ICC Cricket World Cup 2023: ಪಾಕ್ ತಂಡದ ಕಳಪೆ ಪ್ರದರ್ಶನ, ಆಯ್ಕೆ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಇಂಜಮಾಮ್ ಉಲ್ ಹಕ್ ರಾಜಿನಾಮೆ

ಹಾಲಿ ಐಸಿಸಿ ಕ್ರಿಕೆಟ್ ವಿಶ್ವಕಪ್ ಟೂರ್ನಿ (ICC Cricket World Cup 2023)ಯಲ್ಲಿ ಪಾಕಿಸ್ತಾನದ ಕಳಪೆ ಪ್ರದರ್ಶನ ಮುಂದುವರೆದಿರುವಂತೆಯೇ ಅತ್ತ ಪಾಕಿಸ್ತಾನ ಕ್ರಿಕೆಟ್ ಮಂಡಳಿ (Pakistan Cricket Board)ಯ ಆಯ್ಕೆ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಕ್ರಿಕೆಟ್ ದಂತಕಥೆ ಇಂಜಮಾಲ್ ಉಲ್ ಹಕ್ ರಾಜಿನಾಮೆ ನೀಡಿದ್ದಾರೆ.
ಇಂಜಮಾಮ್ ಉಲ್ ಹಕ್ ರಾಜಿನಾಮೆ
ಇಂಜಮಾಮ್ ಉಲ್ ಹಕ್ ರಾಜಿನಾಮೆ

ಲಾಹೋರ್: ಹಾಲಿ ಐಸಿಸಿ ಕ್ರಿಕೆಟ್ ವಿಶ್ವಕಪ್ ಟೂರ್ನಿ (ICC Cricket World Cup 2023)ಯಲ್ಲಿ ಪಾಕಿಸ್ತಾನದ ಕಳಪೆ ಪ್ರದರ್ಶನ ಮುಂದುವರೆದಿರುವಂತೆಯೇ ಅತ್ತ ಪಾಕಿಸ್ತಾನ ಕ್ರಿಕೆಟ್ ಮಂಡಳಿ (Pakistan Cricket Board)ಯ ಆಯ್ಕೆ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಕ್ರಿಕೆಟ್ ದಂತಕಥೆ ಇಂಜಮಾಲ್ ಉಲ್ ಹಕ್ ರಾಜಿನಾಮೆ ನೀಡಿದ್ದಾರೆ.

ಹೌದು.. ವಿಶ್ವಕಪ್‌ ಟೂರ್ನಿಯಲ್ಲಿ ಪಾಕಿಸ್ತಾನ ತಂಡ (Pakistan Team)ದ ನೀರಸ ಪ್ರದರ್ಶನದ ಮಧ್ಯೆ ಪಾಕಿಸ್ತಾನದ ಹಿರಿಯ ಕ್ರಿಕೆಟಿಗ ಇಂಜಮಾಮ್-ಉಲ್-ಹಕ್ (Inzamam-ul-Haq) ಅವರು ಪಾಕಿಸ್ತಾನ ಕ್ರಿಕೆಟ್ ತಂಡದ ಮುಖ್ಯ ಆಯ್ಕೆಗಾರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಇಂಜಮಾಮ್ ಉಲ್ ಹಕ್ ಅವರು ತಮ್ಮ ರಾಜೀನಾಮೆಯನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ಝಕಾ ಅಶ್ರಫ್ ಅವರಿಗೆ ಕಳುಹಿಸಿದ್ದು, ಈ ಬಗ್ಗೆ ಪಾಕಿಸ್ತಾನದ 'ಸಮಾ' ಟಿವಿಯೊಂದಿಗೆ ಮಾತನಾಡಿದ ಅವರು, ಮುಖ್ಯ ಆಯ್ಕೆಗಾರನ ಪಾತ್ರವು ನ್ಯಾಯಾಧೀಶರ ಪಾತ್ರ ಎಂದು ನಾನು ಭಾವಿಸಿದ್ದರಿಂದ ನಾನು ನನ್ನ ರಾಜೀನಾಮೆಯನ್ನು ಕಳುಹಿಸಿದ್ದೇನೆ ಮತ್ತು ಈ ವಿಚಾರಣೆ ನಡೆಯುವವರೆಗೆ ನಾನು ದೂರವಿರುವುದು ಉತ್ತಮ ಎಂದು ನಾನು ಭಾವಿಸಿದ್ದೇನೆ ಎಂದು ಹೇಳಿದ್ದಾರೆ.

