IPL 2023: ಪಂದ್ಯಕ್ಕೆ ಮಳೆ ಅಡ್ಡಿ; ಡಕ್ವರ್ತ್ ಲೂಯಿಸ್ ಪ್ರಕಾರ KKR ವಿರುದ್ಧ 7 ರನ್ ನಿಂದ ಗೆದ್ದ ಪಂಜಾಬ್ ಕಿಂಗ್ಸ್!
ಪಂಜಾಬ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯಕ್ಕೆ ಮಳೆ ಅಡ್ಡಿಯಾಗಿದ್ದು ಡಕ್ವರ್ತ್ ಲೂಯಿಸ್ ಪ್ರಕಾರ ಕೆಕೆಆರ್ ವಿರುದ್ಧ ಪಂಜಾಬ್ ಕಿಂಗ್ಸ್ 7 ರನ್ ನಿಂದ ಗೆಲುವು ಸಾಧಿಸಿದ್ದಾರೆ.
Published: 01st April 2023 10:59 PM | Last Updated: 01st April 2023 10:59 PM | A+A A-

ಪಂಜಾಬ್ ಕಿಂಗ್ಸ್
ಮೊಹಾಲಿ: ಪಂಜಾಬ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯಕ್ಕೆ ಮಳೆ ಅಡ್ಡಿಯಾಗಿದ್ದು ಡಕ್ವರ್ತ್ ಲೂಯಿಸ್ ಪ್ರಕಾರ ಕೆಕೆಆರ್ ವಿರುದ್ಧ ಪಂಜಾಬ್ ಕಿಂಗ್ಸ್ 7 ರನ್ ನಿಂದ ಗೆಲುವು ಸಾಧಿಸಿದ್ದಾರೆ.
ಮೊಹಾಲಿಯಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಪಂಜಾಬ್ 20 ಓವರ್ ಗಳಲ್ಲಿ 191 ರನ್ ಗಳಿಸಿತು. ಮಳೆಯ ಕಾರಣಕ್ಕೆ ಪಂದ್ಯವನ್ನು ನಿಲ್ಲಿಸಲಾಯಿತು. ಈ ವೇಳೆ ಪಂದ್ಯ ಗೆಲ್ಲಲು ಕೆಕೆಆರ್ ಗೆ ಡಕ್ವರ್ತ್ ಲೂಯಿಸ್ ವಿಧಾನದ ಪ್ರಕಾರ 16 ಓವರ್‌ಗಳಲ್ಲಿ 154 ರನ್ ಗಳಿಸಬೇಕಾಗಿತ್ತು. ಆದರೆ ತಂಡವು 146/7 ಸ್ಕೋರ್ ಮಾತ್ರ ಸಿಡಿಸಿದ್ದರಿಂದ 7 ರನ್ ಗಳಿಂದ ಸೋಲು ಅನುಭವಿಸಬೇಕಾಯಿತು.
ಪಂಜಾಬ್ ಪರ ರಾಜಪಕ್ಸೆ 32 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 50 ರನ್ ಗಳಿಸಿ ಪಂಜಾಬ್ ಗೆಲುವಿಗೆ ಅಡಿಪಾಯ ಹಾಕಿದರೆ. ನಂತರ ನಾಯಕ ಶಿಖರ್ ಧವನ್ 29 ಎಸೆತಗಳಲ್ಲಿ 6 ಬೌಂಡರಿ ಸಹಿತ 40 ರನ್ ಗಳಿಸಿದರು.
ಇದನ್ನೂ ಓದಿ: ಐಪಿಎಲ್ 2023: ಉದ್ಘಾಟನಾ ಪಂದ್ಯದಲ್ಲಿ 5 ವಿಕೆಟ್ ಗಳಿಂದ ಸಿಎಸ್ ಕೆ ಮಣಿಸಿ ಗುಜರಾತ್ ಟೈಟನ್ಸ್ ಶುಭಾರಂಭ
ಕೆಕೆಆರ್ ಟಾಸ್ ಗೆದ್ದು ಬೌಲಿಂಗ್ ಮಾಡಲು ನಿರ್ಧರಿಸಿತು ಆದರೆ ಪಂಜಾಬ್ ಮೊದಲ ಎಸೆತದಿಂದಲೇ ಆಕ್ರಮಣಕಾರಿ ವಿಧಾನವನ್ನು ಅನುಸರಿಸಿತು. ಆರಂಭಿಕ ಆಟಗಾರ ಪ್ರಭಾಸಿಮ್ರಾನ್ ಸಿಂಗ್ 12 ಎಸೆತಗಳಲ್ಲಿ ಎರಡು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳೊಂದಿಗೆ 23 ರನ್ ಗಳಿಸಿದರು, ಆದರೆ ಅವರು ಎರಡನೇ ಓವರ್‌ನ ಕೊನೆಯ ಎಸೆತದಲ್ಲಿ ಔಟಾದರು.
ಕೆಕೆಆರ್ ಪರ ಗುರಿ ಬೆನ್ನತ್ತಿದ ಆಂಡ್ರೆ ರಸೆಲ್ ತಂಡವನ್ನು ಗೆಲುವಿನತ್ತ ಮುನ್ನಡೆಸುತ್ತಿದ್ದರು. ಆದರೆ ಸ್ಯಾಮ್ ಕರನ್ ಅವರನ್ನು 15ನೇ ಓವರ್‌ನಲ್ಲಿ ಔಟ್ ಮಾಡುವ ಮೂಲಕ ಪಂಜಾಬ್ ಗೆಲುವಿನ ಭರವಸೆಗೆ ಇಂಬು ನೀಡಿದರು. ರಸೆಲ್ 19 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳೊಂದಿಗೆ 35 ರನ್ ಗಳಿಸಿ ಔಟಾದರು.