ಐಪಿಎಲ್ ಫೈನಲ್ ಪಂದ್ಯದಲ್ಲಿ ಹಲವು ದಾಖಲೆಗಳನ್ನು ಬರೆಯಲು ಧೋನಿ ಸಜ್ಜು: ಈ ಸಾಧನೆ ಮಾಡಿದ ಮೊದಲ ಆಟಗಾರ!
2023ರ ಐಪಿಎಲ್ ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿಯಾಗಲಿವೆ. ನರೇಂದ್ರ ಮೋದಿ ಕ್ರೀಡಾಂಗಣ ಫೈನಲ್ ಪಂದ್ಯಕ್ಕೆ ಅದ್ದೂರಿ ಆತಿಥ್ಯ ವಹಿಸುತ್ತಿದ್ದು, ಈ ಬಾರಿ ಕಪ್ ಗೆಲ್ಲೋದ್ಯಾರು ಎನ್ನುವ ಕುತೂಹಲ ಹೆಚ್ಚಾಗಿದೆ. ಸಂಜೆ 7.30ಕ್ಕೆ ಪಂದ್ಯ ಆರಂಭವಾಗಲಿದೆ.
Published: 28th May 2023 03:55 PM | Last Updated: 29th May 2023 01:50 PM | A+A A-

ಅಹಮದಾಬಾದ್: 2023ರ ಐಪಿಎಲ್ ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿಯಾಗಲಿವೆ. ನರೇಂದ್ರ ಮೋದಿ ಕ್ರೀಡಾಂಗಣ ಫೈನಲ್ ಪಂದ್ಯಕ್ಕೆ ಅದ್ದೂರಿ ಆತಿಥ್ಯ ವಹಿಸುತ್ತಿದ್ದು, ಈ ಬಾರಿ ಕಪ್ ಗೆಲ್ಲೋದ್ಯಾರು ಎನ್ನುವ ಕುತೂಹಲ ಹೆಚ್ಚಾಗಿದೆ. ಸಂಜೆ 7.30ಕ್ಕೆ ಪಂದ್ಯ ಆರಂಭವಾಗಲಿದೆ.
ಈ ಸಂದರ್ಭವನ್ನು ಇನ್ನಷ್ಟು ಸ್ಮರಣೀಯವಾಗಿಸಲು, 'ಕ್ಯಾಪ್ಟನ್ ಕೂಲ್' ಎಂದೇ ಖ್ಯಾತಿ ಪಡೆದ ಎಂಎಸ್ ಧೋನಿ ತಮ್ಮ 250ನೇ ಐಪಿಎಲ್ ಪಂದ್ಯವನ್ನಾಡಲು ಸಜ್ಜಾಗಿದ್ದಾರೆ. ಇದು ಆಟಗಾರನಾಗಿ 11ನೇ ಫೈನಲ್ ಮತ್ತು ನಾಯಕರಾಗಿ ಅವರ 10ನೇ ಪಂದ್ಯವನ್ನು ಧೋನಿ ಆಡಲಿದ್ದಾರೆ.
ಈವರೆಗೆ ಬೇರೆ ಯಾವುದೇ ಆಟಗಾರರು 250 ಐಪಿಎಲ್ ಪಂದ್ಯಗಳನ್ನು ಆಡಿಲ್ಲ ಮತ್ತು ಈ ಸಾಧನೆ ಮಾಡಿದ ಮೊದಲ ಆಟಗಾರ ಧೋನಿಯಾಗಿದ್ದಾರೆ. ಧೋನಿ ಐಪಿಎಲ್ ಫೈನಲ್‌ನಲ್ಲಿ ಆಟಗಾರನಾಗಿ ಮತ್ತು ನಾಯಕನಾಗಿ ಅತಿ ಹೆಚ್ಚು ಪಂದ್ಯಗಳಲ್ಲಿ ಆಡಿದ ಏಕೈಕ ವ್ಯಕ್ತಿಯಾಗಿದ್ದಾರೆ.
