನೇ ಸ್ಥಾನದಲ್ಲಿದ್ದಾರೆ. ತಲಾ 21 ಇನ್ನಿಂಗ್ಸ್ ಗಳಲ್ಲಿ ಸಾವಿರ ರನ್ ಪೂರೈಸಿರುವ ವೆಸ್ಟ್ ಇಂಡೀಸ್ ತಂಡದ ವಿವಿಯನ್ ರಿಚರ್ಡ್ಸ್ ಮತ್ತು ಭಾರತದ ಸೌರವ್ ಗಂಗೂಲಿ ಜಂಟಿ 3ನೇ ಸ್ಥಾನದಲ್ಲಿದ್ದಾರೆ. 

Fewest innings to 1000 runs in ODI World Cup
19 - David Warner*
20 - Sachin Tendulkar/ AB de Villiers
21 - Viv Richards/ Sourav Ganguly
22 - Mark Waugh
22 - Herschelle Gibbs

 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com