ಭಾರತ DRS ತಿರುಚಿದೆ: ಮಾಜಿ ಪಾಕ್ ಮಾಜಿ ಕ್ರಿಕೆಟಿಗ ಹಸನ್ ರಾಜಾ ಆರೋಪ!

ಈಡೆನ್ ಗಾರ್ಡನ್ ನಲ್ಲಿ ನೆನ್ನೆ ನಡೆದ ಪಂದ್ಯದಲ್ಲಿ ಭಾರತ ದಕ್ಷಿಣ ಆಫ್ರಿಕಾ ವಿರುದ್ಧ ಭರ್ಜರಿ ಜಯ ಗಳಿಸಿತ್ತು. 
ಡಿಆರ್ ಎಸ್ (ಸಂಗ್ರಹ ಚಿತ್ರ)
ಡಿಆರ್ ಎಸ್ (ಸಂಗ್ರಹ ಚಿತ್ರ)

ಇಸ್ಲಾಮಾಬಾದ್: ಈಡೆನ್ ಗಾರ್ಡನ್ ನಲ್ಲಿ ನೆನ್ನೆ ನಡೆದ ಪಂದ್ಯದಲ್ಲಿ ಭಾರತ ದಕ್ಷಿಣ ಆಫ್ರಿಕಾ ವಿರುದ್ಧ ಭರ್ಜರಿ ಜಯ ಗಳಿಸಿತ್ತು. 

ಕ್ರಿಕೆಟ್ ಪ್ರೇಮಿಗಳಿಂದ ಭಾರತಕ್ಕೆ ಪ್ರಶಂಸೆಗಳ ಮಹಾಪೂರವೇ ಹರಿದುಬರುತ್ತಿರುವಾಗ ಪಾಕ್ ನ ಮಾಜಿ ಕ್ರಿಕೆಟಿಗ ಹಸನ್ ರಾಜಾ ಅಂಥಹವರು ಅಲ್ಲಿಯೂ ಹುಳುಕು ಹುಡುಕುವುದಕ್ಕೆ ಮುಂದಾಗಿದ್ದಾರೆ. 

ಪಂದ್ಯ ತಮ್ಮ ಮೂಗಿನ ನೇರಕ್ಕೆ ಆಗುವಂತೆ ಭಾರತ ಕ್ರಿಕೆಟ್ ತಂಡ ಡಿಆರ್ ಎಸ್ ನ್ನು ತಿರುಚುತ್ತಿದೆ ಎಂದು ಹಸನ್ ರಾಜಾ ಆರೋಪಿಸಿದ್ದಾರೆ.

ಪಾಕ್ ಟಿವಿ ಚಾನಲ್ ಒಂದರ ಚರ್ಚೆಯಲ್ಲಿ ಭಾಗಿಯಾಗಿದ್ದ ರಾಜಾ, ಈ ಟೂರ್ನಿಯಲ್ಲಿ ಡಿಆರ್ ಎಸ್ ತಿರುಚಿರುವುದು ಭಾರತದ ಯಶಸ್ಸಿನ ಪ್ರಮುಖ ಅಂಶವಾಗಿದೆ ಎಂದು ಆರೋಪಿಸಿರುವುದಷ್ಟೇ ಅಲ್ಲದೇ, ತಮ್ಮ ಆರೋಪವನ್ನು ಸಮರ್ಥಿಸಿಕೊಳ್ಳುವುದಕ್ಕೆ ದಕ್ಷಿಣ ಆಫ್ರಿಕಾದ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ವಿಕೆಟ್ ತೆಗೆದಿದ್ದನ್ನು ಉದಾಹರಣೆಯನ್ನಾಗಿ ನೀಡಿದ್ದಾರೆ.

