ಐಸಿಸಿ ಏಕದಿನ ವಿಶ್ವಕಪ್ 2023: ಕ್ರಿಕೆಟ್ ದೈತ್ಯ ದಕ್ಷಿಣ ಆಫ್ರಿಕಾ ವಿರುದ್ಧ ನೆದರ್ಲೆಂಡ್ ಗೆಲುವು

ಹಾಲಿ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಒಂದರ ಹಿಂದೆ ಒಂದು ಅಚ್ಚರಿ ಫಲಿತಾಂಶಗಳು ಹೊರ ಬೀಳುತ್ತಿದ್ದು, ಹಾಲಿ ಚಾಂಪಿಯನ್ ಇಂಗ್ಲೆಂಡ್ ಅನ್ನು ಕ್ರಿಕೆಟ್ ಶಿಶು ಅಫ್ಘಾನಿಸ್ತಾನ ಮಣಿಸಿದ ಬೆನ್ನಲ್ಲೇ ಇತ್ತ ಕ್ರಿಕೆಟ್ ದೈತ್ಯ ದಕ್ಷಿಣ ಆಫ್ರಿಕಾ ವಿರುದ್ಧ ನೆದರ್ಲೆಂಡ್ ತಂಡ ಮಹತ್ವದ ಗೆಲುವು ಸಾಧಿಸಿದೆ.
ದಕ್ಷಿಣ ಆಫ್ರಿಕಾ ವಿರುದ್ಧ ನೆದರ್ಲೆಂಡ್ ಗೆ ಗೆಲುವು
ದಕ್ಷಿಣ ಆಫ್ರಿಕಾ ವಿರುದ್ಧ ನೆದರ್ಲೆಂಡ್ ಗೆ ಗೆಲುವು

ಧರ್ಮಶಾಲಾ: ಹಾಲಿ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಒಂದರ ಹಿಂದೆ ಒಂದು ಅಚ್ಚರಿ ಫಲಿತಾಂಶಗಳು ಹೊರ ಬೀಳುತ್ತಿದ್ದು, ಹಾಲಿ ಚಾಂಪಿಯನ್ ಇಂಗ್ಲೆಂಡ್ ಅನ್ನು ಕ್ರಿಕೆಟ್ ಶಿಶು ಅಫ್ಘಾನಿಸ್ತಾನ ಮಣಿಸಿದ ಬೆನ್ನಲ್ಲೇ ಇತ್ತ ಕ್ರಿಕೆಟ್ ದೈತ್ಯ ದಕ್ಷಿಣ ಆಫ್ರಿಕಾ ವಿರುದ್ಧ ನೆದರ್ಲೆಂಡ್ ತಂಡ ಮಹತ್ವದ ಗೆಲುವು ಸಾಧಿಸಿದೆ.

ಧರ್ಮಶಾಲಾದಲ್ಲಿ ನಡೆದ ಇಂದು ಪಂದ್ಯದಲ್ಲಿ ನೆದರ್ಲೆಂಡ್ ನೀಡಿದ 245ರನ್ ಗಳ ಸಾಧಾರಣ ಗುರಿಯನ್ನೂ ಬೆನ್ನು ಹತ್ತಲಾಗದೇ ದಕ್ಷಿಣ ಆಫ್ರಿಕಾ ತಂಡ ಮುಗ್ಗರಿಸಿದೆ. ಮಳೆಯಿಂದಾಗಿ ಕೇವಲ 43 ಓವರ್ ಗಳಿಗೆ ಸೀಮಿತವಾದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನೆದರ್ಲೆಂಡ್ ತಂಡ 8 ವಿಕೆಟ್ ನಷ್ಟಕ್ಕೆ ನಾಯಕ ಎಡ್ವರ್ಡ್ಸ್ ರ ಏಕಾಂಗಿ ಹೋರಾಟದ ಫಲವಾಗಿ 245 ರನ್ ಗಳ ಗುರಿ ನೀಡಿತು.

