ರೋ'ಹಿಟ್'-ಗಿಲ್ ಭರ್ಜರಿ ಬ್ಯಾಟಿಂಗ್: ನ್ಯೂಜಿಲೆಂಡ್ ವಿರುದ್ಧ ದಾಖಲೆಯ ಜೊತೆಯಾಟ
ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಬ್ಯಾಟಿಂಗ್ ಮೂಲಕ ಗಮನ ಸೆಳೆದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತು ಶುಭ್ ಮನ್ ಗಿಲ್ ಜೋಡಿ ದಾಖಲೆಯ ಜೊತೆಯಾಟವಾಡಿದೆ.
Published: 24th January 2023 06:20 PM | Last Updated: 24th January 2023 06:20 PM | A+A A-

ರೋಹಿತ್ ಶರ್ಮಾ-ಶುಭ್ ಮನ್ ಗಿಲ್ ಜೋಡಿ
ಇಂದೋರ್: ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಬ್ಯಾಟಿಂಗ್ ಮೂಲಕ ಗಮನ ಸೆಳೆದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತು ಶುಭ್ ಮನ್ ಗಿಲ್ ಜೋಡಿ ದಾಖಲೆಯ ಜೊತೆಯಾಟವಾಡಿದೆ.
ಇಂದೋರ್ ನ ಹೋಳ್ಕರ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 3ನೇ ಏಕದಿನ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಗೆ ಇಳಿದ ಭಾರತ ತಂಡಕ್ಕೆ ನಾಯಕ ರೋಹಿತ್ ಶರ್ಮಾ ಮತ್ತು ಶುಭ್ ಮನ್ ಗಿಲ್ ಭರ್ಜರಿ ಆರಂಭ ಒದಗಿಸಿದರು. ಮೊದಲ ವಿಕೆಟ್ ಗೆ ಈ ಜೋಡಿ ಬರೊಬ್ಬರಿ 212ರನ್ ಗಳ ಅಮೋಘ ಜೊತೆಯಾಟ ನೀಡಿತು. ಈ ಪೈಕಿ ಇಬ್ಬರೂ ಆರಂಭಿಕರು ಶತಕ ಸಿಡಿಸಿದ್ದು ವಿಶೇಷವಾಗಿತ್ತು. 85 ಎಸೆತಗಳಲ್ಲಿ 6 ಸಿಕ್ಸರ್ ಮತ್ತು 9 ಬೌಂಡರಿಗಳ ಸಮೇತ ರೋಹಿತ್ ಶರ್ಮಾ 101ರನ್ ಗಳಿಸಿದರೆ, 78 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 13 ಬೌಂಡರಿಗಳ ನೆರವಿನಿಂದ ಗಿಲ್ 112 ರನ್ ಚಚ್ಚಿದರು.
ಇದನ್ನೂ ಓದಿ: 3ನೇ ಏಕದಿನ: ನ್ಯೂಜಿಲೆಂಡ್ ವಿರುದ್ಧ ಶತಕ, ಪಾಂಟಿಂಗ್ ದಾಖಲೆ ಸರಿಗಟ್ಟುವಿಕೆ ಸೇರಿ ಹಿಟ್ ಮ್ಯಾನ್ 2 ದಾಖಲೆ
ಈ ಮೂಲಕ ಗಿಲ್ ಮತ್ತು ರೋಹಿತ್ ಶರ್ಮಾ ಜೋಡಿ ಕಲೆಹಾಕಿದ 212ರನ್ ಗಳ ಅಮೋಘ ಜೊತೆಯಾಟ ಭಾರತದ ಪರ ದಾಖಲಾದ ಮತ್ತು ನ್ಯೂಜಿಲೆಂಡ್ ವಿರುದ್ಧದ ಗರಿಷ್ಠ ಮತ್ತು ದಾಖಲೆಯ ಜೊತೆಯಾಟವಾಗಿದೆ. ಇದಕ್ಕೂ ಮೊದಲು 2009ರಲ್ಲಿ ಹ್ಯಾಮಿಲ್ಟನ್ ನಲ್ಲಿ ಸೆಹ್ವಾಗ್ ಮತ್ತು ಗೌತಮ್ ಗಂಭೀರ್ ಜೋಡಿ 201ರನ್ ಕಲೆಹಾಕಿತ್ತು. ಇದು ಭಾರತದ ಪರ ದಾಖಲಾಗಿದ್ದ ಮೊದಲ ವಿಕೆಟ್ ನ ಗರಿಷ್ಠ ರನ್ ಜೊತೆಯಾಟವಾಗಿತ್ತು. ಇದಕ್ಕೂ ಮೊದಲು ಶ್ರೀಲಂಕಾದ ಸನತ್ ಜಯಸೂರ್ಯ ಮತ್ತು ಉಪುಲ್ ತರಂಗ ಜೋಡಿ 2006ರಲ್ಲಿ 201ರನ್ ಗಳಿಸಿದ್ದು ಈ ವರೆಗಿನ ಮೊದಲ ವಿಕೆಟ್ ಗರಿಷ್ಠ ರನ್ ಜೊತೆಯಾಟವಾಗಿತ್ತು.
ಇದನ್ನೂ ಓದಿ: ಗಿಲ್, ರೋ'ಹಿಟ್'' ಶತಕ, ಪಾಂಡ್ಯಾ ಸ್ಫೋಟಕ ಬ್ಯಾಟಿಂಗ್: ನ್ಯೂಜಿಲೆಂಡ್ ಗೆ ಗೆಲ್ಲಲು 386 ರನ್ ಗಳ ಬೃಹತ್ ಗುರಿ
STAT: Highest opening partnership vs NZ in ODIs
204*Rohit Sharma - S Gill Indore 2023
201*V Sehwag - G Gambhir Hamilton 2009
201 S Jayasuriya - U Tharanga Napier 2006