ಜಡೇಜಾ 5 ವಿಕೆಟ್ ಗಳಿಸಿ, ಪಂದ್ಯವೊಂದರಲ್ಲಿ 5 ವಿಕೆಟ್ ಗಳಿಸಿದ 2 ನೇ ಬೌಲರ್ ಎಂಬ ಖ್ಯಾತಿ ಪಡೆದರು. ನಾವು ಡಿಆರ್ ಎಸ್ ಎಂಬ ತಂತ್ರಜ್ಞಾನದ ಬಗ್ಗೆ ಮಾತನಾಡುತ್ತಿದ್ದೇವೆ. ದಕ್ಷಿಣ ಆಫ್ರಿಕಾ ಆಟಗಾರ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಬ್ಯಾಟಿಂಗ್ ಮಾಡುತ್ತಿದ್ದಾಗ ಚೆಂಡು ಲೆಗ್ ಸ್ಟಂಪ್ ಮೇಲೆ ಬಿದ್ದು, ಆ ಬಳಿಕ ಮಧ್ಯದ ಸ್ಟಂಪ್ ಗೆ ತಾಗುತಿತ್ತು. ಇದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

ಇಂಪ್ಯಾಕ್ಟ್ ಲೈನ್ ಮೇಲೆ ಇತ್ತು ಆದರೆ ಚೆಂಡು ಲೆಗ್ ಸ್ಟಂಪ್ ಕಡೆಗೆ ತಿರುಗಿತ್ತು. ಬೇರೆಯವರಂತೆಯೇ ನಾನು ನನ್ನ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದೇನೆ. ಇಂತಹ ವಿಷಯಗಳನ್ನು ಪರಿಶೀಲಿಸಬೇಕೆಂದು ಹೇಳುತ್ತಿದ್ದೇನೆ. ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ವಿಷಯದಲ್ಲಿ ಡಿಆರ್ ಎಸ್ ನ್ನು ತಿರುಚಲಾಗಿದ್ದು ಸ್ಪಷ್ಟವಾಗಿತ್ತು ಎಂದು ಪಾಕ್ ನ ಎಬಿಎನ್ ಚಾನಲ್ ನಲ್ಲಿ ರಾಜ ಹೇಳಿದ್ದಾರೆ.

ಪಾಕ್ ವಿರುದ್ಧದ ಪಂದ್ಯದಲ್ಲೂ ಭಾರತ ಡಿಆರ್ ಎಸ್ ನ್ನು ತಿರುಚಿದೆ ಎಂದು ರಾಜಾ ಆರೋಪಿಸಿದ್ದಾರೆ. 

ಇದು ಮೊದಲೇನಲ್ಲ. ಪಾಕ್- ದಕ್ಷಿಣ ಆಫ್ರಿಕಾ ನಡುವಿನ ಪಂದ್ಯದ ರಿವ್ಯೂ ನಲ್ಲಿ, ಕೊನೆಯ ವಿಕೆಟ್ ಜೊತೆಯಾಟದಲ್ಲೂ ಹೀಗೆಯೇ ಆಗಿತ್ತು. ತವರಲ್ಲಿನ ಪರಿಸ್ಥಿತಿಗಳು ಹಾಗೂ ಅನುಕೂಲಗಳು ಕಾರ್ಯರೂಪಕ್ಕೆ ಬರುತ್ತವೆ ಎಂದು ರಾಜಾ ಮಾರ್ಮಿಕವಾಗಿ ಭಾರತದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. 

ಸಚಿನ್ ತೆಂಡೂಲ್ಕರ್, ಸಜೀದ್ ಅಜ್ಮಲ್ ಅವರನ್ನೊಳಗೊಂಡ 2011 ರ ವಿಶ್ವಕಪ್ ಪಂದ್ಯದಲ್ಲಿಯೂ ಭಾರತ ಡಿಆರ್ ಎಸ್ ನ್ನು ತಿರುಚಿತ್ತು, ಭಾರತದ ಗೆಲುವಿನ ನಾಗಾಲೋಟದ ಹಿಂದೆ ತವರು ನೆಲದ ಅನುಕೂಲಗಳಿವೆ ಎಂದು ಹಸನ್ ರಾಜಾ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com