ಈ ಗುರಿಯನ್ನು ಬೆನ್ನು ಹತ್ತಿದ ದಕ್ಷಿಣ ಆಫ್ರಿಕಾ ತಂಡ ಡೇವಿಡ್ ಮಿಲ್ಲರ್ (43 ರನ್), ನಾಯಕ ಬವುಮಾ (16 ರನ್), ಕ್ವಿಂಟನ್ ಡಿ ಕಾಕ್ (20 ರನ್)ರಂತಹ ದೈತ್ಯ ಬ್ಯಾಟರ್ ಗಳ ಹೊರತಾಗಿಯೂ ರನ್ ಗಳಿಸಲು ತಿಣುಕಾಡಿತು. ನೆದರ್ಲೆಂಡ್ ನ ಸಾಂಘಿಕ ಬೌಲಿಂಗ್ ಪ್ರದರ್ಶನಕ್ಕೆ ತರಗೆಲೆಗಳಂತೆ ದಕ್ಷಿಣ ಆಫ್ರಿಕಾದ ವಿಕೆಟ್ ಗಳು ಉರುಳಿದವು. ಕೇವಲ 44 ರನ್ ಗಳಿಗೆ ಬುವಾಮಾ ಪಡೆಯ 4 ವಿಕೆಟ್ ಗಳು ಬಿದ್ದದ್ದು ತಂಡದ ಕಳಪೆ ಬ್ಯಾಟಿಂಗ್ ಹಿಡಿದ ಕನ್ನಡಿಯಾಗಿದೆ.

ಅಂತಿಮವಾಗಿ ದಕ್ಷಿಣ ಆಫ್ರಿಕಾ ತಂಡ ನಿಗಧಿತ 43 ಓವರ್ ನಲ್ಲಿ  207 ರನ್ ಗಳಿಗೆ ಆಲೌಟ್ ಆಗುವ ಮೂಲಕ 38 ರನ್ ಗಳ ಅಂತರದಲ್ಲಿ ಹೀನಾಯ ಸೋಲು ಕಂಡಿತು.

ನೆದರ್ಲೆಂಡ್ ಪರ ಲೋಗಾನ್ ವ್ಯಾನ್ ಬೀಕ್, ಪಾಲ್ ವ್ಯಾನ್ ಮೀಕೆರೆನ್, ರೋಲೋಫ್ ವ್ಯಾನ್ ಡೆರ್ ಮೆರ್ವೆ ಮತ್ತು ಬಾಸ್ ಡಿ ಲೀಡೆ ತಲಾ 2 ವಿಕೆಟ್ ಪಡೆದರೆ, ಕಾಲಿನ್ ಅಕರ್ಮನ್ 1 ವಿಕೆಟ್ ಪಡೆದು ಮಿಂಚಿದರು.

ಫಲಿಸದ ಕೇಶವ್ ಮಹಾರಾಜ್ ಅಂತಿಮ ಹಂತದ ಹೋರಾಟ
ಇನ್ನು ಇನ್ನಿಂಗ್ಸ್ ನ ಅಂತಿಮ ಹಂತದಲ್ಲಿ ಕ್ರೀಸ್ ಗೆ ಇಳಿದಿದ್ದ ಕೇಶವ್ ಮಹಾರಾಜ್ ಉತ್ತಮ ಬ್ಯಾಟಿಂಗ್ ಮೂಲಕ ತಂಡಕ್ಕೆ ಗೆಲುವಿನ 
ಆಸೆ ಚಿಗುರಿಸಿದರಾದರೂ ಅಷ್ಟು ಹೊತ್ತಿಗಾಗಲೇ ಸಮಯ ಮೀರಿ ಹೋಗಿತ್ತು. ಅವರು 37 ಎಸೆತಗಳಲ್ಲಿ 1 ಸಿಕ್ಸರ್ ಮತ್ತು 5 ಬೌಂಡರಿ ಗಳ ನೆರವಿನಿಂದ 40 ರನ್ ಗಳಿಸಿದರು. ತಂಡದ 9 ವಿಕೆಟ್ ಬಿದ್ದಿದ್ದರಿಂದ ವಿಕೆಟ್ ಉಳಿಸಿಕೊಳ್ಳುವ ಧಾವಂತದಲ್ಲಿ ರಕ್ಷಣಾತ್ಮಕ ಆಟದ ಮೊರೆ ಹೋಗಿದ್ದರು. ಅತಿಮವಾದಿ ಅಂತಿಮ ಓವರ್ ನಲ್ಲಿ ವ್ಯಾನ್ ಬೀಕ್ ಬೌಲಿಂಗ್ ನಲ್ಲಿ ಎಡ್ವರ್ಡ್ಸ್ ಕ್ಯಾಚಿತ್ತು ಔಟಾದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com