ಐಸಿಸಿ ಏಕದಿನ ವಿಶ್ವಕಪ್ 2023: ರೋಹಿತ್ ಶರ್ಮಾ-ಶುಭ್ ಮನ್ ಗಿಲ್ ದಾಖಲೆ

ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಶುಭ್ ಮನ್ ಗಿಲ್ ಬ್ಯಾಟಿಂಗ್ ನಲ್ಲಿ ದಾಖಲೆ ನಿರ್ಮಿಸಿದ್ದಾರೆ.
ರೋಹಿತ್ ಶರ್ಮಾ-ಶುಭ್ ಮನ್ ಗಿಲ್
ರೋಹಿತ್ ಶರ್ಮಾ-ಶುಭ್ ಮನ್ ಗಿಲ್

ಧರ್ಮಶಾಲಾ: ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಶುಭ್ ಮನ್ ಗಿಲ್ ಬ್ಯಾಟಿಂಗ್ ನಲ್ಲಿ ದಾಖಲೆ ನಿರ್ಮಿಸಿದ್ದಾರೆ.

ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಇಂದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ನೀಡಿದ 274 ರನ್ ಗಳ ಗುರಿ ಬೆನ್ನು ಹತ್ತಿರುವ ಭಾರತ ತಂಡಕ್ಕೆ ರೋಹಿತ್ ಶರ್ಮಾ ಮತ್ತು ಶುಭ್ ಮನ್ ಗಿಲ್ ಉತ್ತಮ ಆರಂಭ ಒದಗಿಸಿದರು. ರೋಹಿತ್ ಶರ್ಮಾ 40 ಎಸೆತಗಳನ್ನು ಎದುರಿಸಿ 4 ಸಿಕ್ಸರ್ ಮತ್ತು 4 ಬೌಂಡರಿ ಸಹಿತ 46 ರನ್ ಸಿಡಿಸಿ ಕೇವಲ 4ರನ್ ಗಳ ಅಂತರದಲ್ಲಿ ಮತ್ತೊಮ್ಮೆ ಅರ್ಧಶತಕ ಮಿಸ್ ಮಾಡಿಕೊಂಡರು. ಅಂತೆಯೇ ಮತ್ತೊಂದು ಬದಿಯಲ್ಲಿ ರೋಹಿತ್ ಶರ್ಮಾಗೆ ಉತ್ತಮ ಸಾಥ್ ನೀಡಿದ ಶುಭ್ ಮನ್ ಗಿಲ್ 31 ಎಸೆತಗಳಲ್ಲಿ 5 ಬೌಂಡರಿ ಸಹಿತ 26 ರನ್ ಗಳಿಸಿದರು.

ರೋಹಿತ್ ಶರ್ಮಾ ಸಿಕ್ಸರ್ ದಾಖಲೆ
ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಒಟ್ಟು ನಾಲ್ಕು ಸಿಕ್ಸರ್ ಗಳನ್ನು ಸಿಡಿಸಿದ್ದು, ಆ ಮೂಲಕ ವಿಶ್ವಕಪ್ ಟೂರ್ನಿಯಲ್ಲಿ ಅತೀ ಹೆಚ್ಚು ಸಿಕ್ಸರ್ ಗಳಿಸಿದ 2ನೇ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ರೋಹಿತ್ ಶರ್ಮಾ ವಿಶ್ವಕಪ್ ಟೂರ್ನಿಯಲ್ಲಿ ಒಟ್ಟು 40 ಸಿಕ್ಸರ್ ಗಳನ್ನು ಸಿಡಿಸಿದ್ದು, ಈ ಪಟ್ಟಿಯಲ್ಲಿ ವೆಸ್ಟ್ ಇಂಡೀಸ್ ನ ಕ್ರಿಸ್ ಗೇಯ್ಲ್ ಅಗ್ರ ಸ್ಥಾನದಲ್ಲಿದ್ದಾರೆ. ವಿಂಡೀಸ್ ದೈತ್ಯ ವಿಶ್ವಕಪ್ ಟೂರ್ನಿಯಲ್ಲಿ ಒಟ್ಟು 49 ಸಿಕ್ಸರ್ ಗಳನ್ನು ಸಿಡಿಸಿದ್ದಾರೆ. 37 ಸಿಕ್ಸರ್ ಗಳನ್ನು ಸಿಡಿಸಿರುವ ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ 3ನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾದ ರಿಕ್ಕಿ ಪಾಂಟಿಂಗ್ 31 ಸಿಕ್ಸರ್ ಗಳ ಮೂಲಕ 4ನೇ ಸ್ಥಾನದಲ್ಲಿದ್ದಾರೆ. ನ್ಯೂಜಿಲೆಂಡ್ ತಂಡದ ಬ್ರೆಂಡನ್ ಮೆಕ್ಕಲಮ್ 29 ಸಿಕ್ಸರ್ ಗಳೊಂದಿಗೆ 5ನೇ ಸ್ಥಾನದಲ್ಲಿದ್ದಾರೆ.

