ಐಸಿಸಿ ಕ್ರಿಕೆಟ್ ವಿಶ್ವಕಪ್ 2023: ಚೇತರಿಕೆಯತ್ತ ಶುಭ್ ಮನ್ ಗಿಲ್, ಚೆನ್ನೈನಿಂದ ಅಹ್ಮದಾಬಾದ್‌ ಗೆ ಶಿಫ್ಟ್

ಡೆಂಗ್ಯೂ ಜ್ವರಕ್ಕೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದ ಟೀಂ ಇಂಡಿಯಾ ಸ್ಟಾರ್ ಆಟಗಾರ ಶುಭ್ ಮನ್ ಗಿಲ್ ಇದೀಗ ಚೇತರಿಸಿಕೊಂಡಿದ್ದು, ವಿಶ್ರಾಂತಿಗಾಗಿ ಚೆನ್ನೈನಿಂದ ಅಹ್ಮದಾಬಾದ್‌ ಗೆ ಶಿಫ್ಟ್ ಆಗಲಿದ್ದಾರೆ ಎಂದು ತಿಳಿದುಬಂದಿದೆ.
ಶುಭ್ ಮನ್ ಗಿಲ್
ಶುಭ್ ಮನ್ ಗಿಲ್

ಅಹ್ಮದಾಬಾದ್: ಡೆಂಗ್ಯೂ ಜ್ವರಕ್ಕೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದ ಟೀಂ ಇಂಡಿಯಾ ಸ್ಟಾರ್ ಆಟಗಾರ ಶುಭ್ ಮನ್ ಗಿಲ್ ಇದೀಗ ಚೇತರಿಸಿಕೊಂಡಿದ್ದು, ವಿಶ್ರಾಂತಿಗಾಗಿ ಚೆನ್ನೈನಿಂದ ಅಹ್ಮದಾಬಾದ್‌ ಗೆ ಶಿಫ್ಟ್ ಆಗಲಿದ್ದಾರೆ ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ ಶುಭ್ ಮನ್ ಗಿಲ್ ಇಂದು ವಾಣಿಜ್ಯ ವಿಮಾನದಲ್ಲಿ ಚೆನ್ನೈನಿಂದ ಅಹಮದಾಬಾದ್‌ಗೆ ಪ್ರಯಾಣಿಸಲಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಮಾಹಿತಿ ನೀಡಿರುವ ಬಿಸಿಸಿಐ ಮೂಲಗಳು 24 ವರ್ಷದ ಆಟಗಾರ ಶುಭ್ ಮನ್ ಗಿಲ್ ಡೆಂಗ್ಯೂನಿಂದ ಚೇತರಿಸಿಕೊಳ್ಳುತ್ತಿದ್ದಾರೆ.  ಶೀಘ್ರದಲ್ಲೇ ಅವರು ಟ್ರ್ಯಾಕ್ ಗೆ ಮರಳುವ ಉತ್ತೇಜಕ ಲಕ್ಷಣಗಳನ್ನು ತೋರಿಸುತ್ತಿದ್ದಾರೆ. 

ಅಫ್ಘಾನಿಸ್ತಾನ ವಿರುದ್ಧದ ಪಂದ್ಯಕ್ಕಾಗಿ ಪ್ರಸ್ತುತ ದೆಹಲಿಯಲ್ಲಿರುವ ಭಾರತೀಯ ತಂಡದ ಆಡಳಿತವು ಯುವ ಆಟಗಾರರ ಮೇಲೆ ನಿಗಾ ಇರಿಸುವುದನ್ನು ಮುಂದುವರೆಸಿದೆ. ಅಕ್ಟೋಬರ್ 10 ರಂದು ಕ್ರಿಕೆಟ್ ನೆಕ್ಸ್ಟ್ ವರದಿ ಮಾಡಿದಂತೆ, ಗಿಲ್ ಅವರ ಪ್ಲೇಟ್‌ಲೆಟ್‌ಗಳು ಪ್ರತಿ ಮೈಕ್ರೋಲೀಟರ್‌ಗೆ 1,00,000 ಕ್ಕಿಂತ ಕಡಿಮೆಯಾದ ನಂತರ ಅವರನ್ನು ಚೆನ್ನೈನ ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ಒಂದು ದಿನದಲ್ಲಿ ಡಿಸ್ಚಾರ್ಜ್ ಮಾಡಲಾಗಿತ್ತು. ಆದರೆ ಹೋಟೆಲ್‌ನಲ್ಲಿ ಚಿಕಿತ್ಸೆ ಪಡೆಯುವುದನ್ನು ಮುಂದುವರೆಸಲಾಗಿತ್ತು. 

ಇದೀಗ ಗಿಲ್ ಚೆತರಿಕೆಯ ಹಾದಿಯಲ್ಲಿದ್ದು, ಅಹಮದಾಬಾದ್‌ ಗೆ ತೆರಳಿ ವಿಶ್ರಾಂತಿ ಪಡೆಯಲಿದ್ದಾರೆ. ಈಗಾಗಲೇ ಇಂದಿನ ಅಫ್ಘಾನಿಸ್ತಾನ ವಿರುದ್ಧದ ಪಂದ್ಯಕ್ಕೂ ಗಿಲ್ ಅಲಭ್ಯತೆ ಖಚಿತವಾಗಿದ್ದು ಮುಂದಿನ ಪಾಕಿಸ್ತಾನ ವಿರುದ್ಧದ ಹೈವೋಲ್ಟೇಜ್ ಪಂದ್ಯಕ್ಕೂ ಗಿಲ್ ಲಭ್ಯತೆ ಅಸ್ಪಷ್ಟವಾಗಿದೆ. ಗಿಲ್ ಶೇ. 70-80%ರಷ್ಟು ಚೇತರಿಸಿಕೊಂಡಿದ್ದಾರೆ. ಆದರೆ ಈಗಲೇ ಅವರು ಯಾವಾಗ ತಂಡಕ್ಕೆ ಮರಳಲಿದ್ದಾರೆ ಎಂದು ಹೇಳಲು ಕಷ್ಟಕರ ಎಂದು ತಂಡದ ಮೂಲಗಳು ತಿಳಿಸಿವೆ.

"ಶುಭ್ ಮನ್ ಗಿಲ್ ಚೇತರಿಸಿಕೊಳ್ಳಲು ಮತ್ತು ಫಿಟ್ನೆಸ್ ಅನ್ನು ಮರಳಿ ಪಡೆಯಲು ಎಲ್ಲಾ ಸಮಯವನ್ನು ನೀಡಲಾಗುವುದು. ಈ ಹಂತದಲ್ಲಿ ಬದಲಿಗಳನ್ನು ಹುಡುಕುವ ಅಥವಾ ಚರ್ಚಿಸುವ ಯಾವುದೇ ಆಲೋಚನೆಯಿಲ್ಲ. ಗಿಲ್ ಈಗಾಗಲೇ ಸಕಾರಾತ್ಮಕ ಚಿಹ್ನೆಗಳನ್ನು ತೋರಿಸುತ್ತಿದ್ದಾರೆ ಮತ್ತು ಶೀಘ್ರದಲ್ಲೇ ತಂಡಕ್ಕೆ ಮರಳುವ ಸಾಧ್ಯತೆಯಿದೆ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com