ಇಂಜಿ ವಿರುದ್ಧ ಹಿತಾಸಕ್ತಿ ಸಂಘರ್ಷ ಆರೋಪ
ಮೂಲಗಳ ಪ್ರಕಾರ ಹಲವಾರು ರಾಷ್ಟ್ರೀಯ ತಂಡದ ಆಟಗಾರರನ್ನು ನಿರ್ವಹಿಸುವ ಖಾಸಗಿ ಕಂಪನಿಯೊಂದಿಗಿನ ಇಂಜಮಾಮ್ ಉಲ್ ಹಕ್ ಅವರ ಸಂಬಂಧವು ಹಿತಾಸಕ್ತಿ ಸಂಘರ್ಷ (Conflict of interest) ಆರೋಪಕ್ಕೆ ಕಾರಣವಾಗಿದೆ. ಈ ಸಂಬಂಧ ತನಿಖೆ ನಡೆಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ತನಿಖೆಯನ್ನು ಪ್ರಾರಂಭಿಸಿದ್ದು, ಇದರ ಬೆನ್ನಲ್ಲೇ ಪಾಕಿಸ್ತಾನ ಕ್ರಿಕೆಟ್ ದಂತಕಥೆ (Cricket legend) ಇಂಜಮಾಮ್-ಉಲ್-ಹಕ್ ಸೋಮವಾರ ರಾಷ್ಟ್ರೀಯ ಆಯ್ಕೆ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ (Resignation) ನೀಡಿದ್ದಾರೆ.

ಯಾಜೂ ಇಂಟರ್‌ನ್ಯಾಶನಲ್ ಕಂಪನಿಯಲ್ಲಿ ಇಂಜಮಾಮ್ ಅವರ ಪಾತ್ರವನ್ನು ತನಿಖೆ ಮಾಡಲು ಪಿಸಿಬಿ (PCB) ಐದು ಸದಸ್ಯರ ಸಮಿತಿಯನ್ನು ರಚಿಸಿದ್ದು, ಅಲ್ಲಿ ನಾಯಕ ಬಾಬರ್ ಅಜಮ್ (Babar Azam), ವೇಗಿ ಶಾಹೀನ್ ಶಾ ಆಫ್ರಿದಿ (Shaheen Afridi) ಮತ್ತು ವಿಕೆಟ್ ಕೀಪರ್-ಬ್ಯಾಟರ್ ಮೊಹಮ್ಮದ್ ರಿಜ್ವಾನ್ (Mohammad Rizwan) ಅವರನ್ನು ಈ ಖಾಸಗಿ ಸಂಸ್ಥೆ ಬ್ರಾಂಡ್ ಅಂಬಾಸಿಡರ್ (brand ambassador) ಗಳಾಗಿ ಒಪ್ಪಂದ ಮಾಡಿಕೊಂಡಿದೆ. 

