ಐಸಿಸಿ ಮಹಿಳಾ ಟಿ-20 ವಿಶ್ವಕಪ್: 11 ರನ್ ಗಳಿಂದ ಭಾರತ ಮಣಿಸಿದ ಇಂಗ್ಲೆಂಡ್
ಸೆಂಟ್ ಜಾರ್ಜ್ ಪಾರ್ಕ್ ಸ್ಟೇಡಿಯಂ ನಲ್ಲಿ ನಡೆದ ಟಿ-20 ವಿಶ್ವಕಪ್ ನ ಗ್ರೂಪ್ ಬಿ ಹಂತದ ಪಂದ್ಯದಲ್ಲಿ ಇಂಗ್ಲೆಂಡ್ ತಂಡ 11ರನ್ ಗಳಿಂದ ಭಾರತವನ್ನು ಸೋಲಿಸಿದೆ. ಇದರೊಂದಿಗೆ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯ ಭಾರತದ ಕನಸು ಭಗ್ನವಾಗಿದೆ.
Published: 18th February 2023 11:14 PM | Last Updated: 20th February 2023 03:08 PM | A+A A-

ಸ್ಮೃತಿ ಮಂದಾನ
ದಕ್ಷಿಣ ಆಫ್ರಿಕಾ: ಸೆಂಟ್ ಜಾರ್ಜ್ ಪಾರ್ಕ್ ಸ್ಟೇಡಿಯಂ ನಲ್ಲಿ ನಡೆದ ಟಿ-20 ವಿಶ್ವಕಪ್ ನ ಗ್ರೂಪ್ ಬಿ ಹಂತದ ಪಂದ್ಯದಲ್ಲಿ ಇಂಗ್ಲೆಂಡ್ ತಂಡ 11ರನ್ ಗಳಿಂದ ಭಾರತವನ್ನು ಸೋಲಿಸಿದೆ. ಇದರೊಂದಿಗೆ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯ ಭಾರತದ ಕನಸು ಭಗ್ನವಾಗಿದೆ.
ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಮಾಡಿದ ಭಾರತ ತಂಡ ಇಂಗ್ಲೆಂಡ್ ತಂಡವನ್ನು ಏಳು ವಿಕೆಟ್ ನಷ್ಟಕ್ಕೆ 151 ರನ್ ಗಳಿಗೆ ಕಟ್ಟಿ ಹಾಕಿತು. ಭಾರತ ಪರ ರೇಣುಕಾ ಸಿಂಗ್ 15 ರನ್ ಗಳಿಗೆ 5 ವಿಕೆಟ್ ಪಡೆದರು.
Agra, UP | England beat India by 11 runs in today's match in #ICCWomensT20WorldCup
Cricketer Deepti Sharma's mother, Sushila Sharma says, "I hope that in next matches, they don't repeat today's mistakes. Thakur (Renuka Thakur) bowled well. Everyone player should perform well." pic.twitter.com/kgmkMwgT6D— ANI UP/Uttarakhand (@ANINewsUP) February 18, 2023
ನಂತರ ಇಂಗ್ಲೆಂಡ್ ನೀಡಿದ 151ರನ್ ಗಳ ಗುರಿ ಬೆನ್ನತ್ತಿದ್ದ ಭಾರತೀಯ ಆಟಗಾರ್ತಿಯರು 5 ವಿಕೆಟ್ ನಷ್ಟಕ್ಕೆ 140 ರನ್ ಗಳಿಸಲಷ್ಟೇ ಶಕ್ತವಾದರು. ಭಾರತ ಪರ ಸ್ಮೃತಿ ಮಂದಾನ 52 ರನ್ ಗಳಿಸಿದರೆ, ರಿಚಾ ಘೋಷ್ 47 ರನ್ ಗಳಿಸಿದರು. ಇದರೊಂದಿಗೆ ಇಂಗ್ಲೆಂಡ್ ತಂಡ 11 ರನ್ ಗಳಿಂದ ಭಾರತವನ್ನು ಮಣಿಸುವಲ್ಲಿ ಯಶಸ್ವಿಯಾಯಿತು.