ಏಷ್ಯಾ ಕಪ್ 2023: ಮಳೆಯಿಂದಾಗಿ ಭಾರತ-ಪಾಕಿಸ್ತಾನ ಪಂದ್ಯ ಸ್ಥಗಿತ, ಫಲಿತಾಂಶ ಘೋಷಣೆಗೆ ಇದು ಕಡ್ಡಾಯ!!

ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಸೂಪರ್ 4 ಹಂತದ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ಮತ್ತೆ ಮಳೆಯಾರ ಅಡ್ಡಿಯಾಗಿದ್ದು, ಪಂದ್ಯದ ಫಲಿತಾಂಶದ ಮೇಲೆ ಕಾರ್ಮೋಡ ಕವಿದಿದೆ.
ಭಾರತ-ಪಾಕ್ ಪಂದ್ಯಕ್ಕೆ ಮಳೆ ಅಡ್ಡಿ
ಭಾರತ-ಪಾಕ್ ಪಂದ್ಯಕ್ಕೆ ಮಳೆ ಅಡ್ಡಿ
Updated on

ಕೊಲಂಬೋ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಸೂಪರ್ 4 ಹಂತದ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ಮತ್ತೆ ಮಳೆಯಾರ ಅಡ್ಡಿಯಾಗಿದ್ದು, ಪಂದ್ಯದ ಫಲಿತಾಂಶದ ಮೇಲೆ ಕಾರ್ಮೋಡ ಕವಿದಿದೆ.

ಹೌದು.. ಶ್ರೀಲಂಕಾದ ಕೊಲಂಬೋದ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಸೂಪರ್ 4 ಹಂತದ ಭಾರತ ಮತ್ತು ಪಾಕಿಸ್ತಾನಕ್ಕೆ ಮತ್ತೆ ಮಳೆರಾಯ ಅಡ್ಡಿಯಾಗಿದ್ದಾನೆ. ನಿನ್ನೆ ಆರಂಭವಾಗಿದ್ದ ಪಂದ್ಯಕ್ಕೆ ಮಳೆ ಅಡ್ಡಿಯಾಗಿತ್ತು. ಹೀಗಾಗಿ ಪಂದ್ಯವನ್ನು ಮೀಸಲು ದಿನವಾದ ಇಂದಿಗೆ ಮುಂದೂಡಿಕೆ ಮಾಡಲಾಗಿತ್ತು. ಇಂದು ಪಂದ್ಯ ಮುಂದುವರೆಸಿದ ಟೀಂ ಇಂಡಿಯಾ ಭರ್ಜರಿ ಬ್ಯಾಟಿಂಗ್ ಮಾಡಿ ನಿಗಧಿತ 50 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 356 ರನ್ ಗಳ ಕಲೆಹಾಕಿದೆ.s

ಟೀಂ ಇಂಡಿಯಾ ಪರ ರೋಹಿತ್ ಶರ್ಮಾ (56 ರನ್, 49 ಎಸೆತ, 4 ಸಿಕ್ಸರ್, 6 ಬೌಂಡರಿ) ಮತ್ತು ಶುಭ್ ಮನ್ ಗಿಲ್ (58 ರನ್, 52 ಎಸೆತ, 10 ಬೌಂಡರಿ) ಅರ್ಧಶತಕಗಳನ್ನು ಸಿಡಿಸಿದರೆ, ವಿರಾಟ್ ಕೊಹ್ಲಿ (ಅಜೆಯೇ 122 ರನ್, 94 ಎಸೆತ, 3 ಸಿಕ್ಸರ್, 9 ಬೌಂಡರಿ) ಮತ್ತು ಕೆಎಲ್ ರಾಹುಲ್ (ಅಜೆಯೇ 111 ರನ್, 106 ಎಸೆತ, 2 ಸಿಕ್ಸರ್, 12 ಬೌಂಡರಿ) ಅಮೋಘ ಶತಕ ಸಿಡಿಸಿ ತಂಡದ ಬೃಹತ್ ಮೊತ್ತಕ್ಕೆ ಕಾರಣರಾದರು.

