ಜನಾಂಗೀಯ ನಿಂದನೆ ಪ್ರಕರಣ: ಇಂಗ್ಲೆಂಡ್ ಕ್ರಿಕೆಟ್ ದಂತಕಥೆ ಮೈಕಲ್ ವಾನ್ ಗೆ ಬಿಗ್ ರಿಲೀಫ್!
ಜನಾಂಗೀಯ ನಿಂದನೆ ಪ್ರಕರಣದಲ್ಲಿ ಶಿಕ್ಷೆ ಭೀತಿಯಲ್ಲಿದ್ದ ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಗೆ ದೊಡ್ಡ ರಿಲೀಫ್ ಸಿಕ್ಕಿದ್ದು, ಪ್ರಕರಣದಿಂದ ಅವರನ್ನು ಖುಲಾಸೆ ಮಾಡಲಾಗಿದೆ.
Published: 31st March 2023 07:56 PM | Last Updated: 31st March 2023 07:58 PM | A+A A-

ಮೈಕಲ್ ವಾನ್
ನವದೆಹಲಿ: ಜನಾಂಗೀಯ ನಿಂದನೆ ಪ್ರಕರಣದಲ್ಲಿ ಶಿಕ್ಷೆ ಭೀತಿಯಲ್ಲಿದ್ದ ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಗೆ ದೊಡ್ಡ ರಿಲೀಫ್ ಸಿಕ್ಕಿದ್ದು, ಪ್ರಕರಣದಿಂದ ಅವರನ್ನು ಖುಲಾಸೆ ಮಾಡಲಾಗಿದೆ.
2009 ರಲ್ಲಿ ಯಾರ್ಕ್‌ಷೈರ್ ತಂಡದ ಏಷ್ಯನ್ ಜನಾಂಗದ ಆಟಗಾರರ ಗುಂಪಿನ ಬಗ್ಗೆ ಜನಾಂಗೀಯ ಹೇಳಿಕೆ ನೀಡಿದ ಕಾರಣಕ್ಕಾಗಿ ಇಂಗ್ಲೆಂಡ್ ಕ್ರಿಕೆಟ್‌ನ ಮಾಜಿ ನಾಯಕ ಮೈಕೆಲ್ ವಾನ್ ವಿರುದ್ಧ ಜನಾಂಗೀಯ ನಿಂದನೆ ಪ್ರಕರಣ ದಾಖಲಾಗಿತ್ತು. ಯಾರ್ಕ್‌ಷೈರ್‌ನ ಮಾಜಿ ಆಟಗಾರ ಅಜೀಮ್ ರಫೀಕ್ ಅವರು 2008-18ರ ನಡುವೆ ಇಂಗ್ಲಿಷ್ ಕ್ರಿಕೆಟ್‌ನ ಅತ್ಯಂತ ಯಶಸ್ವಿ ಕ್ಲಬ್ ಪರ ಆಡುವಾಗ ತಾವು ಜನಾಂಗೀಯ ಕಿರುಕುಳ ಮತ್ತು ಬೆದರಿಸುವಿಕೆಗೆ ಬಲಿಯಾಗಿದ್ದೆ ಎಂದು 2020 ರಲ್ಲಿ ಸಾರ್ವಜನಿಕವಾಗಿ ಹೇಳಿದಾಗ ಈ ಹಗರಣ ಸ್ಫೋಟಗೊಂಡಿತ್ತು.
ಇದನ್ನೂ ಓದಿ: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾನುವಾರ ಐಪಿಎಲ್ ಪಂದ್ಯ: ಟಿಕೆಟ್ ಖರೀದಿಗೆ ಕ್ರಿಕೆಟ್ ಅಭಿಮಾನಿಗಳ ನೂಕುನುಗ್ಗಲು
ಈ ಹಗರಣ ಬ್ರಿಟಿಷ್ ಪಾರ್ಲಿಮೆಂಟ್‌ನಲ್ಲೂ ವ್ಯಾಪಕ ಚರ್ಚೆಗೀಡಾಗಿತ್ತು. ಈ ಹಗರಣದಿಂದ ಯಾರ್ಕ್‌ಷೈರ್ ತಂಡದ ಫ್ರಾಂಚೈಸಿಗಳು ತಂಡದ ಪ್ರಾಯೋಜಕರನ್ನು ಕಳೆದುಕೊಂಡಿದ್ದರು. ಅಲ್ಲದೆ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸುವ ಹಕ್ಕನ್ನು ಕಳೆದುಕೊಳ್ಳಲು ಈ ಹಗರಣ ಕಾರಣವಾಗಿತ್ತು. ಈ ಹಗರಣದಲ್ಲಿ ಮೈಕಲ್ ವಾನ್ ಸೇರಿದಂತೆ ಒಟ್ಟು 7 ಮಂದಿ ವಿರುದ್ಧ ಆರೋಪ ದಾಖಲಿಸಲಾಗಿತ್ತು. ಇಂಗ್ಲೆಂಡ್ ಮಾಜಿ ನಾಯಕ ಟಿ20 ಪಂದ್ಯದ ವೇಳೆ ತನ್ನನ್ನು ಮತ್ತು ಏಷ್ಯಾ ಮೂಲದ ಇತರ ಆಟಗಾರರನ್ನು ಗುರಿಯಾಗಿಸಿಕೊಂಡಿದ್ದರು ಎಂದು ರಫೀಕ್ ಆರೋಪಿಸಿದ್ದರು.
