ಐಸಿಸಿ ಮಹಿಳಾ ಟಿ20 ವಿಶ್ವಕಪ್: ಪಾಕಿಸ್ತಾನ ವಿರುದ್ಧ ಭಾರತ ಮಹಿಳಾ ತಂಡಕ್ಕೆ 7 ವಿಕೆಟ್ ಗಳ ಭರ್ಜರಿ ಜಯ
ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯ ಇಂದಿನ ಹೈವೋಲ್ಟೇಜ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 7 ವಿಕೆಟ್ ಗಳ ಅಂತರದಲ್ಲಿ ಭರ್ಜರಿಯಾಗಿ ಮಣಿಸಿದೆ.
Published: 12th February 2023 10:00 PM | Last Updated: 12th February 2023 10:09 PM | A+A A-

ಪಾಕಿಸ್ತಾನ ವಿರುದ್ಧ ಭಾರತಕ್ಕೆ ಜಯ
ಕೇಪ್ಟೌನ್: ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯ ಇಂದಿನ ಹೈವೋಲ್ಟೇಜ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 7 ವಿಕೆಟ್ ಗಳ ಅಂತರದಲ್ಲಿ ಭರ್ಜರಿಯಾಗಿ ಮಣಿಸಿದೆ.
ದಕ್ಷಿಣ ಆಫ್ರಿಕಾದ ಕೇಪ್ಟೌನ್ ನ ನ್ಯೂಲ್ಯಾಂಡ್ಸ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ನೀಡಿದ 150ರನ್ ಗಳ ಸವಾಲಿನ ಗುರಿಯನ್ನು ಭಾರತ ಮಹಿಳಾ ತಂಡ ಕೇವಲ 19 ಓವರ್ ಗಳಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿದೆ.
T20 WC 2023. India Women Won by 7 Wicket(s) https://t.co/OyRDtC9SWK #INDvPAK #T20WorldCup
— BCCI Women (@BCCIWomen) February 12, 2023
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 149 ರನ್ ಗಳಿಸಿತ್ತು. ಬಿಸ್ಮಾ ಮಾರೂಫ್ ಔಟಾಗದೆ 68, ಆಯೇಷಾ ನಸೀಮ್ ಔಟಾಗದೆ 43 ರನ್ ಗಳಿಸಿ ತಂಡಕ್ಕೆ ಆಸರೆಯಾಗಿದ್ದರು.
ಪಾಕಿಸ್ತಾನ ನೀಡಿದ 150 ರನ್ ಗುರಿ ಬೆನ್ನುಹತ್ತಿದ ಭಾರತ 19 ಓವರ್‌ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು. ಭಾರತದ ಪರ ಜೆಮಿಮಾ ರಾಡ್ರಿಗಸ್ ಔಟಾಗದೆ 53, ರಿಚಾ ಘೋಷ್ ಔಟಾಗದೆ 31, ಶಫಾಲಿ ವರ್ಮಾ 33, ಯಾಸ್ತಿಕಾ ಭಾಟಿಯಾ 17, ಹರ್ಮನ್‌ಪ್ರೀತ್ ಕೌರ್ 16 ರನ್ ಗಳಿಸಿದರು.
ಪಾಕ್ ಪರ ನಶ್ರಾ ಸಂಧು 2, ಸಾದಿಯಾ ಇಕ್ಬಾಲ್ ಒಂದು ವಿಕೆಟ್ ಪಡೆದರು.