ICC Cricket World Cup 2023: ವಿಕೆಟ್ ಪಡೆದ ನಂತರ ನಮಾಜ್ ಮಾಡಲು ಹೋಗಿ ಅರ್ಧಕ್ಕೆ ನಿಲ್ಲಿಸಿದರೇ ಶಮಿ?, ಪಾಕಿಗರಿಂದ ಕುಚೋದ್ಯ!

ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನದ ಕಳಪೆ ಪ್ರದರ್ಶನದಿಂದ ಅಸಮಾಧಾನಗೊಂಡಿದ್ದ ಪಾಕಿಸ್ತಾನಿ ಅಭಿಮಾನಿಗಳು ಭಾರತದ ಗೆಲುವಿನ ಕುರಿತು ಕುಚೋದ್ಯ ಮಾಡುತ್ತಿದ್ದರು. ಆದರೆ ಗುರುವಾರ ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾ 302 ರನ್‌ಗಳಿಂದ ಐತಿಹಾಸಿಕ ಗೆಲುವು ಪಾಕಿಗರ ಬಾಯಿಮುಚ್ಚಿಸಿತ್ತು.
ಮೊಹಮ್ಮದ್ ಶಮಿ
ಮೊಹಮ್ಮದ್ ಶಮಿ

ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನದ ಕಳಪೆ ಪ್ರದರ್ಶನದಿಂದ ಅಸಮಾಧಾನಗೊಂಡಿದ್ದ ಪಾಕಿಸ್ತಾನಿ ಅಭಿಮಾನಿಗಳು ಭಾರತದ ಗೆಲುವಿನ ಕುರಿತು ಕುಚೋದ್ಯ ಮಾಡುತ್ತಿದ್ದರು. ಆದರೆ ಗುರುವಾರ ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾ 302 ರನ್‌ಗಳಿಂದ ಐತಿಹಾಸಿಕ ಗೆಲುವು ಪಾಕಿಗರ ಬಾಯಿಮುಚ್ಚಿಸಿತ್ತು. ಇದೀಗ ಈ ಗೆಲುವಿನಲ್ಲೂ ನ್ಯೂನತೆಗಳನ್ನು ಹುಡುಕತೊಡಗಿದ್ದಾರೆ. ಮೊಹಮ್ಮದ್ ಶಮಿ ವಿಕೆಟ್ ಪಡೆದ ನಂತರ ಮೈದಾನದಲ್ಲಿ ಮಂಡಿಯೂರಿದ ಬಗ್ಗೆ ಟೀಮ್ ಇಂಡಿಯಾವನ್ನು ಟ್ರೋಲ್ ಮಾಡಲು ಪ್ರಯತ್ನಿಸಿದರು.

ಪಾಕಿಸ್ತಾನಿ ಪತ್ರಕರ್ತರು ಮತ್ತು ಅಭಿಮಾನಿಗಳು ಶಮಿ ಅವರ ಈ ಕ್ಲಿಪ್ ಅನ್ನು ತೆಗೆದುಕೊಂಡು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಶಮಿ ಸಜ್ದಾ ಮಾಡಲು ಬಯಸಿದ್ದರು. ಆದರೆ ಅವರು ಭಾರತದಲ್ಲಿ ಇದ್ದಿದ್ದರಿಂದ ಹಾಗೆ ಮಾಡಲು ಸಾಧ್ಯವಾಗಲ್ಲಿಲ್ಲ ಎಂದು ಬರೆದುಕೊಳ್ಳುತ್ತಿದ್ದಾರೆ. ಟ್ವಿಟ್ಟರ್‌ನಲ್ಲಿ 'ಸಜ್ದಾ' ಟ್ರೆಂಡಿಂಗ್ ಆರಂಭಿಸಿದಾಗ, ಭಾರತೀಯ ಅಭಿಮಾನಿಗಳು ತಕ್ಕ ಉತ್ತರವನ್ನು ನೀಡಿದರು.

ಪಾಕಿಸ್ತಾನಿ ಅಭಿಮಾನಿ ಶಹರ್ಯಾರ್ ಇಜಾಜ್ ಟ್ವೀಟ್ ಮಾಡಿ ಹೀಗೆ ಬರೆದಿದ್ದಾರೆ - ಶಮಿ ಸಜ್ದಾ(ಮಂಡಿಯೂರಿ ದೇವರಿಗೆ ನಮಿಸುವುದು) ಮಾಡಲಿದ್ದರು. ಆದರೆ ಯಾಕೆ ಅರ್ಧಕ್ಕೆ ನಿಲ್ಲಿಸಿದರು? ಜಿನ್ನಾ, ನಮಗೆ ಸ್ವಾತಂತ್ರ್ಯ ನೀಡಿದಕ್ಕಾಗಿ ಧನ್ಯವಾದಗಳು ಎಂದು ಬರೆದುಕೊಂಡಿದ್ದು ಇದೇ ರೀತಿಯ ಟ್ವೀಟ್‌ಗಳನ್ನು ಇತರ ಪಾಕಿಸ್ತಾನಿ ಅಭಿಮಾನಿಗಳು ಕೂಡ ಮಾಡಿದ್ದಾರೆ. ಇದೀಗ ಭಾರತೀಯರಿಂದ ತಕ್ಕ ತಿರುಗೇಟು ಸಹ ಪಡೆದಿದ್ದಾರೆ.

