ಐಸಿಸಿ ವಿಶ್ವಕಪ್ ಕ್ರಿಕೆಟ್: ಭಾರತ ಸೋಲಿಸಲು ಬಾಂಗ್ಲಾ ಕ್ರಿಕೆಟಿಗರಿಗೆ ಡೇಟಿಂಗ್ ಆಫರ್ ನೀಡಿದ ಪಾಕ್ ನಟಿ!
ಪುಣೆ: ಪುಣೆಯ ಎಂಸಿಎ ಕ್ರೀಡಾಂಗಣದಲ್ಲಿ ಇಂದು ಮಧ್ಯಾಹ್ನ ನಡೆಯಲಿರುವ ವಿಶ್ವಕಪ್ 2023ರ 17ನೇ ಪಂದ್ಯದಲ್ಲಿ ಭಾರತ- ಬಾಂಗ್ಲಾದೇಶವನ್ನು ಎದುರಿಸಲಿದೆ. ಈ ವಿಶ್ವಕಪ್‌ನಲ್ಲಿ ಸೋಲನ್ನು ಕಾಣದ ಎರಡು ತಂಡಗಳಲ್ಲಿ ಭಾರತ ಕೂಡಾ ಒಂದಾಗಿದೆ. ಭಾರತ ಹಿಂದಿನ ಪಂದ್ಯದಲ್ಲಿ ಪಾಕಿಸ್ತಾನವನ್ನು 7 ವಿಕೆಟ್ ಗಳಿಂದ ಹೀನಾಯವಾಗಿ ಸೋಲಿಸಿದ ನಂತರ ಹಲವು ಪಾಕ್ ಹೃದಯಗಳನ್ನು ಒಡೆದಿದೆ. ಹೀಗಾಗಿ ಇಂದು ನಡೆಯಲಿರುವ ಪಂದ್ಯದಲ್ಲಿ ಭಾರತವನ್ನು ಸೋಲಿಸಬೇಕೆಂದು ಬಾಂಗ್ಲಾದೇಶವನ್ನು ಹುರಿದುಂಬಿಸುತ್ತಿದ್ದಾರೆ.
ಅದರಲ್ಲೂ ಇತ್ತೀಚಿಗೆ ಆಗಾಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುವ ಪಾಕಿಸ್ತಾನದ ನಟಿ ಸೆಹರ್ ಶಿನ್ವಾರಿ, ಇಂದಿನ ಪಂದ್ಯದಲ್ಲಿ ಭಾರತವನ್ನು ಸೋಲಿಸಿದರೆ ಬಾಂಗ್ಲಾದೇಶದ ಕ್ರಿಕೆಟಿಗರೊಂದಿಗೆ ಡೇಟಿಂಗ್‌ಗೆ ಹೋಗುವುದಾಗಿ ಭರವಸೆ ನೀಡಿದ್ದಾರೆ. ಪಾಕಿಸ್ತಾನ ಸೋಲಿನಿಂದ ಕೋಪಗೊಂಡ ಮತ್ತು ಹತಾಶೆಗೊಂಡಿರುವ ಸೆಹರ್ ಬಾಂಗ್ಲಾದೇಶವನ್ನು ಹುರಿದುಂಬಿಸುತ್ತಿದ್ದಾರೆ ಮತ್ತು ಟೈಗರ್ಸ್ ಭಾರತಕ್ಕೆ ಇದೇ ರೀತಿಯ ಸೋಲನ್ನು ನೀಡಬೇಕೆಂದು ಬಯಸಿದ್ದಾರೆ.
“ಇನ್ಶಾ ಅಲ್ಲಾಹ್ ನನ್ನ ಬಂಗಾಳಿ ಬಂಧು ಮುಂದಿನ ಪಂದ್ಯದಲ್ಲಿ ಸೇಡು ತೀರಿಸಿಕೊಳ್ಳುತ್ತಾರೆ. ಅವರ ತಂಡ ಭಾರತವನ್ನು ಸೋಲಿಸುವಲ್ಲಿ ಯಶಸ್ವಿಯಾದರೆ ನಾನು ಢಾಕಾಕ್ಕೆ ಹೋಗಿ ಬಂಗಾಳಿ ಹುಡುಗರೊಂದಿಗೆ ಮೀನಿನ ಊಟ ಮಾಡುತ್ತೇನೆ ಎಂದು ಸಹೆರ್ ಟ್ವೀಟ್ ಮಾಡಿದ್ದಾರೆ.
ಈಕೆ ಕ್ರಿಕೆಟ್ ಕುರಿತು ಟ್ವೀಟ್ ಮಾಡಿ ಸುದ್ದಿಯಾಗುತ್ತಿರುವುದು ಇದೇ ಮೊದಲಲ್ಲ. ಏಷ್ಯಾಕಪ್‌ನಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಸೋಲನುಭವಿಸಿದಾಗಲೂ ಬಾಬರ್ ಅಜಮ್ ಮತ್ತು ಆತನ ತಂಡದ ವಿರುದ್ಧ ಎಫ್‌ಐಆರ್ ದಾಖಲಿಸಲು ಸೆಹರ್ ಬಯಸಿದ್ದರು.
"ಬಾಬರ್ ಅಜಮ್ ಮತ್ತು ಆತನ ತಂಡದ ವಿರುದ್ಧ ಎಫ್‌ಐಆರ್ ದಾಖಲಿಸುತ್ತೇನೆ. ಏಕೆಂದರೆ ಈ ಹುಡುಗರು ಯಾವಾಗಲೂ ಕ್ರಿಕೆಟ್ ಆಡುವ ಬದಲು ನಮ್ಮ ರಾಷ್ಟ್ರೀಯ ಭಾವನೆಗಳೊಂದಿಗೆ ಆಡುತ್ತಾರೆ ಎಂದು ಸೆಹರ್ ಬರೆದುಕೊಂಡಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