
ಟೀಂ ಇಂಡಿಯಾ
ಚೆನ್ನೈ: ಹಾಲಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಸೋಲು ಕಾಣುವ ಮೂಲಕ ಭಾರತ ತಂಡ ತಾನು ತವರಿನಲ್ಲಿ ಸಾಧಿಸಿದ್ದ ಸತತ 7 ಸರಣಿ ಜಯದ ಕೊಂಡಿಯನ್ನು ಕಳಚಿಕೊಂಡಿದೆ.
ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಇಂದು ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ನೀಡಿದ 270 ರನ್ ಗಳ ಸವಾಲಿನ ಗುರಿ ಬೆನ್ನು ಹತ್ತಿದ 49.1 ಓವರ್ ನಲ್ಲಿ 248 ರನ್ ಗಳಿಗೆ ಆಲೌಟ್ ಆಗುವ ಮೂಲಕ 21 ರನ್ ಅಂತರದಲ್ಲಿ ಹೀನಾಯ ಸೋಲು ಕಂಡಿತು. ಅಂತೆಯೇ 3 ಪಂದ್ಯಗಳ ಏಕದಿನ ಸರಣಿಯನ್ನು 2-1 ಅಂತರದಲ್ಲಿ ಸೋತಿತು. ಈ ಸೋಲಿನ ಮೂಲಕ ಟೀಂ ಇಂಡಿಯಾ ತನ್ನ ದಾಖಲೆಯ ಸತತ ಸರಣಿ ಜಯದ ಕೊಂಡಿ ಕಳಚಿಕೊಂಡಿದೆ.
ಇದನ್ನೂ ಓದಿ: 3ನೇ ಬಾರಿಗೆ ಡಕೌಟ್; ಶೂನ್ಯ ಸಾಧನೆಯಲ್ಲೂ ದಾಖಲೆ ಬರೆದ ಸೂರ್ಯ ಕುಮಾರ್ ಯಾದವ್!
India’s last five series defeats at home:
2-1 vs AUS, 2023
3-2 vs AUS, 2019
3-2 vs SA, 2015
2-1 vs PAK, 2012/13
4-2 vs AUS, 2009
2019ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 2-1 ಅಂತರದಲ್ಲಿ ಸರಣಿ ಜಯ ಸಾಧಿಸಿತ್ತು. ಬಳಿಕ ಇದೇ ಆಸ್ಟ್ರೇಲಿಯಾ ವಿರುದ್ಧ 2-1 ಅಂತರಗಲ್ಲಿ ಸರಣಿ ಗೆದ್ದು ಸತತ 2 ಸರಣಿ ಗೆದ್ದ ಟೀಂ ಇಂಡಿಯಾ ಆ ಬಳಿಕ ಇಂಗ್ಲೆಂಡ್, ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿ ಜಯ ಸಾಧಿಸಿತ್ತು. ಸತತ7 ಸರಣಿಗಳನ್ನು ಗೆದ್ದಿದ್ದ ಭಾರತ ತಂಡ ಇದೀಗ ಆಸ್ಟ್ರೇಲಿಯಾ ವಿರುದ್ಧ ಸರಣಿ ಸೋತು ಈ ಗೆಲುವಿನ ಜೈತ್ರಯಾತ್ರೆಯನ್ನು ಅಂತ್ಯಗೊಳಿಸಿದೆ.
ಇದನ್ನೂ ಓದಿ: ಭಾರತದ ವಿರುದ್ಧ ಸರಣಿ ಜಯ; ಐಸಿಸಿ ರ್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದ ಆಸ್ಟ್ರೇಲಿಯಾ
India in their last 10 bilateral ODI series at home:
Lost 1-2 vs AUS, 2023
Won 3-0 vs NZ, 2023
Won 3-0 vs SL, 2023
Won 2-1 vs SA, 2022
Won 3-0 vs WI, 2022
Won 2-1 vs ENG, 2021
Won 2-1 vs AUS, 2020
Won 2-1 vs WI, 2019
Lost 2-3 vs AUS, 2019
Won 3-1 vs WI, 2018