ಐಪಿಎಲ್ 2023: ಸನ್ ರೈಸರ್ಸ್ ಹೈದರಾಬಾದ್ ಗೆ ಬಿಗ್ ಶಾಕ್, ಗಾಯಾಳು ವಾಷಿಂಗ್ಟನ್ ಸುಂದರ್ ಟೂರ್ನಿಯಿಂದಲೇ ಔಟ್!
ಐಪಿಎಲ್ 2023ರ ಟೂರ್ನಿ ನಿರ್ಣಾಯಕ ಹಂತ ತಲುಪುತ್ತಿರುವ ಹೊತ್ತಿನಲ್ಲೇ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ದೊಡ್ಡ ಆಘಾತ ಎದುರಾಗಿದ್ದು, ತಂಡದ ಪ್ರಮುಖ ಆಟಗಾರ ವಾಷಿಂಗ್ಟನ್ ಸುಂದರ್ ಟೂರ್ನಿಯಿಂದಲೇ ಔಟ್ ಆಗಿದ್ದಾರೆ.
Published: 27th April 2023 07:42 PM | Last Updated: 27th April 2023 08:48 PM | A+A A-

ವಾಷಿಂಗ್ಟನ್ ಸುಂದರ್
ಹೈದರಾಬಾದ್: ಐಪಿಎಲ್ 2023ರ ಟೂರ್ನಿ ನಿರ್ಣಾಯಕ ಹಂತ ತಲುಪುತ್ತಿರುವ ಹೊತ್ತಿನಲ್ಲೇ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ದೊಡ್ಡ ಆಘಾತ ಎದುರಾಗಿದ್ದು, ತಂಡದ ಪ್ರಮುಖ ಆಟಗಾರ ವಾಷಿಂಗ್ಟನ್ ಸುಂದರ್ ಟೂರ್ನಿಯಿಂದಲೇ ಔಟ್ ಆಗಿದ್ದಾರೆ.
ಹೌದು.. ಗಾಯದ ಸಮಸ್ಯೆಗೆ ತುತ್ತಾಗಿ ಕಳೆದ ಕೆಲ ಪಂದ್ಯಗಳಿಂದ ಮೈದಾನಕ್ಕಿಳಿಯದ ವಾಷಿಂಗ್ಟನ್ ಸುಂದರ್ ಇದೀಗ ಟೂರ್ನಿಯಿಂದಲೇ ಹೊರ ಬಿದ್ದಿದ್ದಾರೆ. 23 ವರ್ಷದ ವಾಷಿಂಗ್ಟನ್ ಅವರಿಗೆ ಮಂಡಿರಜ್ಜು (ಹ್ಯಾಮ್‌ಸ್ಟಿಂಗ್) ಗಾಯವಾಗಿದೆ. ಅವರು ಈ ಟೂರ್ನಿಯಲ್ಲಿ ಏಳು ಪಂದ್ಯಗಳನ್ನು ಆಡಿದ್ದಾರೆ. ಮೂರು ವಿಕೆಟ್ ಹಾಗೂ 60 ರನ್ ಗಳಿಸಿದ್ದಾರೆ.
ಇದನ್ನೂ ಓದಿ: ಟಿ20 ರ‍್ಯಾಂಕಿಂಗ್: ಅಗ್ರಸ್ಥಾನದಲ್ಲಿ ಸೂರ್ಯಕುಮಾರ್ ಹೊರತುಪಡಿಸಿ, ಟಾಪ್ 10ನಲ್ಲಿ ಭಾರತದ ಬ್ಯಾಟರ್ ಗಳೇ ಇಲ್ಲ!!
"ವಾಷಿಂಗ್ಟನ್ ಸುಂದರ್ ಅವರು ಮಂಡಿರಜ್ಜು ಗಾಯದಿಂದಾಗಿ ಐಪಿಎಲ್ 2023 ರಿಂದ ಹೊರಗುಳಿದಿದ್ದಾರೆ. ಶೀಘ್ರ ಚೇತರಿಕಗಾಗಿ ಹಾರೈಸುತ್ತೇವೆ” ಎಂದು ಹೈದರಾಬಾದ್ ತಂಡ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದೆ.
ಹೈದರಾಬಾದ್‌ನಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಹಿಂದಿನ ಪಂದ್ಯದಲ್ಲಿ ಸುಂದರ್ ಈ ಋತುವಿನ ಮೊದಲ ವಿಕೆಟ್ ನ್ನು ಪಡೆದಿದ್ದರು. ಸುಂದರ್ ಒಂದೇ ಓವರ್‌ನಲ್ಲಿ 3 ವಿಕೆಟ್ ಗಳನ್ನು ಉರುಳಿಸಿದ್ದರು.
ಇದನ್ನೂ ಓದಿ: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್: ಸೂರ್ಯಕುಮಾರ್ ಯಾದವ್‌ಗೆ ಶಾಕ್; ರಹಾನೆ, ಶಾರ್ದೂಲ್‌ಗೆ ಅವಕಾಶ
ಇತ್ತೀಚಿನ ವರ್ಷಗಳಲ್ಲಿ ಆಲ್ ರೌಂಡರ್ ಸುಂದರ್ ಗಾಯಗಳಿಂದ ಬಳಲುತ್ತಿದ್ದಾರೆ. ಹೋದ ಬಾರಿಯ ಐಪಿಎಲ್‌ನಲ್ಲಿಯೂ ಅವರು ಗಾಯಗೊಂಡಿದ್ದರು. ಗಾಯದ ಸಮಸ್ಯೆಗಳು ಹಾಗೂ COVID-19 ಸೋಂಕಿನಿಂದಾಗಿ ಸುಂದರ್ 2022 ರ ಬಹುಪಾಲು ಋತುವನ್ನು ಕಳೆದುಕೊಂಡಿದ್ದರು.