ಜೈಸ್ವಾಲ್ ಶತಕ, 2ನೇ ದಿನದಾಟಕ್ಕೆ ಭಾರತ 2 ವಿಕೆಟ್ ನಷ್ಟಕ್ಕೆ 312 ರನ್; ವಿಂಡೀಸ್ ವಿರುದ್ಧ 162 ರನ್ ಮುನ್ನಡೆ!

ವಿಂಡೀಸ್ ವಿರುದ್ಧದ ಎರಡು ಟೆಸ್ಟ್‌ಗಳ ಸರಣಿಯ ಮೊದಲ ಟೆಸ್ಟ್‌ ಪಂದ್ಯದ ಎರಡನೇ ದಿನದಾಟದಂತ್ಯಕ್ಕೆ ಪ್ರವಾಸಿ ಭಾರತ 2 ವಿಕೆಟ್ ನಷ್ಟಕ್ಕೆ 312 ರನ್ ಪೇರಿಸಿ 162 ರನ್ ಗಳ ಮುನ್ನಡೆ ಸಾಧಿಸಿದೆ.
ಭಾರತ ತಂಡ
ಭಾರತ ತಂಡ

ವಿಂಡೀಸ್ ವಿರುದ್ಧದ ಎರಡು ಟೆಸ್ಟ್‌ಗಳ ಸರಣಿಯ ಮೊದಲ ಟೆಸ್ಟ್‌ ಪಂದ್ಯದ ಎರಡನೇ ದಿನದಾಟದಂತ್ಯಕ್ಕೆ ಪ್ರವಾಸಿ ಭಾರತ 2 ವಿಕೆಟ್ ನಷ್ಟಕ್ಕೆ 312 ರನ್ ಪೇರಿಸಿ 162 ರನ್ ಗಳ ಮುನ್ನಡೆ ಸಾಧಿಸಿದೆ.

ಮೊದಲ ಟೆಸ್ಟ್‌ನಲ್ಲಿ ಶತಕ ಸಿಡಿಸಿದ್ದ ಯಶಸ್ವಿ ಜೈಸ್ವಾಲ್ 143 ಮತ್ತು ವಿರಾಟ್ ಕೊಹ್ಲಿ 36 ರನ್ ಗಳಿಸಿ ಅಜೇಯರಾಗಿ ಉಳಿದಿದ್ದಾರೆ. ಈ ಮೂಲಕ ಭಾರತ ಮೊದಲ ಇನಿಂಗ್ಸ್‌ನಲ್ಲಿ 162 ರನ್‌ಗಳ ಮುನ್ನಡೆ ಸಾಧಿಸಿದೆ. ಕೊನೆಯ ಅವಧಿಯಲ್ಲಿ ವಿಂಡೀಸ್ ಬೌಲರ್‌ಗಳು ಯಾವುದೇ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ. ಆದಾಗ್ಯೂ, ಜೈಸ್ವಾಲ್ ಕೆಮರ್ ರೋಚ್ ಎಸೆತದಲ್ಲಿ ಎಲ್‌ಬಿಡಬ್ಲ್ಯೂ ಆಗಿ ಔಟಾದರು, ಆದರೆ ಅಂಪೈರ್ ಅವರಿಗೆ ನಾಟೌಟ್ ನೀಡಿದ್ದರು. ಈ ವೇಳೆ ಆತಿಥೇಯರ ಡಿಆರ್ ಎಸ್ ಮುಗಿದಿತ್ತು. ಆದಾಗ್ಯೂ, ಈ ಕೊನೆಯ ಸೆಷನ್‌ನಲ್ಲಿ, ವಿರಾಟ್ ಮತ್ತು ಜೈಸ್ವಾಲ್ ಅದ್ಭುತ ಬ್ಯಾಟಿಂಗ್ ಮಾಡಿದ್ದು ಮೂರನೇ ವಿಕೆಟ್‌ಗೆ ಅಜೇಯ 72 ರನ್‌ಗಳ ಜೊತೆಯಾಟ ನೀಡಿದ್ದಾರೆ.

ಇದಕ್ಕೂ ಮೊದಲು ಟೀ ಸಮಯಕ್ಕೆ ಭಾರತ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 2 ವಿಕೆಟ್‌ಗೆ 244 ರನ್ ಗಳಿಸಿತ್ತು. ಈ ವೇಳೆ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ 116 ಮತ್ತು ವಿರಾಟ್ ಕೊಹ್ಲಿ 4 ರನ್ ಗಳಿಸಿ ಕ್ರೀಸ್‌ನಲ್ಲಿ ಇದ್ದರು. ಎರಡನೇ ಸೆಷನ್‌ನಲ್ಲಿ, ಎಡಗೈ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ ತಮ್ಮ ವೃತ್ತಿಜೀವನದ ಮೊದಲ ಟೆಸ್ಟ್ ಶತಕ ಬಾರಿಸಿದರು. ನಂತರ ನಾಯಕ ರೋಹಿತ್ ಶರ್ಮಾ ಸಹ ತಮ್ಮ ವೃತ್ತಿಜೀವನದ 10ನೇ ಶತಕವನ್ನು ಗಳಿಸುವಲ್ಲಿ ಯಶಸ್ವಿಯಾದರು. ರೋಹಿತ್ ಶತಕ ಬಾರಿಸಿದ ಕೆಲವೇ ಹೊತ್ತಿನಲ್ಲಿ ಔಟಾದರೂ, ಜೈಸ್ವಾಲ್ ಜೊತೆ ಮೊದಲ ವಿಕೆಟ್ ಗೆ 229 ರನ್ ಗಳ ಜೊತೆಯಾಟವನ್ನು ಹಂಚಿಕೊಳ್ಳುವ ಮೂಲಕ ಭಾರತದ ಬೃಹತ್ ಸ್ಕೋರ್ ಗೆ ಭದ್ರ ಬುನಾದಿ ಹಾಕಿದರು.

ಮೊದಲು ಬ್ಯಾಟಿಂಗ್ ಮಾಡಿದ್ದ ವೆಸ್ಟ್ ಇಂಡೀಸ್ ಮೊದಲ ಇನ್ನಿಂಗ್ಸ್ ನಲ್ಲಿ 150 ರನ್ ಗಳಿಗೆ ಆಲೌಟ್ ಆಗಿತ್ತು. ವಿಂಡೀಸ್ ಪರ ಅಲಿಕ್ ಅಥಾನಾಜೆ 47, ಬ್ರಾರ್ಥ್ವೈಟ್ 20 ಮತ್ತು ಕಾರ್ನ್ವಾಲ್ ಅಜೇಯ 19 ರನ್ ಬಾರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com