ಪಾಕಿಸ್ತಾನದಲ್ಲಿ ಉತ್ತಮ ಆತಿಥ್ಯ ಸಿಕ್ಕಿದೆ, ನಮ್ಮನ್ನು ಚೆನ್ನಾಗಿ ನಡೆಸಿಕೊಂಡರು: ಬಿಸಿಸಿಐ ಅಧ್ಯಕ್ಷ ಬಿನ್ನಿ

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಅಧ್ಯಕ್ಷ ರೋಜರ್ ಬಿನ್ನಿ ಅವರು ನೆರೆಯ ರಾಷ್ಟ್ರಕ್ಕೆ ತಮ್ಮ ಅಲ್ಪಾವಧಿಯ ಭೇಟಿಯಲ್ಲಿ ಪಾಕಿಸ್ತಾನದಲ್ಲಿ ಪಡೆದ ಆತ್ಮೀಯ ಮತ್ತು ಸೌಹಾರ್ದದ ಬಗ್ಗೆ ಮಾತನಾಡಿದ್ದಾರೆ. ಇನ್ನು ಮಂಡಳಿಯ ಉಪಾಧ್ಯಕ್ಷ ರಾಜೀವ್ ಶುಕ್ಲಾ...
ರೋಜರ್ ಬಿನ್ನಿ
ರೋಜರ್ ಬಿನ್ನಿ

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಅಧ್ಯಕ್ಷ ರೋಜರ್ ಬಿನ್ನಿ ಅವರು ನೆರೆಯ ರಾಷ್ಟ್ರಕ್ಕೆ ತಮ್ಮ ಅಲ್ಪಾವಧಿಯ ಭೇಟಿಯಲ್ಲಿ ಪಾಕಿಸ್ತಾನದಲ್ಲಿ ಪಡೆದ ಆತ್ಮೀಯ ಮತ್ತು ಸೌಹಾರ್ದದ ಬಗ್ಗೆ ಮಾತನಾಡಿದ್ದಾರೆ. ಇನ್ನು ಮಂಡಳಿಯ ಉಪಾಧ್ಯಕ್ಷ ರಾಜೀವ್ ಶುಕ್ಲಾ ಅವರು ಉದ್ವಿಗ್ನ ರಾಜತಾಂತ್ರಿಕ ಸಂಬಂಧವನ್ನು ಹಂಚಿಕೊಳ್ಳುವ ಉಭಯ ದೇಶಗಳ ನಡುವೆ ಕ್ರಿಕೆಟ್ ಸೇತುವೆಯಾಗಬಹುದು ಎಂದು ಪ್ರತಿಪಾದಿಸಿದರು.

ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಆಹ್ವಾನದ ಮೇರೆಗೆ ಏಷ್ಯಾಕಪ್ ಪಂದ್ಯಗಳನ್ನು ವೀಕ್ಷಿಸಿದ ನಂತರ ಬಿನ್ನಿ ಮತ್ತು ಶುಕ್ಲಾ ಬುಧವಾರ ಅಟ್ಟಾರಿ-ವಾಘಾ ಗಡಿಯ ಮೂಲಕ ಭಾರತಕ್ಕೆ ಮರಳಿದರು. 17 ವರ್ಷಗಳ ಬಳಿಕ ಇಬ್ಬರು ಬಿಸಿಸಿಐ ಪದಾಧಿಕಾರಿಗಳು ಪಾಕಿಸ್ತಾನಕ್ಕೆ ತೆರಳಿದ್ದು ಇದೇ ಮೊದಲ ನಿದರ್ಶನ.

ಪಾಕಿಸ್ತಾನದ ನಾವು ಉತ್ತಮ ಸಭೆ ನಡೆಸಿದ್ದೇವೆ. ನಾವು ಉತ್ತಮ ಆತಿಥ್ಯವನ್ನು ಸ್ವೀಕರಿಸಿದ್ದೇವೆ. ಅವರು ನಮ್ಮನ್ನು ಚೆನ್ನಾಗಿ ನೋಡಿಕೊಂಡರು. ಕ್ರಿಕೆಟ್ ನೋಡುವುದು ಮತ್ತು ಅವರೊಂದಿಗೆ ಕುಳಿತು ವಿಷಯಗಳನ್ನು ಚರ್ಚಿಸುವುದು ಮುಖ್ಯ ಅಜೆಂಡಾವಾಗಿತ್ತು. ಒಟ್ಟಾರೆಯಾಗಿ, ಇದು ತುಂಬಾ ಒಳ್ಳೆಯ ಪ್ರವಾಸವಾಗಿತ್ತು ಎಂದು ಬಿನ್ನಿ ತಮ್ಮ ಆಗಮನದ ನಂತರ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

