ಐಪಿಎಲ್ 2023: ಚೆನ್ನೈ ಬೌಲರ್ ಗಳ ಮಾರಕ ಬೌಲಿಂಗ್, ಧೋನಿ ಪಡೆಗೆ ಸುಲಭದ ತುತ್ತಾದ ಮುಂಬೈ ಇಂಡಿಯನ್ಸ್

ಐಪಿಎಲ್ 2023 ಟೂರ್ನಿಯ ಇಂದಿನ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಲ್ ರೌಂಡ್ ಆಟದ ಎದುರು ಮಂಕಾದ ಮುಂಬೈ ಇಂಡಿಯನ್ಸ್ ತಂಡ 6 ವಿಕೆಟ್ ಗಳ ಹೀನಾಯ ಸೋಲು ಕಂಡಿದೆ.
ಧೋನಿ ಪಡೆಗೆ ಜಯ
ಧೋನಿ ಪಡೆಗೆ ಜಯ

ಚೆನ್ನೈ: ಐಪಿಎಲ್ 2023 ಟೂರ್ನಿಯ ಇಂದಿನ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಲ್ ರೌಂಡ್ ಆಟದ ಎದುರು ಮಂಕಾದ ಮುಂಬೈ ಇಂಡಿಯನ್ಸ್ ತಂಡ 6 ವಿಕೆಟ್ ಗಳ ಹೀನಾಯ ಸೋಲು ಕಂಡಿದೆ.

ಮುಂಬೈ ಇಂಡಿಯನ್ಸ್ ನೀಡಿದ 140 ರನ್ ಗಳ ಸಾಧಾರಣ ಗುರಿಯನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ 4 ವಿಕೆಟ್ ನಷ್ಟಕ್ಕೆ ಕೇವಲ 17.4 ಓವರ್ ನಲ್ಲಿ ಇನ್ನೂ 14 ಎಸೆತಗಳು ಬಾಕಿ ಇರುವಂತೆಯೇ ಗುರಿ ಮುಟ್ಟಿ 6 ವಿಕೆಟ್ ಗಳ ಅಂತರದಲ್ಲಿ ಜಯ ಸಾಧಿಸಿತು. ಚೆನ್ನೈ ಪರ ಡೆವಾನ್ ಕಾನ್ವೆ 44 ರನ್, ರುತುರಾಜ್ ಗಾಯಕ್ವಾಡ್ 30 ರನ್ ಮತ್ತು ಶಿವಂ ದುಬೆ ಅಜೇಯ 26 ರನ್ ಗಳಿಸಿ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದರು.

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಿದ ಮುಂಬೈ ತಂಡ ಚೆನ್ನೈ ಬೌಲರ್ ಗಳ ಸಾಂಘಿಕ ಹೋರಾಟದಿಂದ ರನ್ ಗಳಿಸಲು ತಿಣುಗಾಡಿತು. ನಾಯಕ ರೋಹಿತ್ ಶರ್ಮಾ ಶೂನ್ಯ ಸುತ್ತಿ ದಾಖಲೆ ಬರೆದರೆ, ಆರಂಭಿಕರು ಒಂದಂಕಿಗೇ ತಮ್ಮ ಹೋರಾಟ ಸೀಮಿತಗೊಳಿಸಿದರು. ಮಧ್ಯಮ ಕ್ರಮಾಂಕದಲ್ಲಿ ನೇಹಲ್ ವದೇರಾ (64 ರನ್), ಸೂರ್ಯ ಕುಮಾರ್ ಯಾದವ್ (26 ರನ್) ಮತ್ತು ಟ್ರಿಸ್ಟಾನ್ ಸ್ಟಬ್ಸ್ (20 ರನ್) ಕೊಂಚ ಪ್ರತಿರೋಧ ತೋರಿದರಾದರೂ, ಅದನ್ನು ದೊಡ್ಡ ಮೊತ್ತವಾಗಿ ಪರಿವರ್ತಿಸುವಲ್ಲಿ ವಿಫಲರಾದರು. ಕೆಳ ಕ್ರಮಾಂಕದಲ್ಲಿ ವಿಕೆಟ್ ಗಳು ಬೇಗನೇ ಬಿದ್ದಿದ್ದು ಮುಂಬೈ ತಂಡದ ಕಡಿಮೆ ಮೊತ್ತಕ್ಕೆ ಕಾರಣವಾಯಿತು.

ಇನ್ನು ಚೆನ್ನೈ ಪರ ಮತೀಶ ಪತಿರಾಣ 3 ವಿಕೆಟ್ ಪಡೆದು ಮಿಂಚಿದರೆ, ದೀಪಕ್ ಚಹರ್ ಮತ್ತು ತುಷಾರ್ ದೇಶಪಾಂಡೆ ತಲಾ 2 ವಿಕೆಟ್ ಪಡೆದರು. ರವೀಂದ್ರ ಜಡೇಜಾ 1 ವಿಕೆಟ್ ಪಡೆದು ಮುಂಬೈ ತಂಡವನ್ನು ಕಡಿಮೆ ಮೊತ್ತಕ್ಕೆ ನಿಯಂತ್ರಿಸಿದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com