ನ್ಯೂಜಿಲೆಂಡ್ ವಿರುದ್ಧ ದಾಖಲೆಯ ದ್ವಿಶತಕ: ಈ ಸಾಧನೆ ಮಾಡಿದ ಅತ್ಯಂತ ಚಿಕ್ಕ ಪ್ರಾಯದ ಕ್ರಿಕೆಟಿಗ ಗಿಲ್!
ನ್ಯೂಜಿಲೆಂಡ್ ವಿರುದ್ಧ ದಾಖಲೆಯ ದ್ವಿಶತಕ ಸಿಡಿಸುವ ಮೂಲಕ ಭಾರತದ ಶುಭ್ ಮನ್ ಗಿಲ್ ಕ್ರಿಕೆಟ್ ಲೋಕದ ಅಪರೂಪದ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
Published: 18th January 2023 05:46 PM | Last Updated: 18th January 2023 06:48 PM | A+A A-

ಶುಭ್ ಮನ್ ಗಿಲ್
ಹೈದರಾಬಾದ್: ನ್ಯೂಜಿಲೆಂಡ್ ವಿರುದ್ಧ ದಾಖಲೆಯ ದ್ವಿಶತಕ ಸಿಡಿಸುವ ಮೂಲಕ ಭಾರತದ ಶುಭ್ ಮನ್ ಗಿಲ್ ಕ್ರಿಕೆಟ್ ಲೋಕದ ಅಪರೂಪದ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ಹೌದು.. ಹೈದರಾಬಾದ್ ನಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಶುಭ್ ಮನ್ ಗಿಲ್ ಭರ್ಜರಿ ಬ್ಯಾಟಿಂಗ್ ಮೂಲಕ ಏಕದಿನ ಕ್ರಿಕೆಟ್ ನಲ್ಲಿ ತಮ್ಮ ಚೊಚ್ಚಲ ದ್ಪಿಶತಕ ಸಿಡಿಸಿದರು. ಕೇವಲ 149 ಎಸೆತಗಳನ್ನು ಎದುರಿಸಿದ ಗಿಲ್ 9 ಸಿಕ್ಸರ್ ಮತ್ತು 19 ಬೌಂಡರಿಗಳ ನೆರವಿನಿಂದ 208ರನ್ ಗಳನ್ನು ಕಲೆಹಾಕಿದರು. ಆ ಮೂಲಕ ಏಕದಿನ ಕ್ರಿಕೆಟ್ ವೃತ್ತಿ ಜೀವನದ ಚೊಚ್ಚಲ ದ್ವಿಶತಕ ಸಿಡಿಸಿದರು.
ಇದನ್ನೂ ಓದಿ: ಮೊದಲ ಏಕದಿನ ಪಂದ್ಯ: ಗಿಲ್ ದ್ವಿಶತಕ, ಕಿವೀಸ್ ಗೆ ಗೆಲ್ಲಲು 350 ರನ್ ಬೃಹತ್ ಗುರಿ ನೀಡಿದ ಭಾರತ
ಅಂತೆಯೇ ಈ ದ್ವಿಶತಕ ಮೂಲಕ ಗಿಲ್ ಕ್ರಿಕೆಟ್ ಲೋಕದ ಅಪರೂಪದ ಸಾಧನೆ ಮಾಡಿದ್ದು, ಏಕದಿನ ಕ್ರಿಕೆಟ್ ನಲ್ಲಿ ದ್ವಿಶತಕ ಸಿಡಿಸಿದ ಅತ್ಯಂತ ಚಿಕ್ಕ ವಯಸ್ಸಿನ ಕ್ರಿಕೆಟಿಗ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಗಿಲ್ ತಮ್ಮ 23ನೇ ವರ್ಷದಲ್ಲಿ ಏಕದಿನ ದ್ವಿಶತಕ ಸಿಡಿಸಿದ್ದು, ಆ ಮೂಲಕ ಅತ್ಯಂತ ಚಿಕ್ಕ ವಯಸ್ಸಿಗೆ ಏಕದಿನ ದ್ವಿಶತಕ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದ್ದಾರೆ. ಇಂದಿಗೆ ಗಿಲ್ ಗೆ ವಯಸ್ಸು 23 ವರ್ಷ 132 ದಿನಗಳಾಗಿವೆ.
ಅಂತೆಯೇ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವ ಭಾರತದ ಮತ್ತೋರ್ವ ಆಟಗಾರ ಇಶಾನ್ ಕಿಶನ್ 2022ರಲ್ಲಿ ಬಾಂಗ್ಲಾದೇಶ ವಿರುದ್ಧ ದ್ವಿಶತಕ ಸಿಡಿಸಿದ್ದರು. ಅವರ ದ್ವಿಶತಕದ ವೇಳೆ ಅವರ ವಯಸ್ಸು 24 ವರ್ಷ 145 ದಿನಗಳಾಗಿದ್ದವು. ಮೂರವೇ ಸ್ಥಾನದಲ್ಲಿರುವ ರೋಹಿತ್ ಶರ್ಮಾ 2013ರಲ್ಲಿ ಬೆಂಗಳೂರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ದ್ವಿಶತಕ ಸಿಡಿಸಿದ್ದರು. ಅಂದಿಗೆ ರೋಹಿತ್ ಶರ್ಮಾ ವಯಸ್ಸು 26 ವರ್ಷ 186 ದಿನಗಳಾಗಿದ್ದವು.
STAT: Youngest to score 200 in an ODI
23y 132d Shubman Gill vs NZ Hyderabad 2023
24y 145d Ishan Kishan vs Ban Chattogram 2022
26y 186d Rohit Sharma vs Aus Bengaluru 2013