ಸೆಲ್ಫಿಗೆ ನಿರಾಕರಣೆ, ಕ್ರಿಕೆಟ್ ಆಟಗಾರ ಪೃಥ್ವಿ ಶಾ ಸ್ನೇಹಿತನ ಕಾರಿನ ಮೇಲೆ ದಾಳಿ
ವಾಣಿಜ್ಯ ನಗರಿ ಮುಂಬೈಯಲ್ಲಿ ಫೈವ್ ಸ್ಟಾರ್ ಹೋಟೆಲ್ ವೊಂದರ ಮುಂಭಾಗ ಸೆಲ್ಫಿಗೆ ನಿರಾಕರಿಸಿದ ನಂತರ ಜನರ ಗುಂಪೊಂದು ಕ್ರಿಕೆಟ್ ಆಟಗಾರ ಪೃಥ್ವಿ ಶಾ ಅವರ ಸ್ನೇಹಿತನ ಕಾರಿನ ಮೇಲೆ ದಾಳಿ ನಡೆಸಿದ್ದಾರೆ. ಬುಧವಾರ ರಾತ್ರಿ ಈ ಘಟನೆ ನಡೆದಿದೆ. ಈ ಸಂಬಂಧ ಎಂಟು ಜನರ ವಿರುದ್ಧ ವಾಯವ್ಯ ಮುಂಬೈನ ಓಶಿವಾರಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Published: 16th February 2023 04:30 PM | Last Updated: 16th February 2023 06:48 PM | A+A A-

ಪೃಥ್ವಿ ಶಾ
ಮುಂಬೈ: ವಾಣಿಜ್ಯ ನಗರಿ ಮುಂಬೈಯಲ್ಲಿ ಫೈವ್ ಸ್ಟಾರ್ ಹೋಟೆಲ್ ವೊಂದರ ಮುಂಭಾಗ ಸೆಲ್ಫಿಗೆ ನಿರಾಕರಿಸಿದ ನಂತರ ಜನರ ಗುಂಪೊಂದು ಕ್ರಿಕೆಟ್ ಆಟಗಾರ ಪೃಥ್ವಿ ಶಾ ಅವರ ಸ್ನೇಹಿತನ ಕಾರಿನ ಮೇಲೆ ದಾಳಿ ನಡೆಸಿದ್ದಾರೆ. ಬುಧವಾರ ರಾತ್ರಿ ಈ ಘಟನೆ ನಡೆದಿದೆ. ಈ ಸಂಬಂಧ ಎಂಟು ಜನರ ವಿರುದ್ಧ ವಾಯವ್ಯ ಮುಂಬೈನ ಓಶಿವಾರಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಆರೋಪಿಗಳು ಕಾರನ್ನು ಹಿಂಬಾಲಿಸಿ ಹಣ ನೀಡದಿದ್ದರೆ ಸುಳ್ಳು ಪ್ರಕರಣದ ಬೆದರಿಕೆ ಹಾಕಿರುವುದಾಗಿ ಶಾ ಅವರ ಸ್ನೇಹಿತ ಆಶಿಶ್ ಸುರೇಂದ್ರ ಯಾದವ್ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ. ಪೃಥ್ವಿ ಶಾ ವಾಯುವ್ಯ ಮುಂಬೈನ ಸಾಂತಾ ಕ್ರೂಜ್‌ನಲ್ಲಿರುವ ಪಂಚತಾರಾ ಹೋಟೆಲ್‌ಗೆ ಊಟಕ್ಕೆ ಹೋಗಿದ್ದಾಗ ಅಪರಿಚಿತರು ಸೆಲ್ಫಿಗೆ ಒತ್ತಾಯಿಸಿದ್ದಾರೆ.
ಇಬ್ಬರು ವ್ಯಕ್ತಿಗಳು ಸೆಲ್ಫಿಗೆ ಪೃಥ್ವಿ ಶಾ ಅವರನ್ನು ಒತ್ತಾಯಿಸಿದ್ದಾರೆ. ಆದರೆ, ಇದೇ ಗುಂಪು ಮತ್ತೆ ಬಂದಿದ್ದು, ಇತರ ಆರೋಪಿಗಳೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಕೇಳಿದ್ದಾರೆ. ಈ ವೇಳೆ ಶಾ ನಿರಾಕರಿಸಿದಾಗ, ಶಾ ಅವರ ಸ್ನೇಹಿತ ರೆಸ್ಟೋರೆಂಟ್ ಮ್ಯಾನೇಜರ್ ಗೆ ಕರೆ ಮಾಡಿ, ದೂರು ನೀಡಿದ್ದಾರೆ. ಆರೋಪಿಗಳನ್ನು ಹೊಟೇಲ್‌ನಿಂದ ಹೊರಹೋಗುವಂತೆ ವ್ಯವಸ್ಥಾಪಕರು ಹೇಳಿದ್ದಾರೆ.
ಈ ಘಟನೆಯಿಂದ ಕೆರಳಿದ ವ್ಯಕ್ತಿಗಳು ಹೋಟೆಲ್ ಹೊರಗಡೆ ಬೇಸ್ ಬಾಲ್ ಬ್ಯಾಟ್ ಗಳಿಂದ ಶಾ ಅವರ ಸ್ನೇಹಿತನ ಕಾರನ್ನು ಧ್ವಂಸಗೊಳಿಸಿದ್ದು, ಹಿಂಭಾಗದ ಗಾಜುಗಳನ್ನು ಒಡೆದು ಹಾಕಿದ್ದಾರೆ. ಘಟನೆ ಕುರಿತು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 384, 143, 148, 149, 427, 504 ಮತ್ತು 506 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.