Most sixes in ODI World Cups
Chris Gayle - 49 sixes in 35 matches.
Rohit Sharma* - 40 sixes in 22 matches.
AB de Villiers - 37 sixes in 23 matches.
Ricky Ponting - 31 sixes in 46 matches.
Brendon McCullum - 29 sixes in 34 matches.

ಶುಭ್ ಮನ್ ಗಿಲ್ ಡಬಲ್ ದಾಖಲೆ
ಇದೇ ಪಂದ್ಯದಲ್ಲಿ ರೋಹಿತ್ ಶರ್ಮಾಗೆ ಉತ್ತಮ ಸಾಥ್ ನೀಡಿದ ಶುಭ್ ಮನ್ ಗಿಲ್ ಡಬಲ್ ದಾಖಲೆ ನಿರ್ಮಿಸಿದ್ದು, ಗಿಲ್ ಇಂದು 31 ಎಸೆತಗಳಲ್ಲಿ 5 ಬೌಂಡರಿ ಸಹಿತ 26 ರನ್ ಗಳಿಸಿದರು. ಆ ಮೂಲಕ ಏಕದಿನದಲ್ಲಿ 2 ಸಾವಿರ ರನ್ ಗಳನ್ನು ಪೂರೈಸಿದರು. ಆ ಮೂಲಕ ಗಿಲ್ 2 ವಿಶೇಷ ದಾಖಲೆಗಳಿಗೆ ಪಾತ್ರರಾಗಿದ್ದು, ವೇಗದ 2 ಸಾವಿರ ರನ್ ಮತ್ತು 2 ಸಾವಿರ ರನ್ ಗಳಿಸಿದ ಕಿರಿಯ ಬ್ಯಾಟರ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಇನ್ನು ಏಕದಿನದಲ್ಲಿ ಅತೀ ವೇಗದ 2 ಸಾವಿರ ರನ್ ಪೂರೈಸಿದ ಆಟಗಾರ ಎಂಬ ಕೀರ್ತಿಗೆ ಭಾಜನರಾದರು. ಗಿಲ್ ತಮ್ಮ ಈ ಸಾಧನೆಗಾಗಿ ಕೇವಲ 38 ಇನ್ನಿಂಗ್ಸ್ ಗಳನ್ನು ತೆಗೆದುಕೊಂಡಿದ್ದಾರೆ. ಆ ಮೂಲಕ ಕಡಿಮೆ ಇನ್ನಿಂಗ್ಸ್ ನಲ್ಲಿ 2 ಸಾವಿರ ರನ್ ಗಳಿಸಿದ ಮೊದಲ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. 

