ಟಿ20: ಸರಣಿಯ ಮೊದಲ ಪಂದ್ಯ ಸೋತು, ಸರಣಿ ಜಯ: ಟಿಂ ಇಂಡಿಯಾ ದಾಖಲೆ

3ನೇ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಭರ್ಜರಿಯಾಗಿ ಸೋಲಿಸಿದ ಭಾರತ ತಂಡ ಈ ಗೆಲುವಿನ ಮೂಲಕ ಮತ್ತೊಂದು ಗಮನಾರ್ಹ ಸಾಧನೆ ಮಾಡಿದ್ದು, ಸರಣಿಯ ಮೊದಲ ಪಂದ್ಯ ಸೋತು ಅತಿ ಹೆಚ್ಚು ಸರಣಿ ಜಯಿಸಿದ ತಂಡ ಎಂಬ ಕೀರ್ತಿಗೆ ಭಾಜನವಾಗಿದೆ.
ಟೀಂ ಇಂಡಿಯಾ
ಟೀಂ ಇಂಡಿಯಾ
Updated on

ಅಹ್ಮದಾಬಾದ್: 3ನೇ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಭರ್ಜರಿಯಾಗಿ ಸೋಲಿಸಿದ ಭಾರತ ತಂಡ ಈ ಗೆಲುವಿನ ಮೂಲಕ ಮತ್ತೊಂದು ಗಮನಾರ್ಹ ಸಾಧನೆ ಮಾಡಿದ್ದು, ಸರಣಿಯ ಮೊದಲ ಪಂದ್ಯ ಸೋತು ಅತಿ ಹೆಚ್ಚು ಸರಣಿ ಜಯಿಸಿದ ತಂಡ ಎಂಬ ಕೀರ್ತಿಗೆ ಭಾಜನವಾಗಿದೆ.

ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 168ರನ್ ಗಳ ಅಂತರದಲ್ಲಿ ಭರ್ಜರಿ ಜಯ ಗಳಿಸಿತು. ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ತಂಡ ನಿಗಧಿತ 50 ಓವರ್ ಗಳಲ್ಲಿ ಶುಭ್ ಮನ್ ಗಿಲ್ ರ ಶತಕ (ಅಜೇಯ 126ರನ್)ದ ನೆರವಿನಿಂದ 4 ವಿಕೆಟ್ ನಷ್ಟಕ್ಕೆ  234 ರನ್ ಪೇರಿಸಿತ್ತು. ಈ ಬೃಹತ್ ಮೊತ್ತವನ್ನು ಬೆನ್ನು ಹತ್ತಿದ ನ್ಯೂಜಿಲೆಂಡ್ ತಂಡ ಕೇವಲ 12.1 ಓವರ್ ನಲ್ಲಿ 66 ರನ್ ಗಳಿಗೆ ಆಲೌಟ್ ಆಯಿತು. ಆ ಮೂಲಕ ನ್ಯೂಜಿಲೆಂಡ್ 168ರನ್ ಗಳ ಅಂತರದ ಹೀನಾಯ ಸೋಲು ಕಂಡಿತ್ತು.

ಟೀಂ ಇಂಡಿಯಾ ಈ ವರೆಗೂ ಕನಿಷ್ಠ 3 ಪಂದ್ಯಗಳ ಸರಣಿಯಲ್ಲಿ 10 ಟಿ20 ಸರಣಿಗಳಲ್ಲಿ ಮೊದಲ ಪಂದ್ಯ ಸೋತಿದ್ದು, ಈ ಪೈಕಿ 7 ಸರಣಿಗಳನ್ನು ಜಯಿಸಿದೆ. 2 ಸರಣಿಗಳು ಡ್ರಾದಲ್ಲಿ ಅಂತ್ಯವಾಗಿದ್ದರೆ, 2019ರಲ್ಲಿ ನಡೆದಿದ್ದ ಇದೇ ನ್ಯೂಜಿಲೆಂಡ್ ವಿರುದ್ಧದ ಸರಣಿಯನ್ನು ಕೈ ಚೆಲ್ಲಿತ್ತು. ಆ ಮೂಲಕ ಕನಿಷ್ಠ 3 ಪಂದ್ಯಗಳ ಟಿ20 ಸರಣಿಯಲ್ಲಿ ಮೊದಲ ಪಂದ್ಯ ಸೋತು ಅತೀ ಹೆಚ್ಚು ಸರಣಿಗಳನ್ನು ಜಯಿಸಿದ ಶ್ರೇಯ ಭಾರತಕ್ಕೆ ದಕ್ಕಿದೆ.
 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com