ಭಾರತ ನೀಡಿದ 357 ರನ್ ಗಳ ಗುರಿಯನ್ನು ಬೆನ್ನು ಹತ್ತಿರುವ ಪಾಕಿಸ್ತಾನ ತಂಡ 11 ಓವರ್ ನಲ್ಲಿ 2 ವಿಕೆಟ್ ನಷ್ಟಕ್ಕೆ 44 ರನ್ ಗಳಿಸಿದ್ದು, ನಾಯಕ ಬಾಬರ್ ಆಜಂ (10 ರನ್)ಮತ್ತು ಇಮಾಮ್ ಉಲ್ ಹಕ್ (9 ರನ್) ಔಟಾಗಿದ್ದಾರೆ. ಆರಂಭಿಕ ಆಟಗಾರ ಫಕರ್ ಜಮಾನ್ (14 ರನ್, 22 ಎಸೆತ) ಮತ್ತು ಮೊಹಮದ್ ರಿಜ್ವಾನ್ (1 ರನ್, 2 ಎಸೆತ) ಕ್ರೀಸ್ ನಲ್ಲಿದ್ದಾರೆ. ಮಳೆಯಿಂದಾಗಿ ಆಟ ಸ್ಥಗಿತವಾಗಿದೆ.

ಪಂದ್ಯದ ಫಲಿತಾಂಶದ ಮೇಲೆ ಮಳೆ ಕಾರ್ಮೋಡ
ಇನ್ನು ಇಂದಿನ ಪಂದ್ಯದ ಫಲಿತಾಂಶ ಘೋಷಣೆಗಾಗಿ ಪಾಕಿಸ್ತಾನ ತಂಡ ಕನಿಷ್ಟ 20 ಓವರ್ ಗಳ ಬ್ಯಾಟಿಂಗ್ ನಡೆಸಬೇಕಿದೆ. ಒಂದು ವೇಳೆ ಮಳೆ ನಿಂತು ಪಾಕಿಸ್ತಾನ ಬ್ಯಾಟಿಂಗ್ ಮುಂದುವರೆಸಿದರೆ ಆಗ ಆ ತಂಡಕ್ಕೆ ಪರಿಷ್ಕೃತ ರನ್ ಗಳ ಟಾರ್ಗೆಟ್ ನೀಡಲಾಗುತ್ತದೆ. ಕ್ರಿಕೆಟ್ ಪಂಡಿತರ ಲೆಕ್ಕಾಚಾರದಂತೆ ಪಾಕಿಸ್ತಾನಕ್ಕೆ ಗೆಲ್ಲಲು 20 ಓವರ್ ಗಳಲ್ಲಿ 200 ರನ್ ಅಥವಾ ಅದಕ್ಕಿಂತಲೂ ಹೆಚ್ಚಿನ ರನ್ ಗಳ ಗುರಿ ನೀಡುವ ಸಾಧ್ಯತೆ. ಈ ರನ್ ಲೆಕ್ಕಾಚಾರವನ್ನು ಅವರ ಹಾಲಿ ರನ್ ರೇಟ್ ಮತ್ತು ವಿರೋಧಿ ತಂಡ ಬ್ಯಾಟಿಂಗ್ ರನ್ ರೇಟ್ ನೋಡಿ ಲೆಕ್ಕಾಚಾರ ಹಾಕಲಾಗುತ್ತದೆ ಎಂದು ಹೇಳಲಾಗಿದೆ.

ಒಂದು ವೇಳೆ ಮಳೆ ಮುಂದುವರೆದು ಪಾಕಿಸ್ತಾನ ತಂಡದ ಬ್ಯಾಟಿಂಗ್ ಸಾಧ್ಯವಾಗದೇ ಇದ್ದರೇ ಆಗ ಪಂದ್ಯವನ್ನು ಸಂಪೂರ್ಣ ಸ್ಥಗಿತಗೊಳಿಸಿ ಉಭಯ ತಂಡಗಳಿಗೆ ತಲಾ ಒಂದೊಂದು ಅಂಕ ನೀಡಲಾಗುತ್ತದೆ.

ಹಾಲಿ ಪರಿಸ್ಥಿತಿಗಳ ಪ್ರಕಾರ ಈ ಪಂದ್ಯದಲ್ಲಿ ಭಾರತವೇ ಗೆಲ್ಲುವ ಫೇವರಿಟ್ ಆಗಿದ್ದು, ಮಳೆಯಿಂದ ಪಂದ್ಯ ರದ್ದಾದರೆ ಭಾರತ ತಂಡಕ್ಕೆ ಹಿನ್ನಡೆಯಾದಂತಾಗುತ್ತದೆ.
 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com