ಇಷ್ಟು ದಿನ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ದಕ್ಷಿಣ ಆಫ್ರಿಕಾದ ಹಶೀಂ ಆಮ್ಲಾ 2ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದು, ಆಮ್ಲಾ 40 ಇನ್ನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದ್ದರು. ಇನ್ನು 45 ಇನ್ನಿಂಗ್ಸ್ ಗಳಲ್ಲಿ 2 ಸಾವಿರ ರನ್ ಪೂರೈಸಿದ್ದ ಜಹೀರ್ ಅಬ್ಬಾಸ್, ಇಂಗ್ಲೆಂಡ್ ತಂಡದ ಕೆವಿನ್ ಪೀಟರ್ಸೆನ್, ಪಾಕಿಸ್ತಾನದ ಬಾಬರ್ ಆಜಂ ಮತ್ತು ದಕ್ಷಿಣ ಆಫ್ರಿಕಾದ ರಾಸ್ಸೀ ವ್ಯಾನ್ ಡೆರ್ ಡಸ್ಸೆನ್ ಜಂಟಿ 3ನೇ ಸ್ಥಾನದಲ್ಲಿದ್ದಾರೆ.

Fastest to 2000 ODI runs (by innings taken)
38 - Shubman Gill
40 - Hashim Amla
45 - Zaheer Abbas
45 - Kevin Pietersen
45 - Babar Azam
45 - Rassie van der Dussen

2 ಸಾವಿರ ರನ್ ಪೂರೈಸಿದ ಭಾರತದ 5ನೇ ಕಿರಿಯ ಆಟಗಾರ
ಇದೇ ವೇಳೆ ಗಿಲ್ ಏಕದಿನ ಕ್ರಿಕೆಟ್ ನಲ್ಲಿ 2 ಸಾವಿರ ರನ್ ಪೂರೈಸಿದ ಭಾರತದ 5ನೇ ಕಿರಿಯ ಆಟಗಾರ ಎನಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಭಾರತದ ಸವ್ಯಸಾಚಿ ಸಚಿನ್ ತೆಂಡೂಲ್ಕರ್ ಅಗ್ರಸ್ಥಾನದಲ್ಲಿದ್ದು, ಸಚಿನ್ ಕೇವಲ 20 ವರ್ಷ 354 ದಿನಗಳ ವಯಸ್ಸಿನಲ್ಲಿ ಈ ಸಾಧನೆ ಮಾಡಿದ್ದರು. 2ನೇ ಸ್ಥಾನದಲ್ಲಿ ಯುವರಾಜ್ ಸಿಂಗ್ ಇದ್ದು ಯುವಿ 22 ವರ್ಷ 51ಗಳ ವಯಸ್ಸಿನಲ್ಲಿ 2 ಸಾವಿರ ರನ್ ಸಾಧನೆ ಮಾಡಿದ್ದರು. 3ನೇ ಸ್ಥಾನದಲ್ಲಿ ವಿರಾಟ್ ಕೊಹ್ಲಿ ಇದ್ದು, ಕೊಹ್ಲಿ 22 ವರ್ಷ 215ದಿನಗಳ ವಯಸ್ಸಿನಲ್ಲಿ ಈ ಸಾಧನೆ ಮಾಡಿದ್ದರು. 4ನೇ ಸ್ಥಾನದಲ್ಲಿದ್ದ ಸುರೇಶ್ ರೈನಾ ಇದ್ದು, ರೈನಾ 23 ವರ್ಷ 45 ದಿನಗಳ ವಯಸ್ಸಿನಲ್ಲಿ ಈ ಸಾಧನೆ ಮಾಡಿದ್ದಾರೆ. 5ನೇ ಸ್ಥಾನದಲ್ಲಿರುವ ಗಿಲ್ 24 ವರ್ಷ 44 ದಿನಗಳ ವಯಸ್ಸಿನಲ್ಲಿ 2 ಸಾವಿರ ರನ್ ಪೂರೈಸಿದ್ದಾರೆ.

Youngest to 2,000 ODI runs (for India)
20y, 354d - Sachin Tendulkar
22y, 51d - Yuvraj Singh
22y, 215d - Virat Kohli
23y, 45d - Suresh Raina
24y, 44d - Shubman Gill

 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com