ನಾಲ್ಕನೇ ಟಿ-20 ಪಂದ್ಯ: ವೆಸ್ಟ್ ಇಂಡೀಸ್ ವಿರುದ್ಧ ಭಾರತಕ್ಕೆ ಭರ್ಜರಿ 9 ವಿಕೆಟ್ ಗಳ ಜಯ
ಲಾಡರ್ಹಿಲ್ ನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧ 4ನೇ ಟಿ-20 ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಮತ್ತು ಶುಭ್ ಮನ್ ಗಿಲ್ ಗಿಲ್ ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಭಾರತ ಭರ್ಜರಿ 9 ವಿಕೆಟ್ ಗಳಿಂದ ಗೆಲುವು ಸಾಧಿಸಿದೆ.
Published: 13th August 2023 12:19 AM | Last Updated: 14th August 2023 02:37 PM | A+A A-

ಶುಭ್ ಮನ್ ಗಿಲ್ ಬ್ಯಾಟಿಂಗ್ ವೈಖರಿ
ಫ್ಲೋರಿಡಾ: ಲಾಡರ್ಹಿಲ್ ನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧ 4ನೇ ಟಿ-20 ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಮತ್ತು ಶುಭ್ ಮನ್ ಗಿಲ್ ಗಿಲ್ ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಭಾರತ ಭರ್ಜರಿ 9 ವಿಕೆಟ್ ಗಳಿಂದ ಗೆಲುವು ಸಾಧಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 178 ರನ್ ಗಳಿಸಿತು. ವೆಸ್ಟ್ ಇಂಡೀಸ್ ಪರ ಸಾಯ್ ಹೋಪ್ 45,ಶಿಮ್ರಾನ್ ಹೆಟ್ಮಿಯರ್ 61 ರನ್ ಗಳಿಸಿದ್ದು ಹೊರತುಪಡಿಸಿದರೆ ಬೇರೆ ಯಾವ ಆಟಗಾರರು ಹೆಚ್ಚು ರನ್ ಗಳಿಸುವಲ್ಲಿ ವಿಫಲರಾದರು.
ನಂತರ ವೆಸ್ಟ್ ಇಂಡೀಸ್ ನೀಡಿದ 179 ರನ್ ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಟೀಂ ಇಂಡಿಯಾ 17 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 179 ರನ್ ಗಳಿಸುವ ಮೂಲಕ ಗೆಲುವಿನ ನಗೆ ಬೀರಿತು. ಭಾರತ ಪರ ಯಶಸ್ವಿ ಜೈಸ್ವಾಲ್ ಅಜೇಯ 84, ಶುಭ್ ಮನ್ ಗಿಲ್ 71 ರನ್ ಗಳಿಸಿದರೆ ತಿಲಕ್ ವರ್ಮಾ ಔಟಾಗದೆ 7 ರನ್ ಗಳಿಸಿದರು.
ಇದನ್ನೂ ಓದಿ: 3ನೇ ಟಿ20: ಮಹತ್ವದ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು, ರನ್ ದಾಖಲೆ ಬರೆದ ಸೂರ್ಯ, ತಿಲಕ್ ವರ್ಮಾ
ಇದರಿಂದಾಗಿ ಭಾರತ 9 ವಿಕೆಟ್ ಗಳಿಂದ ಗೆಲುವಿನ ನಗೆ ಬೀರಿತು. ಈ ಮೂಲಕ 2-2 ಅಂತರದಲ್ಲಿ ಸರಣಿ ಸಮವಾಗಿದೆ, ಯಶಸ್ವಿ ಜೈಸ್ವಾಲ್ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.