Every time you stepped on to the field, you gave us butterflies pic.twitter.com/qMNXMR5IsS
— Chennai Super Kings (@ChennaiIPL) May 28, 2023
ಒಟ್ಟಾರೆ ಐಪಿಎಲ್ ಆವೃತ್ತಿಗಳಲ್ಲಿ ಈವರೆಗೆ ಮಹೇಂದ್ರ ಸಿಂಗ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರೈಸಿಂಗ್ ಪುಣೆ ಸೂಪರ್ ಜೈಂಟ್ ಪರ ಆಡಿದ್ದಾರೆ.
ಇದುವರೆಗೆ 249 ಪಂದ್ಯಗಳನ್ನಾಡಿರುವ ಎಂಎಸ್ ಧೋನಿ 217 ಇನ್ನಿಂಗ್ಸ್‌ಗಳಿಂದ 39.09 ಸರಾಸರಿ ಮತ್ತು 135.96 ಸ್ಟ್ರೈಕ್‌ರೇಟ್‌ನಲ್ಲಿ 5082 ರನ್ ಗಳಿಸಿದ್ದಾರೆ. ಇದುವರೆಗೂ 24 ಅರ್ಧಶತಕಗಳನ್ನು ಗಳಿಸಿದ್ದು, ಅಜೇಯ 84 ರನ್ ಗಳಿಸಿರುವುದು ಅವರ ಅತ್ಯಧಿಕ ವೈಯಕ್ತಿಕ ರನ್ ಆಗಿದೆ. ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಲ್ಲಿ ಅವರು 7 ನೇ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ: ಐಪಿಎಲ್ 2023: ಶುಬ್ಮನ್ ಗಿಲ್ ಶತಕ, ಫೈನಲ್ ಗೆ ಗುಜರಾತ್ ಟೈಟಾನ್ಸ್; ಚೆನ್ನೈ ವಿರುದ್ಧ ಮುಖಾಮುಖಿ
ಧೋನಿ ಚೆನ್ನೈ ಸೂಪರ್ ಕಿಂಗ್ಸ್ ಪರ 219 ಪಂದ್ಯಗಳನ್ನು ಆಡಿದ್ದಾರೆ. 190 ಇನಿಂಗ್ಸ್‌ಗಳಲ್ಲಿ 22 ಅರ್ಧಶತಕಗಳೊಂದಿಗೆ 4,508 ರನ್ ಗಳಿಸಿದ್ದಾರೆ. ಅವರ ಗರಿಷ್ಠ ಸ್ಕೋರ್ 84 ಆಗಿದೆ. 137.52 ಸ್ಟ್ರೈಕ್ ರೇಟ್‌ನೊಂದಿಗೆ ಅವರ ಬ್ಯಾಟಿಂಗ್ ಸರಾಸರಿ 40.25 ಆಗಿದೆ.
ರೈಸಿಂಗ್ ಪುಣೆ ಸೂಪರ್‌ಜೈಂಟ್‌ಗಾಗಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಧೋನಿ 2016-17ರ ನಡುವೆ 30 ಪಂದ್ಯಗಳನ್ನು ಆಡಿದ್ದಾರೆ. ಅವರು 27 ಇನಿಂಗ್ಸ್‌ಗಳಲ್ಲಿ 574 ರನ್ ಗಳಿಸಿದ್ದಾರೆ. ಆರ್‌ಪಿಎಸ್ ಪರ ಧೋನಿ ಎರಡು ಅರ್ಧಶತಕ ಬಾರಿಸಿದ್ದರು. ಅವರ ಗರಿಷ್ಠ ಸ್ಕೋರ್ 64 ಆಗಿದೆ. ಸ್ಟ್ರೈಕ್ ರೇಟ್ 124.78 ನೊಂದಿಗೆ ಅವರ ಬ್ಯಾಟಿಂಗ್ ಸರಾಸರಿ 31.89 ಆಗಿತ್ತು.
ಸಿಎಸ್‌ಕೆ ಮತ್ತು ಆರ್‌ಪಿಎಸ್‌ಗೆ ನಾಯಕನಾಗಿ, ಮಹೇಂದ್ರ ಸಿಂಗ್ ಧೋನಿ ತಮ್ಮ ತಂಡವನ್ನು 225 ಪಂದ್ಯಗಳಲ್ಲಿ ಮುನ್ನಡೆಸಿದ್ದಾರೆ. ಇದು ಐಪಿಎಲ್ ಇತಿಹಾಸದಲ್ಲಿ ಯಾವುದೇ ಆಟಗಾರನಿಗಿಂತ ಅತಿ ಹೆಚ್ಚು. ಅವರು 132 ಪಂದ್ಯಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದು, 91 ರಲ್ಲಿ ಸೋತಿದ್ದಾರೆ.