ಇಂಜಿ ಅವರ ಖಾಸಗಿ ಸಂಸ್ಥೆಯೊಂದಿಗಿನ ಸಹಭಾಗಿತ್ವದಿಂದಲೇ ಈ ಮೂವರು ಆಟಗಾರರಿಗೆ ಪಾಕಿಸ್ತಾನ ತಂಡ (Pakistan Cricket team)ದಲ್ಲಿ ಅವಕಾಶ ನೀಡುವಂತೆ ಮಾಡಿದೆ ಎಂಬ ಆರೋಪ ಕೇಳಿಬಂದಿದೆ. ಆದರೆ ಈ ಆರೋಪಗಳನ್ನು ಅಲ್ಲಗಳೆದಿರುವ ಇಂಜಮಾಮ್ ಉಲ್ ಹಕ್, 'ಏಜೆಂಟ್ ಮತ್ತು ಪಾಲುದಾರ ತಲ್ಹಾ ರೆಹಮಾನಿ ಅವರೊಂದಿಗಿನ ಆಟಗಾರರ ಸಂಬಂಧವು ಅವರನ್ನು ತಂಡಕ್ಕೆ ಆಯ್ಕೆ ಮಾಡಲು ಪ್ರಭಾವಿಸಿಲ್ಲ. ಆಟಗಾರರ ಆಯ್ಕೆಯಲ್ಲಿ ತಾನು ಯಾವುದೇ ರೀತಿಯ ರಾಜಿ ಮಾಡಿಕೊಂಡಿಲ್ಲ. ನಿಯಮಾನುಸಾರವೇ ಆಟಗಾರರ ಪ್ರದರ್ಶನದ ಆಧಾರದ ಮೇಲೆ ಆಟಗಾರರನ್ನು ಆಯ್ಕೆ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

2016 ರಿಂದ 19ರವರೆಗಿನ ಒಂದು ಅವಧಿಯಲ್ಲಿ ಇಂಜಮಾಮ್ ಉಲ್ ಹಕ್ ಪಾಕಿಸ್ತಾನದ ಮುಖ್ಯ ಆಯ್ಕೆಗಾರರಾಗಿದ್ದರು. ಅಷ್ಟೇ ಅಲ್ಲದೆ ಕೋಚ್ ಆಗಿಯೂ ಕಾರ್ಯ ನಿರ್ವಹಿಸಿದ್ದರು. ಇದಾದ ಬಳಿಕ ಮತ್ತೆ ಕೆಲ ಸಮಯದ ಹಿಂದೆ ಅಂದರೆ ಆಗಸ್ಟ್ ತಿಂಗಳಿನಲ್ಲಿ ಅವರಿಗೆ ಈ ಜವಾಬ್ದಾರಿ ನೀಡಲಾಗಿತ್ತು. ಆದರೆ ಪಾಕಿಸ್ತಾನ ತಂಡದ ಕಳಪೆ ಸ್ಥಿತಿಗೂ ಗುರಿಯಾಗಿದ್ದಲ್ಲದೆ, ಇಂಜಮಾಮ್ ವಿರುದ್ಧ ಪಕ್ಷಪಾತ (partiality)ದ ಆರೋಪವೂ ಕೇಳಿಬಂದಿದೆ. 

4 ತಿಂಗಳಿನಿಂದ ಆಟಗಾರರಿಗಿಲ್ಲ ವೇತನ
ಏತನ್ಮಧ್ಯೆ ಕಳೆದ 4 ತಿಂಗಳಿನಿಂದ ಪಾಕಿಸ್ತಾನ ಕ್ರಿಕೆಟ್ ಆಟಗಾರರಿಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ವೇತನ (Pakistan Cricketers  Salary) ಬಿಡುಗಡೆ ಮಾಡಿಲ್ಲ ಎಂಬ ಆರೋಪವೂ ಕೇಳಿಬಂದಿದ್ದು, ಈ ಕುರಿತು ಮಾಜಿ ಕ್ರಿಕೆಟಿಗರು ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ವಿರುದ್ಧ ಬಹಿರಂಗವಾಗಿಯೇ ಆಕ್ರೋಶವ್ಯಕ್ತಪಡಿಸಿದ್ದರು. ಒಂದೆಡೆ ವಿಶ್ವಕಪ್ ಟೂರ್ನಿಯಲ್ಲಿ ತಂಡದ ನೀರಸ ಪ್ರದರ್ಶನ, ಮತ್ತೊಂದೆಡೆ ವೇತನ ವಿವಾದ ಇದೀಗ ಇಂಜಮಾಮ್ ಉಲ್ ಹಕ್ ರಾಜಿನಾಮೆ (Resignation)ಯಿಂದಾಗಿ ಮತ್ತೆ ಪಾಕಿಸ್ತಾನ ಕ್ರಿಕೆಟ್‌ನಲ್ಲಿ ಪ್ರಕ್ಷುಬ್ಧತೆ ಮುಂದುವರೆದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com