4ನೇ ಟೆಸ್ಟ್; ಆಸಿಸ್ ವಿರುದ್ದ ಭರ್ಜರಿ ಬೌಲಿಂಗ್; ಕುಂಬ್ಳೆ ದಾಖಲೆ ಪತನ ಸೇರಿ ಹಲವು ದಾಖಲೆ ನಿರ್ಮಿಸಿದ ಆರ್ ಅಶ್ವಿನ್

ಬಾರ್ಡರ್ ಗವಾಸ್ಕರ್ ಸರಣಿಯ 4ನೇ ಟೆಸ್ಟ್ ಪಂದ್ಯದ 2ನೇ ದಿನ ಭರ್ಜರಿ ಬೌಲಿಂಗ್ ಪ್ರದರ್ಶನ ನೀಡಿದ ಆರ್ ಅಶ್ವಿನ್ ಅನಿಲ್ ಕುಂಬ್ಳೆ ದಾಖಲೆ ಹಿಂದಿಕ್ಕುವುದು ಸೇರಿದಂತೆ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ.
ಆರ್ ಅಶ್ವಿನ್ ದಾಖಲೆ
ಆರ್ ಅಶ್ವಿನ್ ದಾಖಲೆ

ಅಹ್ಮದಾಬಾದ್: ಬಾರ್ಡರ್ ಗವಾಸ್ಕರ್ ಸರಣಿಯ 4ನೇ ಟೆಸ್ಟ್ ಪಂದ್ಯದ 2ನೇ ದಿನ ಭರ್ಜರಿ ಬೌಲಿಂಗ್ ಪ್ರದರ್ಶನ ನೀಡಿದ ಆರ್ ಅಶ್ವಿನ್ ಅನಿಲ್ ಕುಂಬ್ಳೆ ದಾಖಲೆ ಹಿಂದಿಕ್ಕುವುದು ಸೇರಿದಂತೆ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ.

ರ್ಯಾಂಕಿಂಗ್ ನಲ್ಲಿ ಅಗ್ರ ಸ್ಥಾನ
ಬಾರ್ಡರ್ ಗವಾಸ್ಕರ್ ಸರಣಿಯ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ 6 ವಿಕೆಟ್ ಉರುಳಿಸಿದ ಆರ್. ಅಶ್ವಿನ್ ಐಸಿಸಿ ರ್ಯಾಂಕಿಂಗ್‌ನಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದ್ದಾರೆ. ನಾಲ್ಕನೇ ಟೆಸ್ಟ್ ಆರಂಭಕ್ಕೂ ಮುನ್ನ ಜೇಮ್ಸ್ ಆಂಡರ್ಸನ್ ಮತ್ತು ಆರ್. ಅಶ್ವಿನ್ ಇಬ್ಬರೂ 859 ಅಂಕಗಳನ್ನು ಹೊಂದಿದ್ದು, ಮೊದಲ ಸ್ಥಾನವನ್ನು ಹಂಚಿಕೊಂಡಿದ್ದರು. 

ಆಂಡರ್ಸನ್ ಹಿಂದಿಕ್ಕಿದ ಅಶ್ವಿನ್
ಅಂತೆಯೇ ನಾಲ್ಕನೇ ಟೆಸ್ಟ್​ನಲ್ಲಿ ಅಶ್ವಿನ್ ಆಸ್ಚ್ರೇಲಿಯಾದ ಟ್ರಾವಿಸ್ ಹೆಡ್, ಸ್ಟೀವ್ ಸ್ಮಿತ್, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ, ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್ ಮತ್ತು ಟಾಡ್ ಮರ್ಫಿ ಅವರನ್ನು ಔಟ್ ಮಾಡಿದರು. ಆ ಮೂಲಕ ಆರು ವಿಕೆಟ್ ಪಡೆದ ಆರ್. ಅಶ್ವಿನ್ ಈಗ ಜೇಮ್ಸ್ ಆಂಡರ್ಸನ್ ಅವರನ್ನು ಹಿಂದಿಕ್ಕಿದ್ದಾರೆ. ಇದರೊಂದಿಗೆ ಐಸಿಸಿ ಟೆಸ್ಟ್ ಬೌಲರ್ ಶ್ರೇಯಾಂಕದಲ್ಲಿ ಅಶ್ವಿನ್ ಪ್ರಥಮ, ಜೇಮ್ಸ್ ಆ್ಯಂಡರ್ಸನ್ ದ್ವಿತೀಯ, ಪ್ಯಾಟ್ ಕಮಿನ್ಸ್ ತೃತೀಯ, ಕಗಿಸೊ ರಬಾಡ ನಾಲ್ಕನೇ ಹಾಗೂ ಶಾಹೀನ್ ಅಫ್ರಿದಿ ಐದನೇ ಸ್ಥಾನದಲ್ಲಿದ್ದಾರೆ.

