ವಿರಾಟ್ ಕೊಹ್ಲಿ ಜನ್ಮದಿನ: ಈಡೆನ್ ಗಾರ್ಡನ್ ನಲ್ಲಿ ಪಂದ್ಯ ವೀಕ್ಷಕರಿಗೆ 70 ಸಾವಿರ ಕೊಹ್ಲಿ ಮಾಸ್ಕ್

ನ.05 ರಂದು ವಿರಾಟ್ ಕೊಹ್ಲಿ 35 ನೇ ಜನ್ಮದಿನವನ್ನು ಆಚರಿಸಿಕೊಳ್ಳಲಿದ್ದಾರೆ. ಅದೇ ದಿನದಂದು ಈಡೆನ್ ಗಾರ್ಡನ್ ನಲ್ಲಿ ಭಾರತ-ದಕ್ಷಿಣ ಆಫ್ರಿಕಾ ನಡುವೆ ವಿಶ್ವಕಪ್ ಪಂದ್ಯ ನಡೆಯಲಿದೆ. 
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ
Updated on

ನವದೆಹಲಿ: ನ.05 ರಂದು ವಿರಾಟ್ ಕೊಹ್ಲಿ 35 ನೇ ಜನ್ಮದಿನವನ್ನು ಆಚರಿಸಿಕೊಳ್ಳಲಿದ್ದಾರೆ. ಅದೇ ದಿನದಂದು ಈಡೆನ್ ಗಾರ್ಡನ್ ನಲ್ಲಿ ಭಾರತ-ದಕ್ಷಿಣ ಆಫ್ರಿಕಾ ನಡುವೆ ವಿಶ್ವಕಪ್ ಪಂದ್ಯ ನಡೆಯಲಿದೆ. 

ವಿರಾಟ್ ಕೊಹ್ಲಿ ಜನ್ಮದಿನದಂದು ಪಂದ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬಂಗಾಳ ಕ್ರಿಕೆಟ್ ಅಸೋಸಿಯೇಷನ್ (ಸಿಎಬಿ) 70 ಸಾವಿರ ಕೊಹ್ಲಿ ಮಾಸ್ಕ್ ಗಳನ್ನು ಪಂದ್ಯದ ವೀಕ್ಷಕರಿಗೆ ವಿತರಿಸಲು ಮುಂದಾಗಿದೆ.
 
ಪಂದ್ಯದ ಎಲ್ಲಾ ಟಿಕೆಟ್ ಗಳೂ ಬಿಕರಿಯಾಗಿದ್ದು,  ಕ್ರೀಡಾಂಗಣ ಭರ್ತಿಯಾಗಿರಲಿದೆ. ಮಾಸ್ಕ್ ವಿತರಣೆಯ ಹೊರತಾಗಿ, ಸಿಎಬಿ ಪಂದ್ಯ ಪ್ರಾರಂಭವಾಗುವುದಕ್ಕೂ ಮುನ್ನ ಕೇಕ್ ಕತ್ತರಿಸಿ, ಕೊಹ್ಲಿಗೆ ಸನ್ಮಾನ ಮಾಡುವ ಕಾರ್ಯಕ್ರಮವನ್ನೂ ಹೊಂದಿದೆ.
 
"ಈ ಬಗ್ಗೆ ಐಸಿಸಿಯಿಂದ ಅನುಮೋದನೆಯನ್ನು ಪಡೆಯುವ ವಿಶ್ವಾಸವಿದೆ. ನಾವು ವಿರಾಟ್‌ಗಾಗಿ ನ.05 ನ್ನು ವಿಶೇಷ ದಿನವಾಗಿಸಲು ಬಯಸುತ್ತೇವೆ" ಎಂದು ಸಿಎಬಿ ಅಧ್ಯಕ್ಷ ಸ್ನೇಹಶಿಶ್ ಗಂಗೂಲಿ ಕೋಲ್ಕತ್ತಾದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

"ಕ್ರೀಡಾಂಗಣದಲ್ಲಿರುವ ಪ್ರತಿಯೊಬ್ಬ ಅಭಿಮಾನಿ ಕೊಹ್ಲಿ ಅವರು ಒಳಗೆ ಹೋಗುವಾಗ ಮುಖವಾಡಗಳನ್ನು ಧರಿಸಬೇಕೆಂದು ನಾವು ಬಯಸುತ್ತೇವೆ. ಅಂದು ನಾವು ಸುಮಾರು 70,000 ಮಾಸ್ಕ್‌ಗಳನ್ನು ವಿತರಿಸಲು ಯೋಜಿಸಿದ್ದೇವೆ" ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com