100ನೇ ಪಂದ್ಯಕ್ಕಾಗಿ ಪೂಜಾರಗಾಗಿ ರೋಹಿತ್ ಶರ್ಮಾ ವಿಕೆಟ್ ತ್ಯಾಗ: ನಾಯಕ ನಡೆ ಶ್ಲಾಘಿಸಿದ ನೆಟ್ಟಿಗರು, ವಿಡಿಯೋ ವೈರಲ್

ಬಾರ್ಡರ್-ಗವಾಸ್ಕರ್ ಟ್ರೋಫಿಯ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ 6 ವಿಕೆಟ್‌ಗಳಿಂದ ಆಸ್ಟ್ರೇಲಿಯಾವನ್ನು ಮಣಿಸಿ ನಾಲ್ಕು ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. 
ರೋಹಿತ್ ಶರ್ಮಾ
ರೋಹಿತ್ ಶರ್ಮಾ

ನವದೆಹಲಿ: ಬಾರ್ಡರ್-ಗವಾಸ್ಕರ್ ಟ್ರೋಫಿಯ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ 6 ವಿಕೆಟ್‌ಗಳಿಂದ ಆಸ್ಟ್ರೇಲಿಯಾವನ್ನು ಮಣಿಸಿ ನಾಲ್ಕು ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. 

ಇನ್ನು ಇದೇ ಪಂದ್ಯದಲ್ಲಿ ಚೇತೇಶ್ವರ ಪೂಜಾರ ಜತೆಗಿನ ತಪ್ಪು ತಿಳುವಳಿಕೆಯಿಂದ ರೋಹಿತ್ 7ನೇ ಓವರ್ ನ 5ನೇ ಎಸೆತದಲ್ಲಿ ವಿಕೆಟ್ ತ್ಯಾಗ ಮಾಡಿದರು. ಅದರ ನಂತರ, ಟ್ವಿಟರ್‌ನಲ್ಲಿ ಅಭಿಮಾನಿಗಳು ಭಾರತೀಯ ನಾಯಕನ ನಿಸ್ವಾರ್ಥ ತ್ಯಾಗಕ್ಕಾಗಿ ಶ್ಲಾಘಿಸಿದ್ದಾರೆ.

ಭಾರತದ ನಾಯಕ ರೋಹಿತ್ ಶರ್ಮಾ ತಮ್ಮ ನಿಸ್ವಾರ್ಥ ಆಟದ ಶೈಲಿಗೆ ಹೆಸರುವಾಸಿಯಾಗಿದ್ದಾರೆ. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ಎರಡನೇ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ರೋಹಿತ್ ಇದೇ ರೀತಿ ನಡೆದುಕೊಂಡಿದ್ದಾರೆ. 

ಇನಿಂಗ್ಸ್ ನ ಏಳನೇ ಓವರ್ ನಲ್ಲಿ ಎರಡು ರನ್ ಗಳಿಸುವಷ್ಟರಲ್ಲಿ ವಿಕೆಟ್ ಕಳೆದುಕೊಂಡರು. ಈ ವೇಳೆ ಪೂಜಾರ ಮತ್ತು ಅವರ ನಡುವೆ ಹೊಂದಾಣಿಕೆ ಆಗಲಿಲ್ಲ. ಫೀಲ್ಡರ್ ಅನ್ನು ನೋಡಿದ ನಂತರ ರೋಹಿತ್ ಶರ್ಮಾ ತನ್ನ ಕ್ರೀಸ್‌ಗೆ ಹಿಂತಿರುಗಲು ಮುಂದಾದರೂ ಆದರೆ ಅಷ್ಟರೊಳಗೆ ಪೂಜಾರ ತಮ್ಮ ಕಡೆಗೆ ತಲುಪಿದರು. ರೋಹಿತ್ ಪೂಜಾರರನ್ನು ಉಳಿಸಲು ಕ್ರೀಸ್‌ನಿಂದ ಹೊರಬಂದು ವಿಕೆಟ್ ಕಳೆದುಕೊಂಡರು. ಈ ವಿಡಿಯೋ ವೈರಲ್ ಆಗಿದೆ.

ದೆಹಲಿ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 113 ರನ್‌ಗಳಿಗೆ ಸೋತಿದೆ. ನಿನ್ನೆಯ ಸ್ಕೋರ್‌ಗಿಂತ ಮುಂದೆ ಆಡಿದ ಕಾಂಗರೂ ತಂಡ 9 ವಿಕೆಟ್‌ಗಳನ್ನು ಬೇಗನೆ ಕಳೆದುಕೊಂಡಿತು. ರವೀಂದ್ರ ಜಡೇಜಾ ಕೇವಲ 42 ರನ್ ನೀಡಿ ಏಳು ವಿಕೆಟ್ ಪಡೆದರು. ಮೊದಲ ಇನ್ನಿಂಗ್ಸ್‌ನಲ್ಲಿ 3 ವಿಕೆಟ್‌ಗಳನ್ನು ಕಬಳಿಸಿದ ಅವರು ಈ ಮೂಲಕ ಜಡೇಜಾ ಒಟ್ಟು 10 ವಿಕೆಟ್‌ಗಳನ್ನು ಪಡೆದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com