ನ್ಯೂಜಿಲೆಂಡ್ ವಿರುದ್ಧ ವೈಯುಕ್ತಿಕ ಗರಿಷ್ಠ ರನ್ ದಾಖಲೆ; ಸಚಿನ್ ಸೇರಿ ಕ್ರಿಕೆಟ್ ದೈತ್ಯರನ್ನೇ ಹಿಂದಿಕ್ಕಿದ 23 ವರ್ಷದ ಶುಭ್ ಮನ್ ಗಿಲ್!
ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತದ ಬೃಹತ್ ಮೊತ್ತಕ್ಕೆ ಕಾರಣವಾಗಿರುವ ಶುಭ್ ಮನ್ ಗಿಲ್ ಕಿವೀಸ್ ವಿರುದ್ಧದ ಕ್ರಿಕೆಟ್ ದೈತ್ಯರು ಸೃಷ್ಟಿಸಿದ್ದ ದಾಖಲೆಗಳನ್ನೇ ಹಿಂದಿಕ್ಕಿದ್ದಾರೆ.
Published: 18th January 2023 06:24 PM | Last Updated: 18th January 2023 06:48 PM | A+A A-

ಶುಭ್ ಮನ್ ಗಿಲ್ ದಾಖಲೆ
ಹೈದರಾಬಾದ್: ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತದ ಬೃಹತ್ ಮೊತ್ತಕ್ಕೆ ಕಾರಣವಾಗಿರುವ ಶುಭ್ ಮನ್ ಗಿಲ್ ಕಿವೀಸ್ ವಿರುದ್ಧದ ಕ್ರಿಕೆಟ್ ದೈತ್ಯರು ಸೃಷ್ಟಿಸಿದ್ದ ದಾಖಲೆಗಳನ್ನೇ ಹಿಂದಿಕ್ಕಿದ್ದಾರೆ.
ಹೌದು.. ಹೈದರಾಬಾದ್ ನಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಶುಭ್ ಮನ್ ಗಿಲ್ ಭರ್ಜರಿ ಬ್ಯಾಟಿಂಗ್ ಮೂಲಕ ಏಕದಿನ ಕ್ರಿಕೆಟ್ ನಲ್ಲಿ ತಮ್ಮ ಚೊಚ್ಚಲ ದ್ಪಿಶತಕ ಸಿಡಿಸಿದರು. ಕೇವಲ 149 ಎಸೆತಗಳನ್ನು ಎದುರಿಸಿದ ಗಿಲ್ 9 ಸಿಕ್ಸರ್ ಮತ್ತು 19 ಬೌಂಡರಿಗಳ ನೆರವಿನಿಂದ 208ರನ್ ಗಳನ್ನು ಕಲೆಹಾಕಿದರು. ಆ ಮೂಲಕ ಏಕದಿನ ಕ್ರಿಕೆಟ್ ವೃತ್ತಿ ಜೀವನದ ಚೊಚ್ಚಲ ದ್ವಿಶತಕ ಸಿಡಿಸಿದರು.
ಇದನ್ನೂ ಓದಿ: ನ್ಯೂಜಿಲೆಂಡ್ ವಿರುದ್ಧ ದಾಖಲೆಯ ದ್ವಿಶತಕ: ಈ ಸಾಧನೆ ಮಾಡಿದ ಅತ್ಯಂತ ಚಿಕ್ಕ ಪ್ರಾಯದ ಕ್ರಿಕೆಟಿಗ ಗಿಲ್!
ಅಂತೆಯೇ ಈ ದ್ವಿಶತಕ ಮೂಲಕ ಗಿಲ್ ಕ್ರಿಕೆಟ್ ಲೋಕದ ಅಪರೂಪದ ಸಾಧನೆ ಮಾಡಿದ್ದು, ಏಕದಿನ ಕ್ರಿಕೆಟ್ ನಲ್ಲಿ ದ್ವಿಶತಕ ಸಿಡಿಸಿದ ಅತ್ಯಂತ ಚಿಕ್ಕ ವಯಸ್ಸಿನ ಕ್ರಿಕೆಟಿಗ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಅಂತೆಯೇ ಜಾಗತಿಕ ಕ್ರಿಕೆಟ್ ನಲ್ಲಿ ನ್ಯೂಜಿಲೆಂಡ್ ವಿರುದ್ಧ ಗರಿಷ್ಛ ವೈಯುಕ್ತಿಕ ಸ್ಕೋರ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಗಿಲ್ ಅಗ್ರಸ್ಥಾನಕ್ಕೇರಿದ್ದಾರೆ.
ಇದನ್ನೂ ಓದಿ: ಮೊದಲ ಏಕದಿನ ಪಂದ್ಯ: ಗಿಲ್ ದ್ವಿಶತಕ, ಕಿವೀಸ್ ಗೆ ಗೆಲ್ಲಲು 350 ರನ್ ಬೃಹತ್ ಗುರಿ ನೀಡಿದ ಭಾರತ
ಈ ಹಿಂದೆ ಈ ಪಟ್ಟಿಯಲ್ಲಿ ಭಾರತದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಇದ್ದರು. ಸಚಿನ್ 1999ರಲ್ಲಿ ಇದೇ ಹೈದರಾಬಾದ್ ನಲ್ಲಿ ಅಜೇಯ 186 ರನ್ ಗಳಿಸಿದ್ದರು. ಇದು ಈ ವರೆಗಿನ ನ್ಯೂಜಿಲೆಂಡ್ ವಿರುದ್ಧ ಬ್ಯಾಟರ್ ವೊಬ್ಬರ ವೈಯುಕ್ತಿಕ ಗರಿಷ್ಠ ರನ್ ಆಗಿತ್ತು. ಆದರೆ ಇಂದು ಗಿಲ್ ದ್ವಿಶತಕದ ಮೂಲಕ 208 ರನ್ ಗಳಿಸಿ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದ್ದಾರೆ.
ಇದನ್ನೂ ಓದಿ: ನ್ಯೂಜಿಲೆಂಡ್ ವಿರುದ್ಧ ಮೊದಲ ODI: ಒಂದೇ ಪಂದ್ಯದಲ್ಲಿ 6 ಮಂದಿ ಕ್ರಿಕೆಟ್ ದೈತ್ಯರ ದಾಖಲೆ ಮುರಿದ ಶುಭ್ ಮನ್ ಗಿಲ್
ಉಳಿದಂತೆ 2007ರಲ್ಲಿ ಹ್ಯಾಮಿಲ್ಟನ್ ನಲ್ಲಿ ನಡೆದ ಪಂದ್ಯದಲ್ಲಿ ಆಸಿಸ್ ದೈತ್ಯ ಮ್ಯಾಥ್ಯೂ ಹೇಡನ್ ಅಜೇಯ 181ರನ್ ಗಳಿಸಿದ್ದರು. ಇದು ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದು, 1994ರಲ್ಲಿ ಸೆಂಚುರಿಯನ್ ಪಂದ್ಯದಲ್ಲಿ ಕ್ಯಾಲಘನ್ ಅಜೇಯ 169 ರನ್ ಸಿಡಿಸಿದ್ದರು. ಇದು ಪಟ್ಟಿಯಲ್ಲಿ ನಾಲ್ತನೇ ಸ್ಥಾನದಲ್ಲಿದೆ.
STAT: Highest individual scores against NZ in ODIs
208 Shubman Gill Hyderabad 2023
186* S Tendulkar Hyderabad 1999
181* M Hayden Hamilton 2007
169* D Callaghan Centurion 1994