ಒಂದೇ ಕೈಯಲ್ಲಿ ವಾಷಿಂಗ್ಟನ್ ಸುಂದರ್ ಹಿಡಿದ ಅದ್ಭುತ ಕ್ಯಾಚ್ ನೋಡಿದ ದಂಗಾದ ಬ್ಯಾಟರ್, ವಿಡಿಯೋ ವೈರಲ್!
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ರಾಂಚಿಯಲ್ಲಿ ನಡೆಯುತ್ತಿದ್ದು ಈ ಪಂದ್ಯದಲ್ಲಿ ಸ್ಪಿನ್ ಬೌಲರ್ ವಾಷಿಂಗ್ಟನ್ ಸುಂದರ್ ಅದ್ಭುತ ಕ್ಯಾಚ್ ಹಿಡಿದಿದ್ದಾರೆ.
Published: 27th January 2023 09:22 PM | Last Updated: 27th January 2023 09:22 PM | A+A A-

ವಾಷಿಂಗ್ಟನ್ ಸುಂದರ್
ರಾಂಚಿ: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ರಾಂಚಿಯಲ್ಲಿ ನಡೆಯುತ್ತಿದ್ದು ಈ ಪಂದ್ಯದಲ್ಲಿ ಸ್ಪಿನ್ ಬೌಲರ್ ವಾಷಿಂಗ್ಟನ್ ಸುಂದರ್ ಅದ್ಭುತ ಕ್ಯಾಚ್ ಹಿಡಿದಿದ್ದಾರೆ.
ಅನುಭವಿ ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಲ್ಲದ ಟೀಂ ಇಂಡಿಯಾವನ್ನು ಹಾರ್ದಿಕ್ ಪಾಂಡ್ಯ ಮುನ್ನಡೆಸುತ್ತಿದ್ದಾರೆ. ಇನ್ನು ವಾಷಿಂಗ್ಟನ್ ಸುಂದರ್ ಒಂದೇ ಓವರ್‌ನಲ್ಲಿ ಎರಡು ವಿಕೆಟ್ ಪಡೆಯುವ ಮೂಲಕ ನ್ಯೂಜಿಲ್ಯಾಂಡ್ ಗೆ ಆಘಾತ ನೀಡಿದರು. ಅವರು ತಮ್ಮ ಬೌಲಿಂಗ್ ನಲ್ಲಿ ಕಾಟ್ ಅಂಡ್ ಕ್ಯಾಚ್ ಹಿಡಿಯುವ ಮೂಲಕ ಅಚ್ಚರಿ ಮೂಡಿಸಿದರು.
ಏಕದಿನ ಸರಣಿ ಗೆದ್ದಿರುವ ಇದೀಗ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿ ಆಡುತ್ತಿದೆ. ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಪ್ರವಾಸಿ ತಂಡ ಅದ್ಭುತ ಬ್ಯಾಟಿಂಗ್ ಆರಂಭ ಪಡೆಯಿತು. ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಅಲನ್ ಫಿನ್ 23 ಎಸೆತಗಳಲ್ಲಿ 35 ರನ್ ಗಳಿಸಿದರು.
ಇದನ್ನೂ ಓದಿ: ಮೊದಲ ಟಿ20 ಪಂದ್ಯ: ನ್ಯೂಜಿಲ್ಯಾಂಡ್ ಅಬ್ಬರದ ಬ್ಯಾಟಿಂಗ್, ಟೀಂ ಇಂಡಿಯಾಗೆ 177 ರನ್ ಗುರಿ!
ಸುಂದರ್ ಎಸೆದ 5ನೇ ಓವರ್‌ನ ಮೊದಲ ಎಸೆತದಲ್ಲಿ ಫಿನ್ ಅಲೆನ್ ಸಿಕ್ಸರ್ ಬಾರಿಸಿದರು. ನಂತರದ ಎಸೆತದಲ್ಲಿ ಸೂರ್ಯಕುಮಾರ್ ಯಾದವ್ ಅವರಿಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು. ಮುಂದಿನ ಮೂರು ಎಸೆತಗಳಲ್ಲಿ ಯಾವುದೇ ರನ್ ಗಳಿಸಲಿಲ್ಲ. ಓವರ್‌ನ ಕೊನೆಯ ಎಸೆತದಲ್ಲಿ ಮಾರ್ಕ್ ಚಾಪ್‌ಮನ್ ಚೆಂಡನ್ನು ಬಾರಿಸಿದರು. ಈ ವೇಳೆ ಸುಂದರ್ ಅವರ ಬಲಕ್ಕೆ ಕೆಲವು ಮೀಟರ್‌ಗಳಷ್ಟು ಜಿಗಿದು ಅತ್ಯುತ್ತಮ ಕ್ಯಾಚ್ ಪಡೆದು ಭಾರತಕ್ಕೆ ಎರಡನೇ ಯಶಸ್ಸನ್ನು ನೀಡಿದರು.
WHAT. A. CATCH @Sundarwashi5 dives to his right and takes a stunning catch off his own bowling #TeamIndia | #INDvNZ
— BCCI (@BCCI) January 27, 2023
Live - https://t.co/9Nlw3mU634 #INDvNZ @mastercardindia pic.twitter.com/8BBdFWtuEu