ಪಾಕ್ ನಾಯಕ ಬಾಬರ್ ಅಜಮ್ , ಶದಬ್
ಕ್ರಿಕೆಟ್
ವಿಶ್ವಕಪ್: ದಕ್ಷಿಣ ಆಫ್ರಿಕಾ ಗೆಲ್ಲಲು 271 ರನ್ ಗಳ ಗುರಿ ನೀಡಿದ ಪಾಕಿಸ್ತಾನ
ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ಗೆಲುವಿಗಾಗಿ ಪೈಪೋಟಿ ನಡೆಸುತ್ತಿವೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 46.4 ಓವರ್ ಗಳಲ್ಲಿ 270 ರನ್ ಗಳಿಗೆ ಆಲೌಟ್ ಆಯಿತು.
ಚೆನ್ನೈ: ಇಲ್ಲಿ ನಡೆಯುತ್ತಿರುವ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ಗೆಲುವಿಗಾಗಿ ಪೈಪೋಟಿ ನಡೆಸುತ್ತಿವೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 46.4 ಓವರ್ ಗಳಲ್ಲಿ 270 ರನ್ ಗಳಿಗೆ ಆಲೌಟ್ ಆಯಿತು.
ನಾಯಕ ಬಾಬರ್ ಅಜಮ್ ಹಾಗೂ ಸೌದ್ ಶಕೀಲ್ ಅವರ ಅರ್ಧಶತಕ ಹಾಗೂ ಶದಬ್ ಖಾನ್ ಅವರ 43 ರನ್ ಗಳ ನೆರವಿನಿಂದ ಪಾಕಿಸ್ತಾನ 270 ರನ್ ಕಲೆಹಾಕಿತು.
ದಕ್ಷಿಣ ಆಫ್ರಿಕಾ ಪರ ತಬ್ರೈಜ್ ಶಾಮ್ಸಿ 4, ಮಾರ್ಕೊ ಜಾನ್ ಸೇನ್ 3, ಗೆರಾಲ್ಡ್ ಕೊಯ್ಜಿ 2 ವಿಕೆಟ್ ಪಡೆದರು. 271 ರನ್ ಗಳ ಗುರಿಯನ್ನು ಬೆನ್ನಟ್ಟಿರುವ ದಕ್ಷಿಣ ಆಫ್ರಿಕಾ ತಂಡ 13 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 94 ರನ್ ಗಳಿಸಿ ಆಟ ಮುಂದುವರೆಸಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