— Michael Vaughan (@MichaelVaughan) March 31, 2023
"ಈ ಪದಗಳನ್ನು ಎಂವಿ (ಮೈಕೆಲ್ ವಾನ್) ಅವರು ಆ ಸಮಯದಲ್ಲಿ ಮತ್ತು ನಿರ್ದಿಷ್ಟ ಸಂದರ್ಭಗಳಲ್ಲಿ ಹೇಳಿರುವ ಸಂಭವನೀಯತೆಗಳ ಸಮತೋಲನದ ಬಗ್ಗೆ ಸಮಿತಿಯು ತೃಪ್ತಿ ಹೊಂದಿಲ್ಲ" ಎಂದು ಇಡೀ ಪ್ರಕರಣವನ್ನು ಒಳಗೊಂಡಿರುವ 82 ಪುಟಗಳ ದಾಖಲೆಯಲ್ಲಿ ತೀರ್ಪನ್ನು ನೀಡಲಾಗಿದೆ.
ವಿಚಾರಣೆ ಎದುರಿಸಿದ ಏಕೈಕ ವ್ಯಕ್ತಿ 'ಮೈಕಲ್ ವಾನ್'
ಈ ಪ್ರಕರಣದಲ್ಲಿ ಅಂದಿನ ಇಂಗ್ಲೆಂಡ್ ಕ್ರಿಕೆಟ್ ತಂಡದ ನಾಯಕ ಮೈಕಲ್ ವಾನ್ ಅವರ ಹೆಸರು ಬಲವಾಗಿ ಕೇಳಿಬಂದಿತ್ತು. ವಾನ್ ಟ್ವೆಂಟಿ-20 ಪಂದ್ಯದ ವೇಳೆ ಜನಾಂಗೀಯ ನಿಂದನೆ ಮಾಡಿದ್ದರು ಎಂದು ಆರೋಪಿಸಲಾಗಿದೆ. ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಬೋರ್ಡ್ ಹೊರಡಿಸಿದ ಆರೋಪವನ್ನು ವಾನ್ ಸ್ಪಷ್ಟವಾಗಿ ನಿರಾಕರಿಸಿದ್ದರು. ಐತಿಹಾಸಿಕ ಜನಾಂಗೀಯ ಹೇಳಿಕೆಗಳ ಆರೋಪದ ಮೇಲೆ ವಾನ್ ಮತ್ತು ಇತರ ಯಾರ್ಕ್‌ಷೈರ್ ಆಟಗಾರರನ್ನು ಒಳಗೊಂಡ ವಿಚಾರಣೆಯಿಂದ ಕ್ರಿಕೆಟ್ ಶಿಸ್ತು ಆಯೋಗ ತನ್ನ ವರದಿ ಪ್ರಕಟಿಸಿದ್ದರಿಂದ ಅವರ ವಿರುದ್ಧದ ಆರೋಪಗಳನ್ನು ವಜಾಗೊಳಿಸಲಾಗಿದೆ.
ಇದನ್ನೂ ಓದಿ: ಐಪಿಎಲ್ 2023: ಉದ್ಘಾಟನಾ ಸಮಾರಂಭದಲ್ಲಿ ತಮನ್ನಾ, ರಶ್ಮಿಕಾ ಡ್ಯಾನ್ಸ್!
ಈ ವಿಚಾರವನ್ನು ಸ್ವತಃ ಇಂಗ್ಲೆಂಡ್ ಕ್ರಿಕೆಟ್ ದಂತಕಥೆ ಮೈಕಲ್ ವಾನ್ ಹೇಳಿಕೊಂಡಿದ್ದು, ತನ್ನ ವಿರುದ್ಧದ ವರ್ಣಭೇದ ನೀತಿಯ ಆರೋಪಗಳನ್ನು ಶಿಸ್ತು ಸಮಿತಿಯು ತಳ್ಳಿಹಾಕಿದೆ ಎಂದು ಇಂಗ್ಲೆಂಡ್‌ನ ಮಾಜಿ ನಾಯಕ ಮೈಕಲ್ ವಾನ್ ಶುಕ್ರವಾರ ಹೇಳಿದ್ದಾರೆ. 2009 ರಲ್ಲಿ ಯಾರ್ಕ್‌ಷೈರ್ ತಂಡದಲ್ಲಿ ಏಷ್ಯನ್ ಮೂಲದ ಆಟಗಾರರ ಗುಂಪಿನ ಬಗ್ಗೆ ಜನಾಂಗೀಯ ಟೀಕೆಗಳನ್ನು ಮಾಡಿದ ಆರೋಪವನ್ನು ವಾನ್ ಎದುರಿಸಿದ್ದರು.
ಇಷ್ಟಕ್ಕೂ ವಾನ್ ಹೇಳಿದ್ದೇನು?
ರಫೀಕ್ ಪ್ರಕಾರ, ಏಷ್ಯನ್ ಮೂಲದ ಆಟಗಾರರ ಬಗ್ಗೆ ವಾನ್ ವಿವಾದಾತ್ಮಕ ಹೇಳಿಕೆ ನೀಡಿದ್ದು, 'ನೀವು ಸಂಖ್ಯೆಯಲ್ಲಿ ಏರಿದ್ದೀರಿ, ನಾವು ಅದರ ಬಗ್ಗೆ ಏನಾದರೂ ಮಾಡಬೇಕಾಗಿದೆ' ಎಂದು ಹೇಳುವ ಮೂಲಕ ನಿರ್ದಿಷ್ಠ ಸಮುದಾಯ ಜನಸಂಖ್ಯೆ ಏರಿಕೆ ಕುರಿತು ಕಳವಳ ವ್ಯಕ್ತಪಡಿಸಿದ್ದ ವಾನ್ ಪರೋಕ್ಷ ಬೆದರಿಕೆ ಕೂಡ ಹಾಕಿದ್ದರು ಎಂದು ರಫೀಕ್ ಆರೋಪಿಸಿದ್ದರು.