ಧೋನಿ ಸಿಎಸ್‌ಕೆ ಅನ್ನು ನಾಲ್ಕು ಐಪಿಎಲ್ ಪ್ರಶಸ್ತಿಗಳಿಗೆ ಮುನ್ನಡೆಸಿದ್ದಾರೆ. ಅವರು 2017 ರಲ್ಲಿ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ತಂಡದ ರನ್ನರ್ ಅಪ್ ವೇಳೆ ತಂಡದ ಭಾಗವಾಗಿದ್ದರು. ಅಲ್ಲಿ ಅವರು ಮುಂಬೈ ಇಂಡಿಯನ್ಸ್ ಎದುರು ಸೋಲು ಕಂಡಿದ್ದರು.
ಧೋನಿ 211 ಪಂದ್ಯಗಳಲ್ಲಿ ಸಿಎಸ್‌ಕೆ ತಂಡದ ನಾಯಕತ್ವ ವಹಿಸಿದ್ದಾರೆ. ಈ ಪೈಕಿ ಧೋನಿ 127 ಪಂದ್ಯಗಳನ್ನು ಗೆದ್ದಿದ್ದಾರೆ, 82 ರಲ್ಲಿ ಸೋತಿದ್ದಾರೆ ಮತ್ತು ಎರಡು ಪಂದ್ಯಗಳು ಫಲಿತಾಂಶವಿಲ್ಲದೆ ಕೊನೆಗೊಂಡಿವೆ.
ಇದನ್ನೂ ಓದಿ: ಐಪಿಎಲ್ 2023: ಗುಜರಾತ್ ವಿರುದ್ಧ ಚೆನ್ನೈಗೆ ಭರ್ಜರಿ ಗೆಲುವು, 10ನೇ ಬಾರಿ ಫೈನಲ್ ಪ್ರವೇಶಿಸಿದ ಸಿಎಸ್ ಕೆ
ಧೋನಿ 14 ಪಂದ್ಯಗಳಲ್ಲಿ ಆರ್‌ಪಿಜಿಯನ್ನು ಮುನ್ನಡೆಸಿದ್ದಾರೆ, ಅದರಲ್ಲಿ ಅವರು ಐದರಲ್ಲಿ ಗೆದ್ದಿದ್ದಾರೆ ಮತ್ತು ಒಂಬತ್ತು ಪಂದ್ಯಗಳಲ್ಲಿ ಸೋತಿದ್ದಾರೆ.
ಹಾರ್ದಿಕ್ ಪಾಂಡ್ಯ ನೇತೃತ್ವದ ಜಿಟಿ ಕಳೆದ ವರ್ಷ ಗೆದ್ದ ತಮ್ಮ ಪ್ರಶಸ್ತಿಯನ್ನು ಉಳಿಸಿಕೊಳ್ಳುವ ಗುರಿಯನ್ನು ಹೊಂದಿದೆ. ಆದರೆ, ಧೋನಿ ನೇತೃತ್ವದ ಸಿಎಸ್‌ಕೆ ತಮ್ಮ ಐದನೇ ಪ್ರಶಸ್ತಿಯನ್ನು ಗೆಲ್ಲುವ ಗುರಿಯನ್ನು ಹೊಂದಿದೆ. ವಿಶೇಷವಾಗಿ, ಅಂತಿಮ ಐಪಿಎಲ್ ಪಂದ್ಯವನ್ನು ಆಡುವ ತಮ್ಮ ನಾಯಕನಿಗೆ ಕಪ್ ಅರ್ಪಿಸುವ ತವಕದಲ್ಲಿದೆ. ಪಂದ್ಯಾವಳಿಯ ಆರಂಭದಿಂದಲೂ, ಧೋನಿ ಐಪಿಎಲ್‌ನಿಂದ ನಿವೃತ್ತಿ ಹೊಂದುತ್ತಾರೆ ಎಂದು ಅಭಿಮಾನಿಗಳು ಊಹಿಸಿದ್ದಾರೆ.