ಐಪಿಎಲ್ 2023: ಆರ್ ಸಿಬಿ ವಿರುದ್ಧ ಚೆನ್ನೈಗೆ 8 ರನ್ ಗಳ ರೋಚಕ ಜಯ
ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಐಪಿಎಲ್ನ 24ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 8 ರನ್ ಗಳ ರೋಚಕ ಗೆಲುವು ಸಾಧಿಸಿದೆ.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಚೆನ್ನೈ ಸೂಪರ್ ಕಿಂಗ್ಸ್, ಡೆವೊನ್ ಕಾನ್ವೆ(83) ಮತ್ತು ಶಿವಂ ದುಬೆ(52) ಅವರ ಭರ್ಜರಿ ಅರ್ಧಶತಕಗಳ ನೆರವಿನಿಂದ ನಿಗದಿತ 20 ಓವರ್ನಲ್ಲಿ 6 ವಿಕೆಟ್ ನಷ್ಟಕ್ಕೆ 226 ರನ್ ಗಳ ಬೃಹತ್ ಮೊತ್ತ ಸೇರಿಸಿತು.
ಗೆಲುವಿಗೆ 227 ರನ್ ಗಳ ಬೃಹತ್ ಮೊತ್ತ ಬೆನ್ನತ್ತಿದ ಆರ್ ಸಿಬಿ, ನಾಯಕ ಫಾಪ್ ಮತ್ತು ಮ್ಯಾಕ್ಸ್ ವೆಲ್ ಅವರ ಭರ್ಜರಿ ಪ್ರದರ್ಶನದ ಹೊರತಾಗಿಯೂ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 218 ರನ್ ಗಳಿಸಲಷ್ಟೇ ಶಕ್ತವಾಯ್ತು. ಆ ಮೂಲಕ ಕೇವಲ 8 ರನ್‌ಗಳಿಂದ ಸಿಎಸ್‌ಕೆ ರೋಚಕ ಜಯ ಸಾಧಿಸಿದೆ.
ಈ ಗೆಲುವಿನೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪಾಯಿಂಟ್ಸ್ ಟೇಬಲ್ನಲ್ಲಿ ಮೂರು ಸ್ಥಾನ ಮೇಲೆಕ್ಕೇರಿದೆ.
ಚೆನ್ನೈ ಪರ ತುಷಾರ್ ದೇಶಪಾಂಡೆ ನಾಲ್ಕು ಓವರ್ ಮಾಡಿ 45 ರನ್ ನೀಡಿ ಪ್ರಮುಖ ಮೂರು ವಿಕೆಟ್ ಪಡೆದು ಮಿಂಚಿದರು. ಉಳದಂತೆ ಆಕಾಶ್ ಸಿಂಗ್ 1 ವಿಕೆಟ್, ಮಹೀಶಾ ತೀಕ್ಷಣ್ 1 ವಿಕೆಟ್, ಮತೇಶಾ ಪ್ರತಿರಣ್ 2 ವಿಕೆಟ್ ಮತ್ತು ಮೋಯಿನ್ ಅಲಿ 1 ವಿಕೆಟ್ ಪಡೆಯುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.