2008ರಲ್ಲಿ ಏಷ್ಯಾಕಪ್‌ಗಾಗಿ ಭಾರತ ತಂಡವೊಂದು ಕೊನೆಯ ಬಾರಿ ಪಾಕಿಸ್ತಾನಕ್ಕೆ ತೆರಳಿತ್ತು. ಪಾಕಿಸ್ತಾನ ಕೊನೆಯದಾಗಿ 2006ರಲ್ಲಿ ಭಾರತ ನಡುವಿನ ದ್ವಿಪಕ್ಷೀಯ ಸರಣಿಯನ್ನು ಆಯೋಜಿಸಿತ್ತು. ಇನ್ನು ಪಾಕಿಸ್ತಾನವು ಕೊನೆಯದಾಗಿ 2012ರಲ್ಲಿ ಸೀಮಿತ ಓವರ್ ಗಳ ಸರಣಿ ಆಡಲು ಭಾರತ ಪ್ರವಾಸ ಕೈಗೊಂಡಿತ್ತು. ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಕ್ರಿಕೆಟ್ ಅನ್ನು ಪುನರಾರಂಭಿಸುವ ಸಾಧ್ಯತೆಯ ಬಗ್ಗೆ ಕೇಳಿದಾಗ, ಬಿನ್ನಿ ಅವರು ಆ ಬಗ್ಗೆ ಈಗಲೇ ಏನನ್ನು ಹೇಳಲು ಸಾಧ್ಯವಿಲ್ಲ ಎಂದು ಪುನರುಚ್ಚರಿಸಿದರು.

ಈ ಬಗ್ಗೆ ಬಿಸಿಸಿಐ ಏನನ್ನು ಹೇಳಲು ಸಾಧ್ಯವಿಲ್ಲ. ಇದು ಸರ್ಕಾರದ ಸಮಸ್ಯೆ, ಅವರು ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ನಾವು ಕಾದು ನೋಡಬೇಕಾಗಿದೆ. ಇದು ಸಂಭವಿಸಬಹುದು ಏಕೆಂದರೆ (ಏಕದಿನ) ವಿಶ್ವಕಪ್ ಗಾಗಿ ಪಾಕಿಸ್ತಾನ ತಂಡ ಭಾರತಕ್ಕೆ ಬರುತ್ತಿದೆ ಎಂದರು. ಭಾರತ ಮತ್ತು ಪಾಕಿಸ್ತಾನವು ಪ್ರಸ್ತುತ ಶ್ರೀಲಂಕಾದಲ್ಲಿ ಏಷ್ಯಾಕಪ್‌ನಲ್ಲಿ ತೊಡಗಿಸಿಕೊಂಡಿದೆ. ಅಕ್ಟೋಬರ್ 14 ರಂದು ಅಹಮದಾಬಾದ್‌ನಲ್ಲಿ ನಡೆಯಲಿರುವ ಬಹು ನಿರೀಕ್ಷಿತ ವಿಶ್ವಕಪ್ ಹಣಾಹಣಿಯಲ್ಲಿ ಮತ್ತೆ ಕಣಕ್ಕಿಳಿಯಲಿವೆ.

ಪಿಸಿಬಿಯ ಆತಿಥ್ಯವನ್ನು ಹೊಗಳಿದ ರಾಜೀವ್ ಶುಕ್ಲಾ
ಸಭೆಯು ತುಂಬಾ ಚೆನ್ನಾಗಿತ್ತು. ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ನಮ್ಮನ್ನು ಬಹಳ ಚೆನ್ನಾಗಿ ನೋಡಿಕೊಂಡಿತು. ಭದ್ರತೆಯು ಅದ್ಭುತವಾಗಿತ್ತು. ಎಲ್ಲಾ ವ್ಯವಸ್ಥೆಗಳು ಅಸಾಧಾರಣವಾಗಿತ್ತು. ಇದು ಕ್ರಿಕೆಟ್‌ಗೆ ಸದ್ಭಾವನೆಯ ಭೇಟಿಯಾಗಿದ್ದು ಅದು ಉತ್ತಮವಾಗಿ ನಡೆಯಿತು. ಏಷ್ಯನ್ ಕ್ರಿಕೆಟ್ ಕೌನ್ಸಿಲ್(ಎಸಿಸಿ) ಅಧ್ಯಕ್ಷ ಜಯ್ ಶಾ ಅವರು ಬಿಸಿಸಿಐ ಕಾರ್ಯದರ್ಶಿಯೂ ಆಗಿದ್ದಾರೆ. ಆದ್ದರಿಂದ ನಾವು ಈ ಭೇಟಿಯನ್ನು ಮಾಡಿದ್ದೇವೆ. ಬಿಸಿಸಿಐ ಎಲ್ಲಾ ಎಸಿಸಿ ಸದಸ್ಯರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com