
ಸೂರ್ಯಕುಮಾರ್ ಯಾದವ್
ರಾಜ್ಕೋಟ್(ರಾಜಸ್ಥಾನ): ಶ್ರೀಲಂಕಾ ವಿರುದ್ಧದ ಮೂರನೇ ಹಾಗೂ ನಿರ್ಣಾಯಕ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಸ್ಫೋಟಕ ಬ್ಯಾಟಿಂಗ್ ಮಾಡಿದ್ದು ದಾಖಲೆಯ ಶತಕ ಸಿಡಿಸಿದ್ದಾರೆ.
ರಾಜ್ಕೋಟ್ ನಲ್ಲಿ ನಡೆಯುತ್ತಿರುವ ಮೂರನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ಪರ ಯುವಕ ಕ್ರಿಕೆಟಿಗರು ಅಬ್ಬರಿಸಿದರು. ಲಂಕಾ ಬೌಲರ್ ಗಳ ಮೇಲೆ ದಂಡೆತ್ತಿ ಹೋದ ಸೂರ್ಯಕುಮಾರ್ ಯಾದವ್ 45 ಎಸೆತಗಳಲ್ಲಿ 100 ರನ್ ಬಾರಿಸುವ ಮೂಲಕ ಮೂರನೇ ಟಿ20 ಶತಕ ಬಾರಿಸಿದ್ದಾರೆ.
ಇದನ್ನೂ ಓದಿ: ICC T20 ವರ್ಷದ ಕ್ರಿಕೆಟಿಗ ಪ್ರಶಸ್ತಿಗೆ ಸೂರ್ಯಕುಮಾರ್ ಯಾದವ್, ಸ್ಮೃತಿ ಮಂದಾನ ನಾಮನಿರ್ದೇಶನ!
ಸೂರ್ಯಕುಮಾರ್ ಯಾದವ್ 51 ಎಸೆತಗಳಲ್ಲಿ ಅಜೇಯ 112 ರನ್ ಬಾರಿಸಿದ್ದಾರೆ. ಇನ್ನು ಭಾರತದ ಪರ ಟಿ20ಯಲ್ಲಿ ಅತೀ ಹೆಚ್ಚು ಶತಕ ಸಿಡಿಸಿದ ಎರಡನೇ ಆಟಗಾರ ಎಂಬ ಖ್ಯಾತಿಗೆ ಸೂರ್ಯಕುಮಾರ್ ಯಾದವ್ ಭಾಜನರಾಗಿದ್ದಾರೆ. ರೋಹಿತ್ ಶರ್ಮಾ ಭಾರತ ಪರ 4 ಶತಕ ಸಿಡಿಸಿದ್ದು ಅಗ್ರಸ್ಥಾನದಲ್ಲಿದ್ದಾರೆ.
ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತ ಪರ ಅತ್ಯಾಧಿಕ ರನ್ ಸಿಡಿಸಿ ಬ್ಯಾಟರ್ ಗಳು
* 122*(61): ವಿರಾಟ್ ಕೊಹ್ಲಿ ವಿರುದ್ಧ ಅಫ್ಜಿಂಗ್ - ದುಬೈ 2022
* 118(43): ರೋಹಿತ್ ಶರ್ಮಾ vs ಶ್ರೀಲಂಕಾ - ಇಂದೋರ್ 2017
* 117(55): ಸೂರ್ಯಕುಮಾರ್ ಯಾದವ್ ವಿರುದ್ಧ ಇಂಗ್ಲೆಂಡ್ - ನಾಟಿಂಗ್ಹ್ಯಾಮ್ 2022
* 111*(51): ಸೂರ್ಯಕುಮಾರ್ ಯಾದವ್ ವಿರುದ್ಧ - ಮೌಂಟ್ ಮೌಂಗನುಯಿ 2022
* 111*(61): ರೋಹಿತ್ ಶರ್ಮಾ ವಿರುದ್ಧ ವೆಸ್ಟ್ ಇಂಡೀಸ್ - ಲಖನೌ 2018
*112*(51): ಸೂರ್ಯಕುಮಾರ್ ಯಾದವ್ ವಿರುದ್ಧ ಶ್ರೀಲಂಕಾ- ರಾಜ್ಕೋಟ್ 2022