WPL: ಸೋಫೀ ಡಿವೈನ್ ಅಮೋಘ ಬ್ಯಾಟಿಂಗ್, ಗುಜರಾತ್ ವಿರುದ್ಧ ಆರ್ ಸಿಬಿ ಮಹಿಳೆಯರಿಗೆ 8 ವಿಕೆಟ್ ಗಳ ಭರ್ಜರಿ ಜಯ
ಮಹಿಳೆಯ ಪ್ರೀಮಿಯರ್ ಲೀಗ್ ನಲ್ಲಿ ಗೆಲುವಿನ ಟ್ರಾಕ್ ಗೆ ಮರಳಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮತ್ತೊಂದು ಜಯ ದಾಖಲಿಸಿದ್ದು, ಗುಜರಾತ್ ಜೈಂಟ್ಸ್ ವಿರುದ್ಧ 8 ವಿಕೆಟ್ ಭರ್ಜರಿ ಜಯ ದಾಖಲಿಸಿದೆ.
Published: 18th March 2023 10:40 PM | Last Updated: 18th March 2023 10:52 PM | A+A A-

ಆರ್ ಸಿಬಿಗೆ ಜಯ
ಮುಂಬೈ: ಮಹಿಳೆಯ ಪ್ರೀಮಿಯರ್ ಲೀಗ್ ನಲ್ಲಿ ಗೆಲುವಿನ ಟ್ರಾಕ್ ಗೆ ಮರಳಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮತ್ತೊಂದು ಜಯ ದಾಖಲಿಸಿದ್ದು, ಗುಜರಾತ್ ಜೈಂಟ್ಸ್ ವಿರುದ್ಧ 8 ವಿಕೆಟ್ ಭರ್ಜರಿ ಜಯ ದಾಖಲಿಸಿದೆ.
ಗುಜರಾತ್ ಜೈಂಟ್ಸ್ ನೀಡಿದ್ದ 189 ರನ್ ಗಳ ಬೃಹತ್ ಮೊತ್ತವನ್ನು ಬೆನ್ನು ಹತ್ತಿದ ಆರ್ ಸಿಬಿ ಮಹಿಳಾ ತಂಡ ಆರಂಭಿಕ ಆಟಗಾರ್ತಿ ಸೋಫಿ ಡಿವೈನ್ (99ರನ್) ಮತ್ತು ನಾಯಕಿ ಸ್ಮೃತಿ ಮಂದಾನ (37 ರನ್), ಹೀದರ್ ನೈಟ್ (ಅಜೇಯ 22 ರನ್) ಭರ್ಜರಿ ಬ್ಯಾಟಿಂಗ್ ನೆರವಿನಿಂದ ಇನ್ನೂ 27 ಎಸೆತಗಳು ಬಾಕಿ ಇರುವಂತೆಯೇ ನಿಗಧಿತ ಗುರಿ ತಲುಪಿ ಜಯ ಸಾಧಿಸಿತು.
A BREATHTAKING CHASE
A mammoth total gunned down with 27 deliveries to spare
wins in games! We love this team #PlayBold #ನಮ್ಮRCB #SheIsBold #WPL2023 #RCBvGG pic.twitter.com/1WoZ3n6N4H— Royal Challengers Bangalore (@RCBTweets) March 18, 2023
ಆರ್ ಸಿಬಿ ಪರ ಭರ್ಜರಿ ಬ್ಯಾಟಿಂಗ್ ಮಾಡಿದ ಸೋಫಿ ಡಿವೈನ್ ಕೇವಲ 36 ಎಸೆತಗಳಲ್ಲಿ 8 ಸಿಕ್ಸರ್ ಮತ್ತು 6 ಬೌಂಡರಿ ನೆರವಿನಿಂದ 99ರನ್ ಸಿಡಿಸಿ ಶತಕ ವಂಚಿತರಾದರು. ಅವರು ಇಂದು ಗಳಿಸಿದ 99 ರನ್ ಗಳು ಮಹಿಳಾ ಪ್ರೀಮಿಯರ್ ಲೀಗ್ ಆಟಗಾರ್ತಿಯೊಬ್ಬರ ವೈಯುಕ್ತಿಕ ಗರಿಷ್ಟ ರನ್ ಗಳಿಕೆಯಾಗಿದೆ.
Yet another Sophie start #PlayBold #ನಮ್ಮRCB #SheIsBold #WPL2023 #RCBvGG
— Royal Challengers Bangalore (@RCBTweets) March 18, 2023
pic.twitter.com/cLe1Q4xSc2
ಇನ್ನು ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಗುಜರಾತ್ ಜೈಂಟ್ಸ್ ತಂಡ ನಿಗಧಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 188 ರನ್ ಗಳಿಸಿತ್ತು. ಗುಜರಾತ್ ಪರ ವೊಲ್ವಾರ್ಡ್ಟ್ 68 ರನ್ ಸಿಡಿಸಿದರೆ, ಗಾರ್ಡ್ನರ್ 41 ರನ್ ಗಳಿಸಿ ತಂಡದ ಬೃಹತ್ ಮೊತ್ತಕ್ಕೆ ಕಾರಣರಾದರು. ಆದರೂ ಈ ಬೃಹತ್ ಮೊತ್ತದ ಹೊರತಾಗಿಯೂ ಆರ್ ಸಿಬಿ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದ ಗೆಲುವಿನೊಂದಿಗೆ ಟೂರ್ನಿಯಲ್ಲಿ ಆರ್ ಸಿಬಿ 2ನೇ ಗೆಲುವು ದಾಖಲಿಸಿದೆ.