M****c**d: ಅದ್ಭುತ ಕ್ಯಾಚ್‌ನಿಂದ ಔಟಾದ ನಂತರ ಸೂರ್ಯಕುಮಾರ್ ನಿಂದನೀಯ ಪದ ಬಳಕೆ, ವೀಡಿಯೊ ವೈರಲ್!
ವಾಂಖೆಡೆ ಸ್ಟೇಡಿಯಂನಲ್ಲಿ ಸೂರ್ಯ ಕುಮಾರ್ ಯಾದವ್ ಅವರು ಅಬ್ಬರದ ಬ್ಯಾಟಿಂಗ್ ಮಾಡಿದ್ದರು. ರಾಜಸ್ಥಾನ್ ರಾಯಲ್ಸ್ ವಿರುದ್ಧದಲ್ಲಿ 29 ಎಸೆತಗಳಲ್ಲಿ 55 ರನ್ ಗಳಿಸಿದ್ದರು.
Published: 01st May 2023 07:14 PM | Last Updated: 01st May 2023 07:14 PM | A+A A-

ಸೂರ್ಯಕುಮಾರ್ ಯಾದವ್
ಮುಂಬೈ: ವಾಂಖೆಡೆ ಸ್ಟೇಡಿಯಂನಲ್ಲಿ ಸೂರ್ಯ ಕುಮಾರ್ ಯಾದವ್ ಅವರು ಅಬ್ಬರದ ಬ್ಯಾಟಿಂಗ್ ಮಾಡಿದ್ದರು. ರಾಜಸ್ಥಾನ್ ರಾಯಲ್ಸ್ ವಿರುದ್ಧದಲ್ಲಿ 29 ಎಸೆತಗಳಲ್ಲಿ 55 ರನ್ ಗಳಿಸಿದ್ದರು.
ಆದರೆ ಇದೇ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಔಟ್ ಆದ ನಂತರ ನಿಂದನೀಯ ಪದ ಬಳಕೆ ಮಾಡಿರುವ ವಿಡಿಯೋವೊಂದು ವೈರಲ್ ಆಗಿದೆ. ಇದನ್ನು ನೋಡಿ ಮಿಸ್ಟರ್ 360ರ ಅಭಿಮಾನಿಗಳು ನಿರಾಸೆಗೊಂಡಿದ್ದಾರೆ. ವಾಸ್ತವವಾಗಿ, ಈ ಪಂದ್ಯದಲ್ಲಿ ಸೂರ್ಯಕುಮಾರ್ ಅವರನ್ನು ಔಟ್ ಮಾಡಲು ಸಂದೀಪ್ ಶರ್ಮಾ ಅದ್ಭುತ ಕ್ಯಾಚ್ ಹಿಡಿದಿದ್ದರು. ಔಟ್ ಆದ ನಂತರ ತುಂಬಾ ಕೋಪಗೊಂಡ ಸೂರ್ಯಕುಮಾರ್ ನಿಂದಿನಿಯ ಪದ ಬಳಿಸಿರುವುದು ಕಂಡುಬಂದಿದೆ.
— IPLT20 Fan (@FanIplt20) April 30, 2023
ಪಂದ್ಯ ರೋಚಕವಾಗಿತ್ತು: ಎಂಐ ಮತ್ತು ಆರ್‌ಆರ್ ನಡುವೆ ನಡೆದ ಪಂದ್ಯದಲ್ಲಿ ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಅವರ ಅದ್ಭುತ 62 ಎಸೆತಗಳಲ್ಲಿ ರಾಜಸ್ಥಾನ್ ರಾಯಲ್ಸ್ 20 ಓವರ್‌ಗಳಲ್ಲಿ 16 ಬೌಂಡರಿ ಮತ್ತು 8 ಸಿಕ್ಸರ್‌ಗಳ ಸಹಾಯದಿಂದ ಒಟ್ಟು 212 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಮುಂಬೈ ಇಂಡಿಯನ್ಸ್ ತಂಡದ ಬ್ಯಾಟ್ಸ್‌ಮನ್‌ಗಳು ಕೂಡ ಆಕ್ರಮಣಕಾರಿ ಇನ್ನಿಂಗ್ಸ್‌ಗಳನ್ನು ಆಡಿದರು.
ಸೂರ್ಯಕುಮಾರ್ ಯಾದವ್ 29 ಎಸೆತಗಳಲ್ಲಿ 55, ಕ್ಯಾಮರೂನ್ ಗ್ರೀನ್ 26 ಎಸೆತಗಳಲ್ಲಿ 44 ಮತ್ತು ಟಿಮ್ ಡೇವಿಡ್ 14 ಎಸೆತಗಳಲ್ಲಿ 45 ರನ್ ಗಳಿಸಿ ತಂಡಕ್ಕೆ ಅತ್ಯುತ್ತಮ ಕೊಡುಗೆ ನೀಡಿ 19.3 ಓವರ್‌ಗಳಲ್ಲಿ 214 ರನ್ ಬಾರಿಸಿ ಎರಡು ಪ್ರಮುಖ ಅಂಕಗಳನ್ನು ಪಡೆದರು. ಈ ಪಂದ್ಯದ ನಂತರ ಇದೀಗ ಮುಂಬೈ ಇಂಡಿಯನ್ಸ್ ತಂಡ 8 ಪಂದ್ಯಗಳಲ್ಲಿ 4 ಗೆಲುವಿನೊಂದಿಗೆ ಏಳನೇ ಸ್ಥಾನಕ್ಕೆ ತಲುಪಿದೆ.