ಐಪಿಎಲ್ ಇತಿಹಾಸದಲ್ಲೇ ಫೈನಲ್ ನಲ್ಲಿ ದಾಖಲೆ ಬರೆದ ಗುಜರಾತ್ ಟೈಟನ್ಸ್

ಐಪಿಎಲ್ ಕ್ರಿಕೆಟ್ ಟೂರ್ನಿಯ ಹದಿನಾರನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಭರ್ಜರಿ ಬ್ಯಾಟಿಂಗ್ ಮೂಲಕ ಗುಜರಾತ್ ಟೈಟನ್ಸ್ ತಂಡ ದಾಖಲೆಯೊಂದನ್ನು ನಿರ್ಮಿಸಿದೆ.
ಗುಜರಾತ್ ಭರ್ಜರಿ ಬ್ಯಾಟಿಂಗ್
ಗುಜರಾತ್ ಭರ್ಜರಿ ಬ್ಯಾಟಿಂಗ್

ಅಹ್ಮದಾಬಾದ್: ಐಪಿಎಲ್ ಕ್ರಿಕೆಟ್ ಟೂರ್ನಿಯ ಹದಿನಾರನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಭರ್ಜರಿ ಬ್ಯಾಟಿಂಗ್ ಮೂಲಕ ಗುಜರಾತ್ ಟೈಟನ್ಸ್ ತಂಡ ದಾಖಲೆಯೊಂದನ್ನು ನಿರ್ಮಿಸಿದೆ.

ಹೌದು.. ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಫೈನಲ್ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ತಂಡ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 214 ರನ್ ಕಲೆಹಾಕಿತು. ಇದು ಐಪಿಎಲ್ ಇತಿಹಾಸದಲ್ಲೇ ಫೈನಲ್ ನಲ್ಲಿ ತಂಡವೊಂದು ಗಳಿಸಿದ ಗರಿಷ್ಠ ಸ್ಕೋರ್ ಆಗಿದೆ.

ಈ ಹಿಂದೆ 2016ರಲ್ಲಿ ಬೆಂಗಳೂರಿನಲ್ಲಿ ನಡೆದ ಸನ್ ರೈಸರ್ಸ್ ಹೈದರಾಬಾದ್ ಮತ್ತು ರಾಯಲ್ ಚಾಲೆಂಜರ್ಸ್ ನಡುವಿನ ಪಂದ್ಯದಲ್ಲಿ ಹೈದರಾಬಾದ್ ತಂಡ 208 ರನ್ ಗಳಿಸಿತ್ತು. ಇದು ಈ ವರೆಗಿನ ಐಪಿಎಲ್ ಫೈನಲ್ ನಲ್ಲಿ ತಂಡವೊಂದು ಗಳಿಸಿದ ಗರಿಷ್ಠ ಮೊತ್ತವಾಗಿತ್ತು. ಆದರೆ ಇಂದು ಈ ದಾಖಲೆಯನ್ನು ಗುಜರಾತ್ ತಂಡ ಹಿಂದಿಕ್ಕಿದೆ.

ಉಳಿದಂತೆ ಇದೇ ಟೂರ್ನಿ ಪ್ಲೇಆಫ್ ಹಂತದ 2ನೇ ಕ್ವಾಲಿಫಿಕೇಷನ್ ಪಂದ್ಯದಲ್ಲಿ ಇದೇ ಗುಜರಾತ್ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ 233 ರನ್ ಗಳಿಸಿತ್ತು. ಇದು ಐಪಿಎಲ್ ಇತಿಹಾಸದಲ್ಲಿ ಪ್ಲೇ ಆಫ್ ಹಂತದಲ್ಲಿ ದಾಖಲಾದ ತಂಡವೊಂದರ ಗರಿಷ್ಟ ಮೊತ್ತವಾಗಿದೆ. ಇದಕ್ಕೂ ಮೊದಲು 2014ರಲ್ಲಿ ಇದೇ ಮುಂಬೈ ವಿರುದ್ಧ ಪಂಜಾಬ್ ತಂಜ 226ರನ್ ಗಳಿಸಿದ್ದು ಈ ವರೆಗಿನ ಪ್ಲೇಆಫ್ ಹಂತದ ತಂಡವೊಂದರ ಗರಿಷ್ಟ ಮೊತ್ತವಾಗಿತ್ತು.

Highest team totals in IPL playoffs
233/3 - GT vs MI, Ahmedabad, 2023 Q2
226/6 - PBKS vs CSK, Mumbai WS, 2014 Q2
222/5 - CSK vs DC, Chennai, 2012 Q2
214/4 - GT vs CSK, Ahmedabad, 2023 Final
208/7 - SRH vs RCB, Bengaluru, 2016 Final

 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com