
ವಿರಾಟ್ ಕೊಹ್ಲಿ
ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ 2023ರ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಆರ್ ಸಿಬಿ ನಿಗದಿತ ಓವರ್ ನಲ್ಲಿ 197 ರನ್ ಪೇರಿಸಿದೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಆರ್ ಸಿಬಿ ತಂಡ ಕೊಹ್ಲಿಯ ಶತಕದ ನೆರವಿನೊಂದಿಗೆ 197 ರನ್ ಕೆಲ ಹಾಕಿದ್ದು ಗುಜರಾತ್ ಟೈಟಾನ್ಸ್ ಗೆ ಗೆಲ್ಲಲು 198 ರನ್ ಗುರಿ ನೀಡಿದೆ.
ಇದನ್ನೂ ಓದಿ: IPL 2023: ಹೈದರಾಬಾದ್ ವಿರುದ್ಧ ಮುಂಬೈಗೆ ಭರ್ಜರಿ ಗೆಲುವು, ಪಂದ್ಯ ಗೆಲ್ಲಲೇಬೇಕಾದ ಒತ್ತಡದಲ್ಲಿ RCB
ಆರ್ ಸಿಬಿ ಪರ ವಿರಾಟ್ ಕೊಹ್ಲಿ ಅಜೇಯ 101, ಡುಪ್ಲೆಸಿಸ್ 28, ಗ್ಲೆನ್ ಮ್ಯಾಕ್ಸ್ ವೆಲ್ 11, ಮಿಚೆಲ್ ಬ್ರಾಸ್ವೆಲ್ 26 ಹಾಗೂ ಅನುಜ್ ರಾವತ್ ಅಜೇಯ 23 ರನ್ ಪೇರಿಸಿದ್ದಾರೆ.
ಗುಜರಾತ್ ಪರ ನೂರ್ ಅಹ್ಮದ್ 2, ಮೊಹಮ್ಮದ್ ಶಮಿ, ಯಶ್ ದಯಾಳ್, ರಶೀದ್ ಖಾನ್ ತಲಾ 1 ವಿಕೆಟ್ ಪಡೆದಿದ್ದಾರೆ.