Worldcup 2023: 389 ರನ್‌ಗಳ ಬೃಹತ್ ಟಾರ್ಗೆಟ್ ನಲ್ಲಿ ನ್ಯೂಜಿಲ್ಯಾಂಡ್ ಅನ್ನು 5 ರನ್‌ಗಳಿಂದ ಮಣಿಸಿದ ಆಸ್ಟ್ರೇಲಿಯಾ!

ವಿಶ್ವಕಪ್ 2023 ಪಂದ್ಯಾವಳಿಯ 27ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ನ್ಯೂಜಿಲೆಂಡ್ ಅನ್ನು ಸೋಲಿಸುವ ಮೂಲಕ ಸತತ ನಾಲ್ಕನೇ ಗೆಲುವು ದಾಖಲಿಸಿದೆ. ಅದೇ ಸಮಯದಲ್ಲಿ, ಭಾರತ ವಿರುದ್ಧ ಸೋತ ನಂತರ, ಕಿವೀಸ್ ತಂಡವು ಇದೀಗ ಸತತ ಎರಡನೇ ಸೋಲು ಅನುಭವಿಸಿದೆ. 
ಆಸ್ಟ್ರೇಲಿಯಾ ತಂಡ
ಆಸ್ಟ್ರೇಲಿಯಾ ತಂಡ
Updated on

ಧರ್ಮಶಾಲಾ: ವಿಶ್ವಕಪ್ 2023 ಪಂದ್ಯಾವಳಿಯ 27ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ನ್ಯೂಜಿಲೆಂಡ್ ಅನ್ನು ಸೋಲಿಸುವ ಮೂಲಕ ಸತತ ನಾಲ್ಕನೇ ಗೆಲುವು ದಾಖಲಿಸಿದೆ. ಅದೇ ಸಮಯದಲ್ಲಿ, ಭಾರತ ವಿರುದ್ಧ ಸೋತ ನಂತರ, ಕಿವೀಸ್ ತಂಡವು ಇದೀಗ ಸತತ ಎರಡನೇ ಸೋಲು ಅನುಭವಿಸಿದೆ. 

ಧರ್ಮಶಾಲಾದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಕಾಂಗರೂ ತಂಡ 388 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತ್ತು. ಪ್ರತ್ಯುತ್ತರವಾಗಿ ನ್ಯೂಜಿಲೆಂಡ್ ತಂಡವೂ ಉತ್ತಮ ಹೋರಾಟ ನಡೆಸಿದರೂ ಕೊನೆಯಲ್ಲಿ ಗುರಿ ಮುಟ್ಟಲು ಸಾಧ್ಯವಾಗಲಿಲ್ಲ. ಕಿವೀಸ್ ತಂಡ 50 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 383 ರನ್ ಗಳಿಸಲಷ್ಟೇ ಶಕ್ತವಾಯಿತು. ಜಿಮ್ಮಿ ನೀಶಮ್ ಕೊನೆಯವರೆಗೂ ಹೋರಾಡಿದರು ಆದರೆ 50ನೇ ಓವರ್‌ನ 5ನೇ ಎಸೆತದಲ್ಲಿ ನೀಶಮ್ 58 ರನ್ ಗಳಿಸಿ ರನೌಟ್ ಆಗಿದ್ದು ಕಿವೀಸ್ ತಂಡವು ಪಂದ್ಯವನ್ನು ಕಳೆದುಕೊಂಡಿತು.

ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ 14 ಎಸೆತಗಳಲ್ಲಿ ಎರಡು ಬೌಂಡರಿ ಹಾಗೂ 4 ಸಿಕ್ಸರ್ ಒಳಗೊಂಡ 37 ರನ್ ಗಳಿಸಿದರು. ಇನ್ನು ಒಂದು ಓವರ್‌ನಲ್ಲಿ 27 ರನ್ ಸಿಡಿಸಿದ್ದು ಬಹುಶಃ ಕೊನೆಯಲ್ಲಿ ಆ ರನ್‌ಗಳು ನ್ಯೂಜಿಲೆಂಡ್‌ಗೆ ಹೆಚ್ಚು ಹೊರೆಯಾಯಿತು. ಕಿವೀಸ್ ಪಂದ್ಯವನ್ನು 5 ರನ್‌ಗಳಿಂದ ಕಳೆದುಕೊಂಡಿತು. ರಚಿನ್ ರವೀಂದ್ರ 116 ರನ್ ಗಳ ಅಮೋಘ ಇನ್ನಿಂಗ್ಸ್ ಆಡಿದರು. ಆದರೆ ಜಿಮ್ಮಿ ನೀಶಮ್ ಕೊನೆಯವರೆಗೂ 58 ರನ್ ಗಳಿಸುವ ಮೂಲಕ ತಂಡವನ್ನು ಮುನ್ನಡೆಸಿದರು ಆದರೆ ಗೆಲ್ಲಲು ಸಾಧ್ಯವಾಗಲಿಲ್ಲ.

ಆಸ್ಟ್ರೇಲಿಯಾ ಪರ ಆರಂಭಿಕರಾದ ಟ್ರಾವಿಸ್ ಹೆಡ್ (Travis Head) (109 ರನ್) ಶತಕ ಮತ್ತು ಡೇವಿಡ್ ವಾರ್ನರ್ (81 ರನ್) (David Warner) ಆರ್ಧಶತಕದ ಮೂಲಕ ಆಸ್ಟ್ರೇಲಿಯಾ ಭರ್ಜರಿ ಆರಂಭ ಪಡೆಯಿತು. ಮೊದಲ ವಿಕೆಟ್ ಗೆ ಈ ಜೋಡಿ ಬರೊಬ್ಬರಿ 175 ರನ್ ಗಳ ಜೊತೆಯಾಟವಾಡಿತು. ಬಳಿಕ ಮಿಚೆಲ್ ಮಾರ್ಷ್ (36 ರನ್), ಗ್ಲೆನ್ ಮ್ಯಾಕ್ಸ್ ವೆಲ್ (41 ರನ್) (Glenn Maxwell), ಜೋಷ್ ಇಂಗ್ಲಿಸ್ (38 ರನ್) ಮತ್ತು ನಾಯಕ ಪ್ಯಾಟ್ ಕಮಿನ್ಸ್ (37 ರನ್) ಬ್ಯಾಟಿಂಗ್ ನೆರವಿನಿಂದ 49.2 ಓವರ್ ನಲ್ಲಿ 388 ರನ್ ಗಳಿ ಸರ್ವಪತನ ಕಂಡಿತು.

ಆ ಮೂಲಕ ನ್ಯೂಜಿಲೆಂಡ್ ಗೆ 389ರನ್ ಗಳ ಬೃಹತ್ ಗುರಿ ನೀಡಿದೆ. ನ್ಯೂಜಿಲೆಂಡ್ (New Zealand) ಪರ ಟ್ರೆಂಟ್ ಬೌಲ್ಟ್ (Trent Boult) ಮತ್ತು ಗ್ಲೆನ್ ಫಿಲಿಪ್ಸ್ ತಲಾ 3 ವಿಕೆಟ್ ಪಡೆದರೆ, ಮೆಚೆಲ್ ಸ್ಯಾಂಥ್ನರ್ 2, ಮ್ಯಾಟ್ ಹೆನ್ರಿ ಮತ್ತು ಜೇಮ್ಸ್ ನೀಶಂ ತಲಾ 1 ವಿಕೆಟ್ ಪಡೆದರು. ಸ್ಯಾಂಥ್ನರ್ 10 ಓವರ್ ನಲ್ಲಿ 80ರನ್ ನೀಡಿ ದುಬಾರಿ ಬೌಲರ್ ಎನಿಸಿಕೊಂಡರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com