ಭಾರತೀಯ ಅಭಿಮಾನಿಗಳು ನಮಗೆ ಶಮಿ ಮತ್ತು ಸಿರಾಜ್ ಮತ್ತು ಬಹುಶಃ ಕೊಹ್ಲಿ, ಬುಮ್ರಾ (ಪಂಜಾಬಿ ಹಿಂದೂ) ಮತ್ತು ನಂಬರ್ 1 ತಂಡ ಮತ್ತು 5ನೇ ಅತಿದೊಡ್ಡ ಆರ್ಥಿಕತೆಯನ್ನು ನೀಡಿದ ಜಿನ್ನಾ ಅವರಿಗೆ ಧನ್ಯವಾದಗಳು..

ಮತ್ತೊಬ್ಬ ಬಳಕೆದಾರ ಸೌರಭ್ ಸನ್ಯಾಲ್ ಅವರು, ಹೇ ನಾಚಿಕೆಯಿಲ್ಲದ ಮನಸ್ಥಿತಿಯೇ, ಶಮಿ ಕೂಡ ನಿನ್ನ ಕೊಳಕು ಮನಸ್ಸಿನ ಮೇಲೆ ಕರುಣೆ ತೋರುತ್ತಾನೆ ಎಂದು ಬರೆದುಕೊಂಡಿದ್ದಾರೆ. ಇನ್ನೊಬ್ಬರು ಬಳಕೆದಾರ ಫರ್ಹಾನ್ ಶೇಕ್, ಅಣ್ಣಾ, ಶಮಿ ಸಜ್ದಾವನ್ನು ನಿರ್ವಹಿಸುತ್ತಿಲ್ಲ. ಎಲ್ಲದಕ್ಕೂ ಅಪಪ್ರಚಾರ ಮಾಡಬೇಡಿ ಎಂದು ಬರೆದುಕೊಂಡಿದ್ದಾರೆ.

ವಿರಾಟ್ ಕೊಹ್ಲಿ ಮಂಡಿಯೂರಿ ಕುಳಿತಿರುವ ಫೋಟೋವನ್ನು ಶೇರ್ ಮಾಡುವ ಮೂಲಕ ಬಳಕೆದಾರರೊಬ್ಬರು ಸೂಕ್ತ ಉತ್ತರ ನೀಡಿದ್ದಾರೆ.

ಸಜ್ದಾ ಎಂದರೇನು?
ಪ್ರಾರ್ಥನೆಯ ಸಮಯದಲ್ಲಿ ಮಂಡಿಯೂರಿ ಸಜ್ದಾವನ್ನು ನಡೆಸಲಾಗುತ್ತದೆ. ಇದು ಪ್ರಾರ್ಥನೆ ಮಾಡುವಾಗ ತಲೆ ಬಗ್ಗಿಸುವ ಪ್ರಕ್ರಿಯೆಯಾಗಿದ್ದು, ಅಲ್ಲಾಹನ ಮೇಲಿನ ಭಾವನೆಗಳನ್ನು ವ್ಯಕ್ತಪಡಿಸಲು ಮಾಡಲಾಗುತ್ತದೆ. ಇದರಲ್ಲಿ ಹಣೆ, ಮೂಗು, ಕೈ, ಮೊಣಕಾಲು ಮತ್ತು ಕಾಲ್ಬೆರಳುಗಳು ನೆಲಕ್ಕೆ ತಾಗುತ್ತವೆ.

ಮೊಹಮ್ಮದ್ ಸಿರಾಜ್ ಮತ್ತು ಮೊಹಮ್ಮದ್ ಶಮಿ ಅವರ ಮಾರಕ ಬೌಲಿಂಗ್ ಟೀಂ ಇಂಡಿಯಾ 302 ರನ್‌ಗಳ ದಾಖಲೆಯ ಗೆಲುವು ದಾಖಲಿಸಿತ್ತು. ಶಮಿ-ಸಿರಾಜ್ ಅವರ ಅಪಾಯಕಾರಿ ಬೌಲಿಂಗ್ ಶ್ರೀಲಂಕಾವನ್ನು 55 ರನ್‌ಗಳಿಗೆ ಮುಗ್ಗರಿಸಿತ್ತು. ಮೊಹಮ್ಮದ್ ಶಮಿ 5 ಓವರ್ ಗಳಲ್ಲಿ 18 ರನ್ ನೀಡಿ 3 ವಿಕೆಟ್ ಪಡೆದರೆ, ಮೊಹಮ್ಮದ್ ಸಿರಾಜ್ 7 ಓವರ್ ಗಳಲ್ಲಿ 16 ರನ್ ನೀಡಿ 3 ವಿಕೆಟ್ ಪಡೆದರು. ಏಳು ಪಂದ್ಯಗಳಲ್ಲಿ ಏಳು ಗೆಲುವು ಸಾಧಿಸಿರುವ ಟೀಂ ಇಂಡಿಯಾ ಅಜೇಯ ಮುನ್ನಡೆಯೊಂದಿಗೆ ಸೆಮಿಫೈನಲ್ ಪ್ರವೇಶಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com