ಕುಂಬ್ಳೆ ದಾಖಲೆ ಕೂಡ ಪತನ
ಇದರೊಂದಿಗೆ ಅಶ್ವಿನ್, ಆಸ್ಟ್ರೇಲಿಯಾ ವಿರುದ್ಧ ಅತಿ ಹೆಚ್ಚು ವಿಕೆಟ್ ಪಡೆದು ದಾಖಲೆ ಬರೆದಿದ್ದ ಕನ್ನಡಿಗ ಅನಿಲ್ ಕುಂಬ್ಳೆ ದಾಖಲೆಯನ್ನು ಮುರಿದಿದ್ದಾರೆ. ಈ ಪಂದ್ಯಕ್ಕೂ ಮುನ್ನ ಅಶ್ವಿನ್ ದಾಖಲೆ ಮುರಿಯಲು 5 ವಿಕೆಟ್‌ಗಳ ಅಗತ್ಯವಿತ್ತು. ಅಂತೆಯೇ ಭಾರತದಲ್ಲಿ ಅತಿ ಹೆಚ್ಚು ಬಾರಿ 5 ವಿಕೆಟ್ ಪಡೆದ ಬೌಲರ್​ಗಳ ಪೈಕಿ ಅಶ್ವಿನ್, ಕುಂಬ್ಳೆ ಅವರನ್ನು ಹಿಂದಿಕ್ಕಿದ್ದಾರೆ. ಭಾರತದಲ್ಲಿ ಅಶ್ವಿನ್ 5 ವಿಕೆಟ್​ಗಳನ್ನು 2 ಬಾರಿ ಪಡೆದಿದ್ದು, ಕುಂಬ್ಳೆ 25 ಬಾರಿ ಈ ಸಾಧನೆ ಮಾಡಿದ್ದರು. 

ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ ಅತೀ ಹೆಚ್ಚು ವಿಕೆಟ್ ಸಾಧನೆ
ಅಂತೆಯೇ ಆಸಿಸ್ ವಿರುದ್ದ 6 ವಿಕೆಟ್ ಪಡೆದ ಅಶ್ವಿನ್ ಆ ಮೂಲಕ ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್-ಗವಾಸ್ಕರ್ ಟ್ರೋಫಿಯ ಇತಿಹಾಸದಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು. ಅಶ್ವಿನ್ ಈಗ 22 ಪಂದ್ಯಗಳಲ್ಲಿ 28.10 ರ ಸರಾಸರಿಯಲ್ಲಿ ಮತ್ತು 2.71 ರ ಎಕಾನಮಿ ರೇಟ್‌ನಲ್ಲಿ 113 ವಿಕೆಟ್‌ಗಳನ್ನು ಪಡೆದಿದ್ದಾರೆ. ಒಂದು ಇನ್ನಿಂಗ್ಸ್‌ನಲ್ಲಿ ಅವರ ಅತ್ಯುತ್ತಮ ಬೌಲಿಂಗ್ ಅಂಕಿಅಂಶಗಳು 7/103 ಆಗಿದೆ.

ತವರಿನಲ್ಲಿ ಅತೀ ಹೆಚ್ಚು ಬಾರಿ 5 ವಿಕೆಟ್ ಗೊಂಚಲು: ಅಶ್ವಿನ್ ಗೆ 2ನೇ ಸ್ಥಾನ
ಟೆಸ್ಟ್‌ನಲ್ಲಿ ಇದು ಆರ್ ಅಶ್ವಿನ್ ಅವರ 32ನೇ ಐದು ವಿಕೆಟ್‌ಗಳ ಗೊಂಚಲಾಗಿದೆ. ಆದರೆ ತವರಿನಲ್ಲಿ ಇದು ಅವರ 26ನೇಯದು. ಈ ಮೂಲಕ ಅನಿಲ್ ಕುಂಬ್ಳೆ ಅವರ ದಾಖಲೆಯನ್ನು ಹೊಂದಿಕ್ಕಿದ್ದಾರೆ. ಭಾರತದ ನೆಲ್ಲಲಿ ಅನಿಲ್ ಕುಂಬ್ಳೆ 25 ಬಾರಿ ಐದಕ್ಕೂ ಹೆಚ್ಚು ವಿಕೆಟ್ ಕಿತ್ತು ಮಿಂಚಿದ್ದರು. ಈ ದಾಖಲೆ ಈಗ ಅಶ್ವಿನ್ ಪಾಲಾಗಿದೆ.

ಒಟ್ಟಾರೆಯಾಗಿ ತವರು ನೆಲದಲ್ಲಿ ಅತಿ ಹೆಚ್ಚು ಐದು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಅಶ್ವಿನ್ ಎರಡನೇ ಸ್ಥಾನವನ್ನು ಶ್ರೀಲಂಕಾದ ರಂಗನಾ ಹೆರಾತ್ ಜೊತೆಗೆ ಹಂಚಿಕೊಂಡಿದ್ದಾರೆ. ಒಟ್ಟಾರೆಯಾಗಿ ಈ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು ತವರಿನಲ್ಲಿ ಮುರಳೀಧರನ್ 73 ಟೆಸ್ಟ್ ಪಂದ್ಯಗಳಲ್ಲಿ 45 ಬಾರಿ ಐದು ವಿಕೆಟ್‌ಗಳ ಗೊಂಚಲು ಪಡೆದುಕೊಂಡಿದ್ದರು. ಎರಡನೇ ಸ್ಥಾನದಲ್ಲಿರುವ ರಂಗನಾ ಹೆರಾತ್ ಹಾಗೂ ಆರ್ ಅಶ್ವಿನ್ ತಲಾ 26 ಐದು ವಿಕೆಟ್‌ಗಳ ಗೊಂಚಲು ಹೊಂದಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com